ಹಲ್ಲೆಯ ವಿಡಿಯೋ, ಸಿಸಿಟಿವಿ ದೃಶ್ಯ; ದರ್ಶನ್ ವಿರುದ್ಧ ಸಿಕ್ಕ ಪ್ರಬಲ ಸಾಕ್ಷಿಗಳೇನು?

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ2 ಆಗಿರುವ ದರ್ಶನ್​ ಈಗ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಈ ಕೇಸ್​ನ ತನಿಖೆ ಕೊನೇ ಹಂತಕ್ಕೆ ಬಂದಿದೆ. ಬೆಂಗಳೂರು ಪೊಲೀಸರು ಇನ್ನು ಎರಡೇ ದಿನದಲ್ಲಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಿದ್ದಾರೆ. ಅವರ ವಿರುದ್ಧ ಪ್ರಮುಖ ಸಾಕ್ಷಿಗಳು ಸಿಕ್ಕಿವೆ.

ಹಲ್ಲೆಯ ವಿಡಿಯೋ, ಸಿಸಿಟಿವಿ ದೃಶ್ಯ; ದರ್ಶನ್ ವಿರುದ್ಧ ಸಿಕ್ಕ ಪ್ರಬಲ ಸಾಕ್ಷಿಗಳೇನು?
ದರ್ಶನ್
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 04, 2024 | 8:00 AM

ನಟ ದರ್ಶನ್​ಗೆ ರೇಣುಕಾ ಸ್ವಾಮಿ ಕೊಲೆ ಕೇಸ್ ಪ್ರಕರಣ ಕಂಟಕವಾಗಿದೆ. ಈಗಾಗಲೇ ಅವರು ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲ್​ಗೆ ಶಿಫ್ಟ್ ಆಗಿದ್ದಾರೆ. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಅನಾರೋಗ್ಯ ಸಮಸ್ಯೆ ಕೂಡ ಕಾಡಿದೆ. ಈ ಮಧ್ಯೆ ಪೊಲೀಸರು ಚಾರ್ಜ್​ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು (ಸೆಪ್ಟೆಂಬರ್ 4) ಅಥವಾ ನಾಳೆ (ಸೆಪ್ಟೆಂಬರ್ 5) ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಆಗಲಿದೆ. ಈ ಮಧ್ಯೆ ದರ್ಶನ್ ವಿರುದ್ಧವಾಗಿ ಪ್ರಬಲ ಸಾಕ್ಷಿಗಳೇ ಲಭ್ಯವಾಗಿವೆ.

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದು, ಅವರನ್ನು ಹತ್ಯೆ ಮಾಡಿ, ಬೇರೆಯವರನ್ನು ಕೇಸ್​ನಲ್ಲಿ ಸರೆಂಡರ್ ಮಾಡಿಸೋ ತನಕ ಪ್ರತಿ ಹಂತದಲ್ಲಿ ದರ್ಶನ್ ಪಾತ್ರದ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ, ದರ್ಶನ್ ಪಾತ್ರದ ಬಗ್ಗೆ ಸಾಕ್ಷ್ಯಗಳ ಸಮೇತ ಚಾರ್ಜ್​ಶೀಟ್​ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಹಾಗಾದರೆ ದರ್ಶನ್ ವಿರುದ್ಧ ಸಿಕ್ಕಿರುವ ಸಾಕ್ಷ್ಯಗಳು ಏನು? ಆ ಬಗ್ಗೆ ಇಲ್ಲಿದೆ ವಿವರ.

  1. ಪವನ್​ಗೆ ಹೇಳಿ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕರೆಸಿದ್ದು ದರ್ಶನ್ ಅನ್ನೋದು ಗೊತ್ತಾಗಿದೆ. ಪವನ್ ಸೂಚನೆಯಂತೆ ರಾಘವೇಂದ್ರ, ರೇಣುಕಾಸ್ವಾಮಿ ಕಿಡ್ನಾಪ್ ಮಾಡಿಸಿದ್ದರು.
  2. ದರ್ಶನ್ ಬಟ್ಟೆಯ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ ಆಗಿವೆ. ಇದು ಪ್ರಮುಖ ಸಾಕ್ಷಿ ಆಗಲಿದೆ.
  3. ಪಬ್​ನಲ್ಲಿ ಕುಳಿತಿದ್ದು, ನಂತರ ಪವಿತ್ರಾ ಮನೆಗೆ ಹೋಗಿದ್ದ ದೃಶ್ಯಗಳು ಲಭ್ಯವಾಗಿವೆ. ಪವಿತ್ರಾರ ಕರೆದುಕೊಂಡು ಪಟ್ಟಣಗೆರೆ ಶೆಡ್​ಗೆ ದರ್ಶನ್ ಹೊಗಿದ್ದರು. ಶೆಡ್​ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ಆ ಬಳಿಕ ದರ್ಶನ್​ ಪಬ್​ಗೆ ಬಂದಿದ್ದ ಬಗ್ಗೆ ಸಾಕ್ಷಿ ಇದೆ.
  4. ಪಬ್​ನಲ್ಲಿ ಇರುವಾಗ ರೇಣುಕಾಸ್ವಾಮಿ ಫೋಟೋ ದರ್ಶನ್​ಗೆ ಬಂದಿತ್ತು. ಆ ಬಳಿಕ ದರ್ಶನ್ ಮತ್ತೆ ಪಬ್​ನಿಂದ ಪಟ್ಟಣಗೆರೆ ಶೆಡ್​ಗೆ ಹೋಗಿದ್ದಕ್ಕೆ ಸಾಕ್ಷ್ಯ ಸಿಕ್ಕಿದೆ. ಆ ಬಳಿಕ RR ನಗರ ಮನೆಗೆ ಬಂದು ಬಟ್ಟೆ ಬದಲಿಸಿದ್ದರು ದರ್ಶನ್.
  5. ಬೆಳಿಗ್ಗೆ ಬನಶಂಕರಿಯ ವಿಜಯಲಕ್ಷ್ಮಿ ಮನೆಗೆ ಹೋಗಿದ್ದರು. ವಿಜಯಲಕ್ಷ್ಮಿ ಮನೆಯಲ್ಲಿ ಪೂಜೆಯಲ್ಲಿ ಭಾಗಿಯಾಗಿದ್ದರು. ವಿಜಯಲಕ್ಷ್ಮಿ ಮನೆಯಲ್ಲಿ  ದರ್ಶನ್ ಶೂ ಬಿಟ್ಟು ಹೋಗಿದ್ದರು. ನಂತರ ಮೈಸೂರಿನ ಫಾರ್ಮ್ ಹೌಸ್​ಗೆ ಹೋಗಿ ಅಲ್ಲಿಂದ ಹೋಟೆಲ್​ಗೆ ತೆರಳಿದ್ದರು. ಇದಕ್ಕೂ ಸಾಕ್ಷಿ ಸಿಕ್ಕಿದೆ.
  6. ಹೋಟೆಲ್​ನಿಂದ ಶೂಟಿಂಗ್​ಗೆ ಹೋಗಿದ್ದರು. ಆ ಬಳಿಕ ಮತ್ತೆ ಹೋಟೆಲ್​ಗೆ ಬಂದಿದ್ದರು. ದರ್ಶನ್ ಓಡಾಟದ ಸಿಸಿಟಿವಿ, ಟವರ್ ಲೊಕೇಷನ್ ತನಿಖೆಯಲ್ಲಿ ಸಿಕ್ಕಿವೆ.
  7. ಸಿಸಿಟಿವಿ ದೃಶ್ಯಗಳಿಗೂ ಟವರ್ ಲೊಕೇಷನ್​ಗಳೀಗೂ ಮ್ಯಾಚ್ ಆಗಿದೆ. ಪ್ರತಿ ಹಂತದಲ್ಲೂ ದರ್ಶನ್ ನೋಡಿದ್ದ ಐ ವಿಟ್ನೇಸ್ ಹೇಳಿಕೆಗಳು. ನಟ ಚಿಕ್ಕಣ್ಣ ಸೇರಿದಂತೆ ಅನೇಕ ಸಾಕ್ಷಿಗಳ ಹೇಳಿಕೆಗಳು ಉಲ್ಲೇಖ ಮಾಡಲಾಗಿದೆ.
  8. ದರ್ಶನ್ ವಿರುದ್ಧ ಆರೋಪಿಯೊಬ್ಬ ಹೇಳಿಕೆ ನೀಡಿದ್ದಾನೆ. ಪ್ರದೋಶ್ ಮೊಬೈಲ್​ನಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೋ ಇತ್ತು. ಫೋನ್ ಕಾಲ್, ಚಾಟಿಂಗ್​ನಲ್ಲಿ ಸಂಚಿನ ಬಗ್ಗೆ ಮಾಹಿತಿ ಸಿಕ್ಕಿದೆ. ಸರೆಂಡರ್ ಮಾಡಿಸಲು ಮನವೊಲಿಸಿದ್ದು, ಹಣ ಕೊಟ್ಟಿದ್ದು ದೃಢವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ
ಗೂಳಿ ದಾಳಿಗೆ ವೃದ್ಧನ ಹೊಟ್ಟೆಯಿಂದ ಹೊರಬಂದ ಕರುಳು; ಸಿಸಿಟಿವಿ ದೃಶ್ಯ
ಗೂಳಿ ದಾಳಿಗೆ ವೃದ್ಧನ ಹೊಟ್ಟೆಯಿಂದ ಹೊರಬಂದ ಕರುಳು; ಸಿಸಿಟಿವಿ ದೃಶ್ಯ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ