ರಾಷ್ಟ್ರಗೀತೆಗೆ ಸ್ಪೆಷಲ್ ಟ್ಯೂನ್ ಟಚ್ ಕೊಟ್ಟ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್, ಆಗಸ್ಟ್ 15ಕ್ಕೆ ಬಿಡುಗಡೆ

|

Updated on: Aug 11, 2023 | 11:03 PM

Ricky Kej: ಬೆಂಗಳೂರಿನ ಹೆಮ್ಮೆಯ ಸಂಗೀತ ನಿರ್ದೇಶಕ, ಮೂರು ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್, ರಾಷ್ಟ್ರಗೀತೆಯನ್ನು ಹೊಸ ಟಚ್​ ಜೊತೆಗೆ ರೆಕಾರ್ಡ್ ಮಾಡಿದ್ದು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದ್ದಾರೆ.

ರಾಷ್ಟ್ರಗೀತೆಗೆ ಸ್ಪೆಷಲ್ ಟ್ಯೂನ್ ಟಚ್ ಕೊಟ್ಟ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್, ಆಗಸ್ಟ್ 15ಕ್ಕೆ ಬಿಡುಗಡೆ
ರಿಕ್ಕಿ ಕೇಜ್
Follow us on

ರಿಕ್ಕಿ ಕೇಜ್ (Ricky Kej) ಕೇವಲ ಕರ್ನಾಟಕದ ಮಾತ್ರವಲ್ಲ ಭಾರತದ ಹೆಮ್ಮೆಯ ಸಂಗೀತ ನಿರ್ದೇಶಕ ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಗಮನ ಸೆಳೆಯುವುದು ತಮ್ಮ ಭಿನ್ನತೆಯಿಂದ. ಆಧುನಿಕ ಸಂಗೀತ ವಿಧಾನವನ್ನು ಸಾಂಪ್ರದಾಯಿಕ ಹಾಗೂ ಜನಪದದೊಟ್ಟಿಗೆ ಬೆರೆಸಿ ಪ್ರಸ್ತುತ ಪಡಿಸುವ ಅವರ ಪ್ರಯೋಗಗಳು ಕೇಳುಗರ ಮಂತ್ರಮುಗ್ಧಗೊಳಿಸಿವೆ. ಸದಾ ಕ್ರೀಯಾಶೀಲರಾಗಿರುವ ರಿಕ್ಕಿ ಕೇಜ್, ಇದೀಗ ಹೊಸ ಪ್ರಯೋಗವೊಂದಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.

ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿರುವ ಸಂಗೀತ ನಿರ್ದೇಶಕ ಮತ್ತು ಪರಿಸರವಾದಿಯೂ ಆಗಿರುವ ರಿಕ್ಕಿ ಕೇಜ್ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಜನಗಣಮನ ಎಂದಾರಂಭವಾಗುವ ನಮ್ಮ ರಾಷ್ಟ್ರಗೀತೆಗೆ ಹೊಸ ಬಗೆಯ ಟ್ಯೂನ್ ಮೂಲಕ ಹೊಸ ಟಚ್ ನೀಡಲು ಮುಂದಾಗಿದ್ದಾರೆ. ನಮ್ಮ ರಾಷ್ಟ್ರಗೀತೆಗೆ ಹೊಸ ಬಗೆಯ ಟಚ್ ಅನ್ನು ನೀಡಿ ರೆಕಾರ್ಡ್ ಮಾಡಲಾಗಿದ್ದು, ಸ್ವಾತಂತ್ರ್ಯ ದಿನದ ಹಿಂದಿನ ದಿನ ಅಂದರೆ ಆಗಸ್ಟ್ 14ರಂದು ಸಂಜೆ 5 ಗಂಟೆ ರಿಕ್ಕಿ ಕೇಜ್ ಸಾರಥ್ಯದ ವಿಭಿನ್ನ ಬಗೆಯ ರಾಷ್ಟ್ರಗೀತೆ ಬಿಡುಗಡೆ ಆಗಲಿದೆ.

ಹಾಡಿನ ಮತ್ತೊಂದು ವಿಶೇಷತೆ ಏನೆಂದರೆ ಭಾರತವನ್ನು ನಾಲ್ಕು ನೂರು ವರ್ಷಗಳ ಕಾಲ ಆಳಿದ ಬ್ರಿಟೀಷರ ನೆಲದಲ್ಲಿಯೇ ಅಂದರೆ ಲಂಡನ್​ನಲ್ಲಿಯೇ ಅಬ್ಬೆ ರೋಡ್​ನ ಸ್ಟುಡಿಯೋ ಒಂದರಲ್ಲಿ ನಮ್ಮ ರಾಷ್ಟ್ರಗೀತೆಯನ್ನು ಹೊಸ ವಿಧವಾದ ಸಂಗೀತದೊಂದಿಗೆ ರೆಕಾರ್ಡ್ ಮಾಡಲಾಗಿದೆ. ಕೇವಲ 3 ಗಂಟೆ ಸಮಯದಲ್ಲಿ 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಸಹಯೋಗದಲ್ಲಿ ಜನಗಣಮನ ಹೊಸ ರೀತಿಯಲ್ಲಿ ಸಿದ್ಧವಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ರಿಕ್ಕಿ ಕೇಜ್ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:Ricky Kej: ಬೆಂಗಳೂರು ಮೂಲದ ರಿಕ್ಕಿ ಕೇಜ್​ಗೆ ಗ್ರ್ಯಾಮಿ ಅವಾರ್ಡ್​; 3 ಬಾರಿ ಪ್ರಶಸ್ತಿ ಗೆದ್ದ ಭಾರತೀಯ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಕ್ಕಿ ಕೇಜ್, ”ರಾಷ್ಟ್ರಗೀತೆ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್ ಕೊಡಲಾಗಿದೆ. ಹೊಸ ಬಗೆಯ ರಾಷ್ಟ್ರಗೀತೆ ಬಿಡುಗಡೆ ಮಾಡಲು, ಜನರಿಗೆ ಅದನ್ನು ಕೇಳಿಸಲು ನಾನು ಕಾಯುತ್ತಿದ್ದೇನೆ. ಲಂಡನ್ ಮೂಲದ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದ ಸಹಯೋಗದಲ್ಲಿ ಈ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಿದ್ದೇನೆ. ಈ ಹಿಂದೆ ನಮ್ಮ ದೇಶವನ್ನಾಳಿದ ಬ್ರಿಟಿಷರ ನೆಲದಲ್ಲಿಯೇ 100 ಮಂದಿ ಸಿಬೋನಿಕ್ ಸಂಗೀತಗಾರರ ಸಹಾಯದಿಂದ ಭಾರತದ ರಾಷ್ಟ್ರಗೀತೆ ಹೊಸ ವಿಧಾಣದಲ್ಲಿ ಸಿದ್ಧವಾಗಿದೆ ಎಂದು ಖುಷಿ ಹಂಚಿಕೊಂಡರು.

ರಿಕ್ಕಿ ಕೇಜ್ ಬೆಂಗಳೂರಿನವರೇ ಆಗಿದ್ದು ರಿಕ್ಕಿ ಅವರಿಗೆ ಮೂರು ಬಾರಿ ಗ್ರ್ಯಾಮಿ ದೊರೆತಿದ್ದು ಮೂರು ಬಾರಿ ನಾಮಿನೇಟ್ ಆಗಿದ್ದಾರೆ. ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತ ಸಂಗೀತಗಾರರೊಟ್ಟಿಗೆ ರಿಕ್ಕಿ ಕೇಜ್ ಕೆಲಸ ಮಾಡಿದ್ದು ಹಲವು ಅತ್ಯದ್ಭುತ ಆಲ್ಬಂಗಳನ್ನು ಹೊರತಂದಿದ್ದಾರೆ. ಬಹಳ ಕಡಿಮೆ ಸಿನಿಮಾಕ್ಕೆ ರಿಕ್ಕಿ ಕೇಜ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ