Pentagon Trailer: ‘ಪೆಂಟಗನ್​’ ಚಿತ್ರದ ಟ್ರೇಲರ್​ ಮೆಚ್ಚಿದ ಸೆಲೆಬ್ರಿಟಿಗಳು; ಟ್ರೆಂಡಿಂಗ್​ನಲ್ಲಿದೆ ಕನ್ನಡದ 5 ಕಥೆಗಳ ಸಿನಿಮಾ

Rishab Shetty | Pentagon Kannada Movie: ಏಪ್ರಿಲ್​ 7ರಂದು ‘ಪೆಂಟಗನ್’​ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಟ್ರೇಲರ್​ ನೋಡಿ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ.

Pentagon Trailer: ‘ಪೆಂಟಗನ್​’ ಚಿತ್ರದ ಟ್ರೇಲರ್​ ಮೆಚ್ಚಿದ ಸೆಲೆಬ್ರಿಟಿಗಳು; ಟ್ರೆಂಡಿಂಗ್​ನಲ್ಲಿದೆ ಕನ್ನಡದ 5 ಕಥೆಗಳ ಸಿನಿಮಾ
ಪೆಂಟಗನ್ ಪೋಸ್ಟರ್, ರಿಷಬ್ ಶೆಟ್ಟಿ, ಅನಿಲ್ ರವಿಪುಡಿ

Updated on: Mar 24, 2023 | 4:40 PM

ಪ್ರತಿದಿನ ಹೊಸ ಹೊಸ ಸಿನಿಮಾಗಳ ಟ್ರೇಲರ್​, ಪೋಸ್ಟರ್​, ಟೀಸರ್​ ಬಿಡುಗಡೆ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಮಾತ್ರ ಟ್ರೆಂಡ್​ ಆಗುತ್ತವೆ. ಕಾಂಟೆಂಟ್​ ಚೆನ್ನಾಗಿದ್ದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತದೆ. ಈಗ ‘ಪೆಂಟಗನ್​’ (Pentagon Movie) ಸಿನಿಮಾದ ಟ್ರೇಲರ್​ ಕೂಡ ಟ್ರೆಂಡ್​ ಆಗಿದೆ. ಯೂಟ್ಯೂಬ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ಟ್ವೀಟ್​ ಮಾಡುತ್ತಿದ್ದಾರೆ. ತೆಲುಗಿನ ನಿರ್ದೇಶಕ ಅನಿಲ್ ರವಿಪುಡಿ, ನಟ-ನಿರ್ದೇಶಕ ರಿಷಬ್​ ಶೆಟ್ಟಿ (Rishab Shetty) ಮುಂತಾದವರು ‘ಪೆಂಟಗನ್​’ ಸಿನಿಮಾದ ಟ್ರೇಲರ್ (Pentagon Trailer)​ ನೋಡಿ ಮೆಚ್ಚಿಕೊಂಡಿದ್ದಾರೆ. ಆ ಮೂಲಕ ಈ ಚಿತ್ರದ ಹೈಪ್​ ಹೆಚ್ಚಾಗಿದೆ.

ಮಾರ್ಚ್​ 23ರಂದು ‘ಪೆಂಟಗನ್​’ ಚಿತ್ರದ ಟ್ರೇಲರ್​ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ 5 ಬೇರೆ ಬೇರೆ ಕಥೆಗಳು ಇವೆ. ಒಂದು ಕಥಾಸಂಕಲನದ ರೀತಿ ಮೂಡಿಬಂದಿರುವ ಈ ಸಿನಿಮಾದ ಟ್ರೇಲರ್​ ಗಮನ ಸೆಳೆಯುತ್ತಿದೆ. ಎಲ್ಲ ಕಥೆಗಳ ಝಲಕ್​ ತೋರಿಸುವಲ್ಲಿ ಟ್ರೇಲರ್​ ಯಶಸ್ವಿ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಅನೇಕ ಸೆಲೆಬ್ರಿಟಿಗಳು ‘ಪೆಂಟಗನ್​’ ಬಗ್ಗೆ ಪೋಸ್ಟ್​ ಮಾಡುತ್ತಿದ್ದಾರೆ.

Pentagon: 5 ಪವರ್​ಫುಲ್​ ಕಥೆಗಳ ಝಲಕ್​ ತೋರಿಸಿದ ‘ಪೆಂಟಗನ್​’ ಟ್ರೇಲರ್​; ಡಬಲ್​ ಆಯ್ತು ನಿರೀಕ್ಷೆ

‘ಕನ್ನಡದ ಪೆಂಟಗನ್​ ಸಿನಿಮಾದ ಟ್ರೇಲರ್​ ಹಂಚಿಕೊಳ್ಳಲು ನನಗೆ ಖುಷಿ ಆಗುತ್ತಿದೆ. ಇದೊಂದು ಅದ್ಭುತ ಟ್ರೇಲರ್​. ಇಡೀ ತಂಡಕ್ಕೆ ಶುಭವಾಗಲಿ’ ಎಂದು ಅನಿಲ್​ ರವಿಪುಡಿ ಅವರು ಟ್ವೀಟ್​ ಮಾಡಿದ್ದಾರೆ. ಆ ಮೂಲಕ ತೆಲುಗು ಪ್ರೇಕ್ಷಕರು ಕೂಡ ಈ ಟ್ರೇಲರ್​ ಬಗ್ಗೆ ಗಮನ ಹರಿಸುವಂತೆ ಅವರು ಮಾಡಿದ್ದಾರೆ.

‘ಇದು ಕನ್ನಡದ ಮತ್ತೊಂದು ಕಥಾಸಂಗಮ. ಪುಟ್ಟಣ ಕಣಗಾಲ್​ ಅವರ ಲೆಗೆಸಿ ಮುಂದುವರಿಯುತ್ತಿರುವುದನ್ನು ನೋಡಲು ಖುಷಿ ಆಗುತ್ತದೆ. ಟ್ರೇಲರ್ ತುಂಬ ಆಕರ್ಷಕವಾಗಿದೆ. ಪೆಂಟಗನ್​ ತಂಡಕ್ಕೆ ಆಲ್​ ದಿ ಬೆಸ್ಟ್​’ ಎಂದು ರಿಷಬ್​ ಶೆಟ್ಟಿ ಟ್ವೀಟ್​ ಮಾಡಿದ್ದಾರೆ. ‘777 ಚಾರ್ಲಿ’ ಸಿನಿಮಾದ ನಿರ್ದೇಶಕ ಕಿರಣ್​ ರಾಜ್​, ‘ಬಹದ್ದೂರ್​’ ಚೇತನ್​ ಕುಮಾರ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಟ್ರೇಲರ್ ಹಂಚಿಕೊಂಡಿದ್ದಾರೆ.

ಏಪ್ರಿಲ್​ 7ರಂದು ‘ಪೆಂಟಗನ್’​ ಸಿನಿಮಾ ಬಿಡುಗಡೆ ಆಗಲಿದೆ. ಐವರು ನಿರ್ದೇಶಕರು ‘ಪೆಂಟಗನ್​’ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಗುರು ದೇಶಪಾಂಡೆ, ‘ಶಿವಾಜಿ ಸುರತ್ಕಲ್​’ ಸಿನಿಮಾ ಖ್ಯಾತಿಯ ಆಕಾಶ್​ ಶ್ರೀವತ್ಸ, ‘ಚೂರಿಕಟ್ಟೆ’ ಖ್ಯಾತಿಯ ರಾಘು ಶಿವಮೊಗ್ಗ, ‘ಬ್ರಹ್ಮಚಾರಿ’ ಚಿತ್ರದ ಚಂದ್ರಮೋಹನ್ ಹಾಗೂ ಹೊಸ ನಿರ್ದೇಶಕ ಕಿರಣ್ ಕುಮಾರ್​ ಅವರು ತಲಾ ಒಂದು ಕಥೆಗೆ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:40 pm, Fri, 24 March 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us