AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pentagon: 5 ಪವರ್​ಫುಲ್​ ಕಥೆಗಳ ಝಲಕ್​ ತೋರಿಸಿದ ‘ಪೆಂಟಗನ್​’ ಟ್ರೇಲರ್​; ಡಬಲ್​ ಆಯ್ತು ನಿರೀಕ್ಷೆ

Pentagon Movie Trailer: ಕನ್ನಡದಲ್ಲಿ ಈ ರೀತಿಯ ಪ್ರಯೋಗಗಳು ವಿರಳ. ಆ ಕಾರಣಕ್ಕಾಗಿ ‘ಪೆಂಟಗನ್​’ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ. ಸಿನಿಪ್ರಿಯರಿಗೆ ಈ ಚಿತ್ರದ ಟ್ರೇಲರ್​ ಇಷ್ಟ ಆಗಿದೆ.

Pentagon: 5 ಪವರ್​ಫುಲ್​ ಕಥೆಗಳ ಝಲಕ್​ ತೋರಿಸಿದ ‘ಪೆಂಟಗನ್​’ ಟ್ರೇಲರ್​; ಡಬಲ್​ ಆಯ್ತು ನಿರೀಕ್ಷೆ
ಪೆಂಟಗನ್ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
| Edited By: |

Updated on:Mar 24, 2023 | 7:32 AM

Share

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಪೆಂಗನ್​’ ಚಿತ್ರದ ಟ್ರೇಲರ್​ (Pentagon Movie Trailer) ರಿಲೀಸ್ ಆಗಿದೆ. ಈ ಚಿತ್ರಕ್ಕೆ ನಿರ್ಮಾಪಕನಾಗಿ ಹಾಗೂ ಕ್ರಿಯೇಟಿವ್​ ಹೆಡ್​ ಆಗಿ ಗುರು ದೇಶಪಾಂಡೆ (Guru Deshpande) ಕೆಲಸ ಮಾಡಿದ್ದಾರೆ. ಇದೊಂದು ಭಿನ್ನವಾದ ಪ್ರಯತ್ನ. 5 ಬೇರೆ ಬೇರೆ ಕಥೆಗಳನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಲಾಗಿದೆ. ಕಥಾ ಸಂಕಲನದ ರೀತಿ ಮೂಡಿಬಂದಿರುವ ಈ ‘ಪೆಂಟಗನ್​’ (Pentagon Movie) ಸಿನಿಮಾದಲ್ಲಿ 5 ಡಿಫರೆಂಟ್​ ಲೋಕವೇ ಅಡಗಿದೆ ಎನ್ನಬಹುದು. ಅದರ ಝಲಕ್​ ತೋರಿಸುವ ರೀತಿಯಲ್ಲಿ ಟ್ರೇಲರ್​ ಬಿಡುಗಡೆ ಆಗಿದೆ. ‘ಜಂಕಾರ್​ ಮ್ಯೂಸಿಕ್​’ ಮೂಲಕ ಅನಾವರಣ ಆಗಿರುವ ಟ್ರೇಲರ್​ಗೆ ಜನಮೆಚ್ಚುಗೆ ಸಿಗುತ್ತಿದೆ. ಸಿನಿಪ್ರಿಯರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ.

‘ಪೆಂಟಗನ್​’ ಸಿನಿಮಾದಲ್ಲಿನ 5 ಕಥೆಗಳು ಕೂಡ ಒಂದಕ್ಕಿಂತ ಒಂದು ಭಿನ್ನವಾಗಿವೆ. ​ಎಲ್ಲವೂ ಕೂಡ ಸಖತ್​ ರಾ ಶೈಲಿಯಲ್ಲಿ ಮೂಡಿಬಂದಿವೆ. ಟ್ರೇಲರ್​ ನೋಡಿದ ಬಳಿಕ ಸಿನಿಪ್ರಿಯರ ನಿರೀಕ್ಷೆ ಡಬಲ್​ ಆಗಿದೆ. ಜಾತಿ ತಾರತಮ್ಯ, ಸುಪಾರಿ ಕಿಲ್ಲರ್​, ಹನಿ ಟ್ರ್ಯಾಪ್​, ಕನ್ನಡ ಹೋರಾಟ.. ಹೀಗೆ ಹಲವು ಅಂಶಗಳನ್ನು ಒಳಗೊಂಡಿರುವ ಕಥೆಗಳು ‘ಪೆಂಟಗನ್​’ ಚಿತ್ರದಲ್ಲಿವೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ.

ಏಪ್ರಿಲ್​ 7ರಂದು ‘ಪೆಂಟಗನ್​’ ಬಿಡುಗಡೆ:

ಕನ್ನಡದಲ್ಲಿ ಈ ರೀತಿಯ ಪ್ರಯೋಗಗಳು ವಿರಳ. ಆ ಕಾರಣಕ್ಕಾಗಿ ‘ಪೆಂಟಗನ್​’ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ. ಸಿನಿಪ್ರಿಯರಿಗೆ ಈ ಚಿತ್ರದ ಟ್ರೇಲರ್​ ಇಷ್ಟ ಆಗಿದೆ. 5 ಕಥೆಗಳನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಏಪ್ರಿಲ್​ 7ರಂದು ‘ಪೆಂಟಗನ್​’ ಸಿನಿಮಾ ಬಿಡುಗಡೆ ಆಗಲಿದೆ. ಹಾಡುಗಳು ಮತ್ತು ಟೀಸರ್​ ಮೂಲಕ ಈ ಚಿತ್ರ ಗಮನ ಸೆಳೆಯುತ್ತಿದೆ. ಜೊತೆಗೆ ಟ್ರೇಲರ್​ ಕೂಡ ಸಖತ್​ ಸದ್ದು ಮಾಡಲು ಆರಂಭಿಸಿದೆ.

ಐವರು ನಿರ್ದೇಶಕರು ‘ಪೆಂಟಗನ್​’ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಗುರು ದೇಶಪಾಂಡೆ, ‘ಶಿವಾಜಿ ಸುರತ್ಕಲ್​’ ಸಿನಿಮಾ ಖ್ಯಾತಿಯ ಆಕಾಶ್​ ಶ್ರೀವತ್ಸ, ‘ಚೂರಿಕಟ್ಟೆ’ ಖ್ಯಾತಿಯ ರಾಘು ಶಿವಮೊಗ್ಗ, ‘ಬ್ರಹ್ಮಚಾರಿ’ ಚಿತ್ರದ ಚಂದ್ರಮೋಹನ್ ಹಾಗೂ ಹೊಸ ನಿರ್ದೇಶಕ ಕಿರಣ್ ಕುಮಾರ್​ ಅವರು ತಲಾ ಒಂದು ಕಥೆಗೆ ನಿರ್ದೇಶನ ಮಾಡಿದ್ದಾರೆ. ಎಲ್ಲ ಪ್ರತಿಭಾವಂತರ ಸಂಗಮ ಈ ಸಿನಿಮಾದಲ್ಲಿ ಆಗಿದೆ.

ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ

‘ಪೆಂಟಗನ್​’ ಚಿತ್ರದ ಪಾತ್ರವರ್ಗದಲ್ಲಿ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಪ್ರಕಾಶ್​ ಬೆಳವಾಡಿ, ಕಿಶೋರ್​, ಪಿ. ರವಿಶಂಕರ್​, ತನಿಶಾ, ಪ್ರೇರಣಾ ಕಂಬಂ, ಪ್ರೀತಿಕಾ ದೇಶಪಾಂಡೆ, ರವಿ ನಾಯಕ್​, ಶ್ರುತಿ ನಾಯಕ್​, ವಂಶಿ ಕೃಷ್ಣ ಸೇರಿದಂತೆ ದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಅಭಿಲಾಷ್ ಕಲ್ಲತ್ತಿ, ಗುರುಪ್ರಸಾದ್ ಎಮ್.ಜಿ. ಹಾಗೂ ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:27 pm, Thu, 23 March 23

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್