Film Fest: ‘ಸಿನಿಮಾ ಎಂದಿಗೂ ಜೀವಂತ’ ಬೆಂಗಳೂರು ಚಲನಚಿತ್ರೋತ್ಸವಕ್ಕೆ ಗಣ್ಯರಿಂದ ಚಾಲನೆ

14 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಇನ್ನಿತರೆ ಗಣ್ಯರು ಸೇರಿ ಮಾರ್ಚ್ 23 ರಂದು ಚಾಲನೆ ನೀಡಿದರು.

Film Fest: 'ಸಿನಿಮಾ ಎಂದಿಗೂ ಜೀವಂತ' ಬೆಂಗಳೂರು ಚಲನಚಿತ್ರೋತ್ಸವಕ್ಕೆ ಗಣ್ಯರಿಂದ ಚಾಲನೆ
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ
Follow us
ಮಂಜುನಾಥ ಸಿ.
|

Updated on: Mar 23, 2023 | 8:17 PM

14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (Bengaluru International Fil Festival) ಇಂದು (ಮಾರ್ಚ್ 23) ಚಾಲನೆ ದೊರೆತಿದೆ. ವಿಧಾನಸೌಧದ (Vidhana Soudha) ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಸಚಿವ ಆರ್.ಅಶೋಕ್, ಕತೆಗಾರ, ರಾಜ್ಯಸಭಾ ಸದಸ್ಯ ವಿಜಯೇಂದ್ರ ಪ್ರಸಾದ್, ಹಿರಿಯ ನಿರ್ದೇಶಕ ಗೋವಿಂದ ನಿಹಲಾನಿ, ನಟಿ ಸಪ್ತಮಿ ಗೌಡ, ಹರ್ಷಿಕಾ ಪೂಣಚ್ಚ ನಟ ಅಭಿಷೇಕ್ ಅಂಬರೀಶ್ ಇನ್ನಿತರೆ ಗಣ್ಯರು ಸೇರಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು.

ಬೆಂಗಳೂರು ಚಲನಚಿತ್ರೋತ್ಸವವು ಇಂದಿನಿಂದ ಮಾರ್ಚ್ 30 ರವರೆಗೆ ನಡೆಯಲಿದೆ. ಭಾರತ ಸೇರಿದಂತೆ ಹಲವು ದೇಶಗಳ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳು ಸಿನಿಮೋತ್ಸವದಲ್ಲಿ ಪ್ರದರ್ಶಿತಗೊಳ್ಳಲಿವೆ. ಸಿನಿಮಾಗಳ ಪ್ರದರ್ಶನವು ಒರಾಯಿನ್ ಮಾಲ್, ಸುಚಿತ್ರ ಫಿಲಂ ಸಿಟಿ, ಕನ್ನಡ ಕಲಾವಿದರ ಸಂಘದಲ್ಲಿ ಪ್ರದರ್ಶನಗೊಳ್ಳಲಿವೆ. ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರು ಇಂದು ವಿಶ್ವಮಟ್ಟದಲ್ಲಿ ಗುರುತು ಪಡೆದ ನಗರವಾಗಿದೆ. ಹಲವು ವಿಶ್ವವಿಖ್ಯಾತ ಸಂಸ್ಥೆಗಳು ಇಲ್ಲಿವೆ, ಕೆಲವೇ ವರ್ಷಗಳಲ್ಲಿ ದೇಶದ ಆರ್ಥಿಕ ರಾಜಧಾನಿಯಾಗಲಿದೆ ಹಾಗಿದ್ದಮೇಲೆ ವಿಶ್ವ ಚಲನಚಿತ್ರೋತ್ಸವ ಆಯೋಜಿಸಲು ಸೂಕ್ತ ನಗರವೆಂದರೆ ಅದು ಬೆಂಗಳೂರು ಎಂದರು.

ಸಿನಿಮಾಕ್ಕೆ ಬಹಳ ದೊಡ್ಡ ಇತಿಹಾಸವಿದೆ. ಸಿನಿಮಾ ನಮ್ಮೆಲ್ಲರ ಬದುಕಿನ ಭಾಗವೂ ಆಗದೆ. ಇತ್ತೀಚೆಗಿನ ದಿನಗಳಲ್ಲಿ ಸಿನಿಮಾ ಸಾಕಷ್ಟು ಮುಂದುವರೆದಿದೆ. ಮೇಕಿಂಗ್ ಬದಲಾಗಿದೆ. ಸಿನಿಮಾ ಕಲೆ ಬದಲಾಗಿದೆ. ಚಿತ್ರಮಂದಿರಗಳು ಬದಲಾಗಿವೆ. ವೀಕ್ಷಕರು ಬದಲಾಗಿದ್ದಾರೆ. ನಾವು ಸಿನಿಮಾ ನೋಡಿದ, ಅರ್ಥ ಮಾಡಿಕೊಂಡ ರೀತಿಗೂ ಇಂದಿನ ಮಕ್ಕಳು ನೋಡುತ್ತಿರುವ ರೀತಿಗೂ ಬಹಳ ವ್ಯತ್ಯಾಸವಿದೆ. ಬಹಳ ವೇಗವಾಗಿ ಸಿನಿಮಾ ಬದಲಾಗುತ್ತಿದೆ. ಆದರೆ ವೇಗಕ್ಕೆ ಯಾರು ಹೊಂದಿಕೊಳ್ಳುತ್ತಾರೊ ಅವರು ಯಶಸ್ವಿಯಾಗುತ್ತಾರೆ. ಕನ್ನಡ ಸಿನಿಮಾಗಳು ಸಹ ವೇಗಕ್ಕೆ ಹೊಂದಿಕೊಳ್ಳುತ್ತಿವೆ. ಅಂತರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದಾರೆ ಅದರ ಜೊತೆಗೆ ಕಲಾವಿದರ ಕಲೆ ಕೌಶಲ್ಯ, ವಸ್ತುನಿಷ್ಠ ಕತೆಗಳಿಂದ ಗಮನ ಸೆಳೆಯುತ್ತಿದ್ದಾರೆ. ಕೆಜಿಎಫ್-ಕೆಜಿಎಫ್ 2 ಸಿನಿಮಾಗಳು ತಂತ್ರಜ್ಞಾನ ಮೂಲಕ ಗಮನ ಸೆಳೆದರೆ ಕಾಂತಾರ ಸಿನಿಮಾವು ಸ್ಥಳೀಯ ಕತೆ, ಸ್ಥಳೀಯ ಆಚರಣೆಯ ಕತೆ ಹೇಳಿ ಅಂತರಾಷ್ಟ್ರೀಯ ಮಟ್ಟಕ್ಕೆ ಕನ್ನಡ ಸಿನಿಮಾವನ್ನು ತೆಗೆದುಕೊಂಡು ಹೋಗಿದೆ. ಆ ಸಿನಿಮಾದ ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು ಸಿಎಂ.

ಈ ಸಿನಿಮೋತ್ಸವದಲ್ಲಿ ಹಾಸ್ಯಬ್ರಹ್ಮ ನರಸಿಂಹರಾಜು ಹಾಗೂ ಖ್ಯಾತ ಸಿನಿಮಾಟೊಗ್ರಾಫರ್ ವಿಕೆ ಮೂರ್ತಿ ಅವರ ಸ್ಮರಣೆ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ವಿಕೆ ಮೂರ್ತಿ ಅವರೊಟ್ಟಿಗೆ ಕೆಲಸ ಮಾಡಿದ್ದ ಖ್ಯಾತ ನಿರ್ದೇಶಕ ಗೋವಿಂದ್ ನಿಹಾಲನಿ ಅವರನ್ನು ಆಹ್ವಾನಿಸಲಾಗಿತ್ತು. ಗೋವಿಂದ್ ಅವರು ವಿಕೆ ಮೂರ್ತಿ ಅವರೊಟ್ಟಿಗಿನ ತಮ್ಮ ನೆನಪುಗಳನ್ನು ಬಿಚ್ಚಿಟ್ಟರು. ರಾಜಮೌಳಿ ತಂದೆ, ಕತೆಗಾರ ವಿಜಯೇಂದ್ರ ಪ್ರಸಾದ್ ಕನ್ನಡದಲ್ಲಿಯೇ ಮಾತನಾಡಿ ಗಮನ ಸೆಳೆದರು. ಸಚಿವ ಆರ್.ಅಶೋಕ್ ಅವರು ಸಿಎಂ ಬಸವರಾಜ ಬೊಮ್ಮಾಯಿಯವರು ಚಿತ್ರರಂಗಕ್ಕೆ ನೀಡಿದ ಅನುದಾನ, ಸಹಾಯಗಳನ್ನು ನೆನಪು ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ