‘ಕೆಟಿಎಂ’ ಚಿತ್ರಕ್ಕೆ ಸಿಕ್ತು ರಿಷಬ್, ರಶ್ಮಿಕಾ ಬೆಂಬಲ; ಮತ್ತೊಂದು ಭಗ್ನ ಪ್ರೇಮ ಕಥೆ?

‘ದಿಯಾ’ ಚಿತ್ರದಿಂದ ಖ್ಯಾತಿ ಸಿಕ್ಕ ಬಳಿಕ ದೀಕ್ಷಿತ್​ಗೆ ಹಲವು ಆಫರ್​ಗಳು ಬಂದವು. ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ಅವರು ‘ಕೆಟಿಎಂ’ ಸಿನಿಮಾ ಮೂಲಕ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. . ಫೆಬ್ರವರಿ 16ರಂದು ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ರಿಷಬ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಬೆಂಬಲ ನೀಡಿದ್ದಾರೆ.

‘ಕೆಟಿಎಂ’ ಚಿತ್ರಕ್ಕೆ ಸಿಕ್ತು ರಿಷಬ್, ರಶ್ಮಿಕಾ ಬೆಂಬಲ; ಮತ್ತೊಂದು ಭಗ್ನ ಪ್ರೇಮ ಕಥೆ?

Updated on: Feb 07, 2024 | 8:05 AM

ನಟ ದೀಕ್ಷಿತ್ ಶೆಟ್ಟಿ (Dheekshith Shetty) ಅವರು ‘ದಿಯಾ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ಇದೊಂದು ಸ್ಯಾಡ್ ಎಂಡಿಂಗ್ ಲವ್​ಸ್ಟೋರಿ. ಈಗ ಅವರು ‘ಕೆಟಿಎಂ’ ಸಿನಿಮಾ ಮೂಲಕ ತೆರೆಮೇಲೆ ಬರೋಕೆ ರೆಡಿ ಆಗಿದ್ದಾರೆ. ಈ ಸಿನಿಮಾದಲ್ಲೂ ಪ್ರೀತಿ, ಪ್ರೇಮ ಹಾಗೂ ಲವ್ ಫೇಲ್ಯೂರ್ ಇದೆ. ಒಂದು ಕಥೆಯಲ್ಲಿ ಎರಡು ಲವ್​ಸ್ಟೋರಿಗಳನ್ನು ಬೆರೆಸಲಾಗಿದೆ. ಫೆಬ್ರವರಿ 16ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ರಿಷಬ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಮೊದಲಾದವರು ಬೆಂಬಲ ನೀಡಿದ್ದಾರೆ.

‘ದಿಯಾ’ ಸಿನಿಮಾದಿಂದ ಖ್ಯಾತಿ ಸಿಕ್ಕ ಬಳಿಕ ದೀಕ್ಷಿತ್​ಗೆ ಹಲವು ಆಫರ್​ಗಳು ಬಂದವು. ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ಅವರು ‘ಕೆಟಿಎಂ’ ಸಿನಿಮಾ ಮೂಲಕ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಈ ಚಿತ್ರ ಟೈಟಲ್​ನಿಂದಲೇ ಗಮನಸೆಳೆಯುತ್ತಿದೆ. ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ಹಾಡುಗಳು ಗಮನ ಸೆಳೆದಿವೆ.

‘ಕೆಟಿಎಂ’ ಸಿನಿಮಾಗೆ ದಕ್ಷಿಣ ಭಾರತದ ಕಲಾವಿದರ ಬೆಂಬಲ ಸಿಕ್ಕಿದೆ. ‘ಕಾಂತಾರ’ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಟ್ರೇಲರ್ ರಿಲೀಸ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಕನ್ನಡ ಚಿತ್ರರಂಗದಿಂದ ದೂರವೇ ಇರುವ ನಟಿ ರಶ್ಮಿಕಾ ಮಂದಣ್ಣ ಕೂಡ ‘ಕೆಟಿಎಂ’ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಡಿಂಪಲ್ ಕ್ವೀನ್ ರಚಿತಾರಾಮ್, ಕೀರ್ತಿ ಸುರೇಶ್, ತೆಲುಗು ನಟ ರಾಹುಲ್ ರವೀಂದ್ರನ್, ಮಲಯಾಳಂ ನಟ ಶೈನ್ ಟಾಮ್ ಚಾಕೋ ಸೋಶಿಯಲ್ ಮೀಡಿಯಾದಲ್ಲಿ ಟ್ರೇಲರ್ ರಿಲೀಸ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ರಿಷಬ್, ರಶ್ಮಿಕಾ ಟ್ವೀಟ್​..


ಈ ಚಿತ್ರದಲ್ಲಿ ದೀಕ್ಷಿತ್ ಅವರು ಎರಡು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಇಬ್ಬರು ನಾಯಕಿಯರು. ಕಥಾ ನಾಯಕನ ಜೀವನದಲ್ಲಿ ಏನೆಲ್ಲ ಆಗುತ್ತದೆ ಎಂಬುದನ್ನು ಟ್ರೇಲರ್​ನಲ್ಲಿ ಹೈಲೈಟ್ ಮಾಡಲಾಗಿದೆ. ಕೊನೆಗೆ ನಾಯಕನಿಗೆ ಪ್ರೀತಿ ಸಿಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಕುತೂಹಲವನ್ನು ಕೂಡ ಹುಟ್ಟು ಹಾಕಲಾಗಿದೆ. ಅನೇಕರಿಗೆ ‘ದಿಯಾ’ ಸಿನಿಮಾದ ನೆನಪಾಗಿದೆ. ಹಾಗಂತ ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಅನ್ನುತ್ತದೆ ಚಿತ್ರತಂಡ.

ದೀಕ್ಷಿತ್ ಶೆಟ್ಟಿಗೆ ಜೊತೆಯಾಗಿ ಸಂಜನಾ ದಾಸ್ ಹಾಗೂ ಕಾಜಲ್ ಕುಂದರ್ ನಟಿಸಿದ್ದಾರೆ. ಉಷಾ ಭಂಡಾರಿ, ರಘು ರಮಣಕೊಪ್ಪ, ಪ್ರಕಾಶ್ ತುಮ್ಮಿನಾಡು, ಬಾಬು ಹಿರಣ್ಣಯ್ಯ, ಶಾನಿಲ್ ಗುರು, ದೇವ್ ದೇವಯ್ಯ, ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ಕೆಟಿಎಂ’ ಸಿನಿಮಾ ಹಾಡು ಬಿಡುಗಡೆ, ಮುದ್ದಾಗಿ ಕಾಣ್ತಿದೆ ದೀಕ್ಷಿತ್-ಸಂಜನಾ ಜೋಡಿ

ಅರುಣ್ ‘ಕೆಟಿಎಂ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಇವರ ಎರಡನೇ ಪ್ರಯತ್ನ. ಈ ಮೊದಲು ‘ಅಥರ್ವ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ‘ಮಹಾಸಿಂಹ ಮೂವೀಸ್’ ಬ್ಯಾನರ್ ಅಡಿಯಲ್ಲಿ ವಿನಯ್ ನಿರ್ಮಾಣ ಮಾಡಿದ್ದಾರೆ. ರಕ್ಷಯ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ನವೀನ್ ಛಾಯಾಗ್ರಹಣ, ಚೇತನ್ ಅವರ ಸಂಗೀತ ಸಂಯೋಜನೆ, ಅರ್ಜುನ್ ಕಿಟ್ಟು ಸಂಕಲನ ಇದೆ. ಅಭಿನಂದನ್ ದೇಶಪ್ರಿಯ ಅವರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:00 am, Wed, 7 February 24