AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರಿಗೆ ಧನ್ಯವಾದ ಹೇಳಿದ ಚಿಕ್ಕಣ್ಣ

Chikkanna: ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ ಸಿನಿಮಾ ಹಿಟ್ ಆಗಿದೆ. ತಮಗೆ ಬೆಂಬಲ ನೀಡಿದ ಎಲ್ಲರಿಗೂ ಚಿಕ್ಕಣ್ಣ ಶುಭಾಶಯ ತಿಳಿಸಿದ್ದಾರೆ. ರಶ್ಮಿಕಾ ಮಂದಣ್ಣಗೂ ಚಿಕ್ಕಣ್ಣ ಥ್ಯಾಂಕ್ಸ್ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರಿಗೆ ಧನ್ಯವಾದ ಹೇಳಿದ ಚಿಕ್ಕಣ್ಣ
ಮಂಜುನಾಥ ಸಿ.
|

Updated on: Feb 07, 2024 | 8:23 PM

Share

ಚಿಕ್ಕಣ್ಣ ಈಗ ಖುಷಿಯಲ್ಲಿದ್ದಾರೆ. ನೂರಾರು ಸಿನಿಮಾಗಳಲ್ಲಿ ಹಾಸ್ಯನಟರಾಗಿ ನಟಿಸಿರುವ ಚಿಕ್ಕಣ್ಣ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟ 13 ವರ್ಷದ ಬಳಿಕ ಚಿಕ್ಕಣ್ಣ ಇದೀಗ ನಾಯಕ ನಟನಾಗಿದ್ದಾರೆ. ತಾವೇ ನಟಿಸಿದ್ದ ‘ಅಧ್ಯಕ್ಷ’ ಸಿನಿಮಾದ ಸ್ಪಿನ್​ಆಫ್​ ಸಿನಿಮಾ ‘ಉಪಾಧ್ಯಕ್ಷ’ದಲ್ಲಿ (Upadyaksha) ಚಿಕ್ಕಣ್ಣ (Chikkanna) ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದ್ದು, ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಯಶಸ್ವಿಯಾಗಿದೆ. ನಾಯಕ ನಟನಾಗಿ ತಮ್ಮ ಈ ಮೊದಲ ಪ್ರಯತ್ನಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಚಿಕ್ಕಣ್ಣ ಧನ್ಯವಾದ ಅರ್ಪಿಸಿದ್ದಾರೆ.

‘ಉಪಾಧ್ಯಕ್ಷ’ ಸಿನಿಮಾದ ಸಕ್ಸಸ್ ಮೀಟ್​ನಲ್ಲಿ ಮಾತನಾಡಿದ ಉಪಾಧ್ಯಕ್ಷ, ತಮ್ಮ ಸಿನಿಮಾಕ್ಕೆ ಬೆಂಬಲ ನೀಡಿದ ಚಿತ್ರರಂಗದ ಗಣ್ಯರಿಗೆ ಧನ್ಯವಾದ ಹೇಳಿದರು. ‘ಉಪಾಧ್ಯಕ್ಷ’ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ ಶಿವರಾಜ್ ಕುಮಾರ್ ಅವರಿಗೆ ವಿಶೇಷ ಧನ್ಯವಾದ ಹೇಳಿದ ಚಿಕ್ಕಣ್ಣ, ‘ಸಿನಿಮಾದ ಸೆಟ್​ಗೆ ಬಂದಿದ್ದರು. ಟ್ರೈಲರ್ ಲಾಂಚ್ ಸಹ ಮಾಡಿಕೊಟ್ಟರು, ಬಳಿಕ ಬಿಡುವು ಮಾಡಿಕೊಂಡು ಸಿನಿಮಾ ನೋಡಿ ಶುಭ ಹಾರೈಸಿದರು’ ಅವರಿಗೆ ಧನ್ಯವಾದ.

‘ಉಪಾಧ್ಯಕ್ಷ’ ಸಿನಿಮಾಕ್ಕೆ ಶುಭಾಶಯ ಹೇಳಿ ವಿಡಿಯೋ ಬೈಟ್ಸ್ ಕೊಟ್ಟವರಿಗೆ ಧನ್ಯವಾದ ಹೇಳಿದ ಚಿಕ್ಕಣ್ಣ, ‘ನಾನು ಎಲ್ಲ ಕಡೆ ಹೋಗಲಾಗಲಿಲ್ಲ, ಆದರೂ ಸಹ ಹಲವರು ನಾವು ಕೇಳಿದ ಕೂಡಲೇ ಅವರೇ ವಿಡಿಯೋ ಮಾಡಿ ನಮಗೆ ಕಳಿಸಿಕೊಟ್ಟರು. ರಿಷಬ್ ಶೆಟ್ಟಿ, ಆಶಿಕಾ ರಂಗನಾಥ್, ಉಪೇಂದ್ರ, ಉಪೇಂದ್ರ, ಡಾಲಿ ಧನಂಜಯ್, ರಂಗಾಯಣ ರಘು’ ಇನ್ನೂ ಹಲವರು ನಮಗೆ ಶುಭಾಶಯ ಕೋರಿದರು ಅವರೆಲ್ಲರೀಗೂ ವಿಶೇಷ ಧನ್ಯವಾದ ಎಂದರು.

ಇದನ್ನೂ ಓದಿ:Chikkanna: ಯಶ್-ರಾಧಿಕಾ ದಂಪತಿ ಜೊತೆ ಬ್ರೇಕ್​ಫಾಸ್ಟ್ ಮಾಡಿದ ‌ಚಿಕ್ಕಣ್ಣ

ರಶ್ಮಿಕಾ ಮಂದಣ್ಣ ಸಹ ‘ಉಪಾಧ್ಯಕ್ಷ’ ಸಿನಿಮಾಕ್ಕೆ ವಿಡಿಯೋ ಬೈಟ್ ನೀಡಿದ್ದರು. ‘ಉಪಾಧ್ಯಕ್ಷ’ ಚಿತ್ರತಂಡಕ್ಕೆ ಒಳ್ಳೆಯದಾಗಲಿ, ಎಲ್ಲರೂ ಬಹಳ ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದಿದ್ದರು. ಅವರಿಗೂ ಸಹ ಚಿಕ್ಕಣ್ಣ ಧನ್ಯವಾದ ಹೇಳಿದರು. ಬಳಿಕ ತಮ್ಮ ಸೆಲೆಬ್ರಿಟಿ ಶೋಗೆ ಬಂದಿದ್ದ ಯೋಗರಾಜ್ ಭಟ್, ಶ್ರುತಿ, ಝಾಯಿದ್ ಖಾನ್, ಕೋಮಲ್ ಇನ್ನೂ ಹಲವರಿಗೆ ಚಿಕ್ಕಣ್ಣ ಧನ್ಯವಾದ ಹೇಳಿದರು.

ಚಿಕ್ಕಣ್ಣ ಅವರ ಗೆಳೆಯ ನಟ ದರ್ಶನ್ ತೂಗುದೀಪ ಸಹ ‘ಉಪಾಧ್ಯಕ್ಷ’ ಸಿನಿಮಾಕ್ಕೆ ಶುಭ ಕೋರಿದ್ದರು. ಆ ಬಳಿಕ ಬಂದು ವಿಶೇಷ ಪ್ರದರ್ಶನದಲ್ಲಿ ಸಿನಿಮಾ ವೀಕ್ಷಿಸಿದ್ದರು. ನಟ ಯಶ್ ಸಹ ಚಿಕ್ಕಣ್ಣ ಅವರನ್ನು ಮನೆಗೆ ಆಹ್ವಾನಿಸಿ ಅವರೊಟ್ಟಿಗೆ ಭೋಜನ ಸವಿದು ಸಿನಿಮಾಕ್ಕೆ ಶುಭ ಕೋರಿದ್ದರು. ಸುದೀಪ್ ಸಹ ‘ಉಪಾಧ್ಯಕ್ಷ’ ಸಿನಿಮಾಕ್ಕೆ ಒಳಿತಾಗಲೆಂದು ಹಾರೈಸಿದ್ದರು. ಎಲ್ಲ ಶುಭ ಹಾರೈಕೆಯಿಂದ ಚಿಕ್ಕಣ್ಣ ಗೆದ್ದಿದ್ದಾರೆ. ಇದೇ ಗೆಲುವನ್ನು ಚಿಕ್ಕಣ್ಣ ಮುಂದುವರೆಸುತ್ತಾರೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ