ಹೈದರಾಬಾದ್​ನಲ್ಲಿ ರಿಷಬ್ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಒಂದೇ ಕಣ್ಣಲ್ಲಿ ಅಳುವವರು ಈ ವಿಡಿಯೋ ನೋಡಲೇಬೇಕು

ಹೈದರಾಬಾದ್‌ನಲ್ಲಿ ನಡೆದ ‘ಕಾಂತಾರ: ಚಾಪ್ಟರ್ 1’ ಪ್ರೀ-ರಿಲೀಸ್‌ನಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ತೆಲುಗು ಮಂದಿ ಅಸಮಾಧಾನ ವ್ಯಕ್ತಪಡಿಸಿದರೆ, ಕನ್ನಡಿಗರು ಬೆಂಬಲ ಸೂಚಿಸಿದ್ದಾರೆ. ಬೆಂಗಳೂರಿಗೆ ಬಂದಿದ್ದ ರಾಮ್ ಚರಣ್, ಮಹೇಶ್ ಬಾಬು, ಚಿರಂಜೀವಿ ತೆಲುಗಿನಲ್ಲಿ ಮಾತನಾಡಿದ ವಿಡಿಯೋಗಳನ್ನು ಪ್ರಸ್ತುತಪಡಿಸಿ ರಿಷಬ್​ ಅವರ ನಡೆ ಸಮರ್ಥಿಸಲಾಗುತ್ತಿದೆ.

ಹೈದರಾಬಾದ್​ನಲ್ಲಿ ರಿಷಬ್ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಒಂದೇ ಕಣ್ಣಲ್ಲಿ ಅಳುವವರು ಈ ವಿಡಿಯೋ ನೋಡಲೇಬೇಕು
ರಿಷಬ್

Updated on: Sep 30, 2025 | 8:57 AM

ಇತ್ತೀಚೆಗೆ ‘ಕಾಂತಾರ: ಚಾಪ್ಟರ್ 1’ ಚಿತ್ರದ ತೆಲುಗು ಪ್ರೀ-ರಿಲೀಸ್ ಈವೆಂಟ್ ಹೈದರಾಬಾದ್​ನಲ್ಲಿ ನಡೆದಿದೆ. ಈ ವೇಳೆ ರಿಷಬ್ ಶೆಟ್ಟಿ ಅವರು ಕನ್ನಡದಲ್ಲೇ ಮಾತನಾಡಿದ್ದರು. ಅವರು ಮಾತನಾಡಿದ್ದು, ಎರಡೇ ನಿಮಿಷ. ಆದರೆ, ಎಲ್ಲಿಯೂ ಅವರು ಇಂಗ್ಲಷ್ ಆಗಲಿ, ತೆಲುಗು ಆಗಲಿ ಬಳಸಿರಲಿಲ್ಲ. ಈ ವಿಚಾರದ ಬಗ್ಗೆ ಕನ್ನಡಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆದರೆ, ತೆಲುಗು ಮಂದಿ ಸಾಕಷ್ಟು ಅಪಸ್ವರ ತೆಗೆದಿದ್ದಾರೆ. ಅವರು ಇಂಗ್ಲಿಷ್ ಅಥವಾ ತೆಲುಗಿನಲ್ಲಿ ಮಾತನಾಡಬೇಕಿತ್ತು ಎಂದು ಅನೇಕರು ಹೇಳಿದ್ದಾರೆ. ಆದರೆ, ಅನೇಕ ತೆಲುಗು ಸ್ಟಾರ್​ಗಳು ಬೆಂಗಳೂರಿಗೆ ಬಂದು ತೆಲುಗಿನಲ್ಲಿ ಮಾತನಾಡಿದ ಉದಾಹರಣೆ ಇದೆ. ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ.

ತೆಲುಗಿನ ಅನೇಕ ಸಿನಿಮಾಗಳು ಕರ್ನಾಟಕಗಳಲ್ಲಿ ರಿಲೀಸ್ ಆಗುತ್ತವೆ. ಅದರಲ್ಲೂ ಬೆಂಗಳೂರು ದೊಡ್ಡ ಮಾರರುಕಟ್ಟೆ. ಹೀಗಾಗಿ, ಸ್ಟಾರ್ ಹೀರೋಗಳು, ನಿರ್ದೇಶಕರು ಬೆಂಗಳೂರಿಗೆ ಬಂದು ಸಿನಿಮಾ ಪ್ರಚಾರ ಮಾಡಿದ್ದಾರೆ. ಈ ರೀತಿ ಪ್ರಚಾರ ಮಾಡುವಾಗ ಅನೇಕ ಹೀರೋಗಳು ತೆಲುಗಿನಲ್ಲೇ ಮಾತನಾಡಿದ ಉದಾಹರಣೆ ಇದೆ.

ಇದನ್ನೂ ಓದಿ
ಅನುಶ್ರೀ ಹನಿಮೂನ್ ಫೋಟೋಗೆ ಬಂತು ಆ ವಿಶೇಷ ಕಮೆಂಟ್
ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಎಲಿಮಿನೇಟ್ ಆಗಲಿದ್ದಾರೆ ಮಲ್ಲಮ್ಮ?
ನಾನು ಬಾಲ್ಯದಲ್ಲಿ ಕುಂದಾಪುರದ ಬಗ್ಗೆ ಕೇಳಿದ ಕಥೆ ಸಿನಿಮಾ ಆಗಿದೆ; JR NTR
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ಇದನ್ನೂ ಓದಿ: ತೆಲುಗು ವೇದಿಕೆ ಮೇಲೆ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದ ರಿಷಬ್ ಶೆಟ್ಟಿ

‘ಆರ್​ಆರ್​ಆರ್’ ಸಿನಿಮಾದ ಈವೆಂಟ್ ಚಿಕ್ಕ ಬಳ್ಳಾಪುರದಲ್ಲಿ ನಡೆದಿತ್ತು. ಆಗ ವೇದಿಕೆ ಏರಿದ್ದ ರಾಮ್ ಚರಣ್ ಅವರು ಸಂಪೂರ್ಣ ತೆಲುಗಿನಲ್ಲೇ ಮಾತನಾಡಿದ್ದರು. ‘ಸ್ಪೈಡರ್’ ಸಿನಿಮಾ ರಿಲೀಸ್ ವೇಳೆ ಮಹೇಶ್ ಬಾಬು ಕೂಡ ತೆಲುಗು ಬಳಸಿದಿದ್ದರು. ‘ಸೈರಾ ನರಸಿಂಹ ರೆಡ್ಡಿ’ ಪ್ರಮೋಷನ್ ವೇಳೆ ಬೆಂಗಳೂರಲ್ಲಿ ಚಿರಂಜೀವಿ ತೆಲುಗು ಬಳಕೆ ಮಾಡಿದ್ದರು. ​

ತೆಲುಗು ನಟರು ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತನಾಡಿದ ವಿಡಿಯೋ

ಸದ್ಯ ಈ ವಿಡಿಯೋಗಳನ್ನು ವೈರಲ್ ಮಾಡಲಾಗುತ್ತಿದೆ. ಈ ವಿಡಿಯೋಗಳ ಮೂಲಕ ರಿಷಬ್ ಶೆಟ್ಟಿ ಅವರು ನಡೆದುಕೊಂಡ ರೀತಿ ಸರಿ ಇದೆ ಫ್ಯಾನ್ಸ್ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಕನ್ನಡಿಗರು ರಿಷಬ್​ಗೆ ಬೆಂಬಲವಾಗಿ ನಿಂತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.