‘ಬ್ರಹ್ಮಕಲಶ’ ಹಾಡಿನಲ್ಲಿ ವಾಟರ್ ಕ್ಯಾನ್ ಇದೆ ಎಂದು ಗೊತ್ತಾಗಲು ಕಾರಣ ಆಗಿದ್ದು ಆ ವ್ಯಕ್ತಿ

ಕಾಂತಾರ: ಚಾಪ್ಟರ್ 1 ಚಿತ್ರದ 'ಬ್ರಹ್ಮಕಳಶ' ಹಾಡಿನಲ್ಲಿ ಕಾಣಿಸಿದ್ದ ನೀರಿನ ಕ್ಯಾನ್ ವಿವಾದದ ಕುರಿತು ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಸ್ಪಷ್ಟನೆ ನೀಡಿದ್ದಾರೆ. ಗುಣಮಟ್ಟ ನಿಯಂತ್ರಣ ತಂಡದ ಲೋಪದಿಂದಾಗಿ ಕ್ಯಾನ್ ಕಾಣುವ ಶಾಟ್ ಬಳಕೆಯಾಗಿತ್ತು. ಬಳಿಕ ಅದನ್ನು ಸರಿಪಡಿಸಲಾಗಿದೆ. ಜೂನಿಯರ್ ಕಲಾವಿದರೊಬ್ಬರು ಸ್ಕ್ರೀನ್‌ಶಾಟ್ ಹಂಚಿಕೊಂಡಾಗ ಈ ದೋಷ ಬೆಳಕಿಗೆ ಬಂದಿತ್ತು ಎಂದು ವಿವರಿಸಿದ್ದಾರೆ.

‘ಬ್ರಹ್ಮಕಲಶ’ ಹಾಡಿನಲ್ಲಿ ವಾಟರ್ ಕ್ಯಾನ್ ಇದೆ ಎಂದು ಗೊತ್ತಾಗಲು ಕಾರಣ ಆಗಿದ್ದು ಆ ವ್ಯಕ್ತಿ
ಬ್ರಹ್ಮಕಲಶ

Updated on: Nov 05, 2025 | 10:36 AM

‘ಕಾಂತಾರ: ಚಾಪ್ಟರ್ 1’ ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಆ ಬಳಿಕ ಸಿನಿಮಾ ಒಟಿಟಿಗೂ ಕಾಲಿಟ್ಟು ಗಮನ ಸೆಳೆಯುತ್ತಿದೆ. ಈ ಚಿತ್ರವನ್ನು ಎಲ್ಲರೂ ಕೊಂಡಾಡಿದರು. ಈ ಚಿತ್ರಕ್ಕೆ ಒಂದು ಕಪ್ಪು ಚುಪ್ಪೆ ಬಿದ್ದಿತ್ತು. ಅದುವೇ ‘ಬ್ರಹ್ಮಕಲಶ’ ಹಾಡಿನಲ್ಲಿ (Brahmakalasha Song) ಬರೋ ನೀರಿನ ಕ್ಯಾನ್ ದೃಶ್ಯ. ಇದನ್ನು ಅನೇಕರು ಟ್ರೋಲ್ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಆಯಿತು. ಈ ಬಗ್ಗೆ ತಂಡದ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ರಿಷಬ್ ಶೆಟ್ಟಿ ಅವರು ತುಂಬಾನೇ ಶ್ರದ್ಧೆಯಿಂದ ಸಿನಿಮಾ ಮಾಡುತ್ತಾರೆ. ‘ಕಾಂತಾರ’ ಹಾಗೂ ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲೂ ಅವರು ಸಾಕಷ್ಟು ಶ್ರಮ ಹಾಕಿದ್ದರು. ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬರುವಂತೆ ನೋಡಿಕೊಂಡಿದ್ದರು. ಆದರೆ, ಅಲ್ಲಾಗಿದ್ದೇ ಬೇರೆ. ನೂರಾರು ಕೋಟಿ ರೂಪಾಯಿ ಬಜೆಟ್ ಹಾಕಿ ಅದ್ದೂರಿಯಾಗಿ ಮೂಡಿ ಬಂದ ಸಿನಿಮಾದಲ್ಲಿ ನೀರಿನ ಕ್ಯಾನ್ ಕಾಣಿಸಿಕೊಂಡಿದ್ದು ತಂಡವನ್ನು ಮುಜುಗರಕ್ಕೆ ಈಡು ಮಾಡಿತ್ತು. ಈ ಬಗ್ಗೆ ಚಿತ್ರದ ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಅವರು ‘ಗೌರೀಶ್ ಅಕ್ಕಿ ಸ್ಟುಡಿಯೋ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದರು.

‘ನಮ್ಮ ಗುಣಮಟ್ಟ ನಿಯಂತ್ರಕ ತಂಡ ಸ್ಟ್ರಾಂಗ್ ಆಗಿದೆ. ಪ್ರತಿ ಫ್ರೇಮ್ ಕೂಡ ನೋಡಿಯೇ ಮುಂದಿನ ಪ್ರಕ್ರಿಯೆ ಮಾಡುತ್ತಿತ್ತು. ಮೊದಲು ಓಕೆ ಆದ ಶಾಟ್​ ಅಲ್ಲಿ ಹಾಕಿರಲಿಲ್ಲ. ಅದರಲ್ಲಿ ವಾಟರ್ ಕ್ಯಾನ್ ಕೂಡ ಇರಲಿಲ್ಲ. ನಂತರ ಓಕೆ ಅಲ್ಲದೆ ಇರೋ ಶಾಟ್​ನ ನಾವು ಅಲ್ಲಿ ಕೂರಿಸಿದೆವು. ಆಗ ವಾಟರ್ ಕ್ಯಾನ್ ಕಾಣಿಸಿತು. ಈಗ ವಾಟರ್ ಕ್ಯಾನ್ ಇಲ್ಲ’ ಎಂದರು ಅವರು.

ವಾಟರ್ ಕ್ಯಾನ್ ವಿಚಾರಕ್ಕೆ ಸ್ಪಷ್ಟನೆ

‘ಅಲ್ಲಿ ನೋಡಲು ತುಂಬಾ ವಿಷಯಗಳಿವೆ. ಆದರೂ ಈ ವಾಟರ್ ಕ್ಯಾನ್ ಕಾಣಿಸಿದ್ದು ಹೇಗೆ ಎಂಬುದೇ ಕುತೂಹಲಕಾರಿ. ಈ ಹಾಡಿನಲ್ಲಿ ಕಾಣಿಸಿಕೊಂಡ ಜೂನಿಯರ್ ಆರ್ಟಿಸ್ಟ್ ತಾನು ಎಲ್ಲಿದ್ದೇನೆ ಎಂಬುದನ್ನು ತೋರಿಸಲು ಜೂಮ್ ಮಾಡಿ ಸ್ಕ್ರೀನ್​ಶಾಟ್ ಹಂಚಿಕೊಂಡಿದ್ದ. ಈ ವೇಳೆ ಆತನಿಗೆ ವಾಟರ್ ಕ್ಯಾನ್ ಕಾಣಿಸಿದೆ. ಸಾಂಗ್ ರಿಲೀಸ್ ಆಗಿ 10 ದಿನ ಆದ ಬಳಿಕ ಈ ವಾಟರ ಕ್ಯಾನ್ ವಿಚಾರ ಗೊತ್ತಾಗಿದೆ’ ಎಂದು ಸ್ಪಷ್ಟನೆ ಕೊಟ್ಟರು ಅರವಿಂದ್ ಕಶ್ಯಪ್.

ಇದನ್ನೂ ಓದಿ: ‘ಕಾಂತಾರ’ದಲ್ಲಿ ವಾಟರ್ ಕ್ಯಾನ್: ಈ ರೀತಿ ತಪ್ಪು ಮಾಡಿದ ದೊಡ್ಡ ಸಿನಿಮಾಗಳ ಪಟ್ಟಿ ಇಲ್ಲಿದೆ

ಕಾಂತಾರ: ಚಾಪ್ಟರ್ 1 ಚಿತ್ರದ ‘ಬ್ರಹ್ಮಕಲಶ’ ಹಾಡಿನಲ್ಲಿ ಕಾಣಿಸಿದ್ದ ನೀರಿನ ಕ್ಯಾನ್ ವಿವಾದದ ಕುರಿತು ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಸ್ಪಷ್ಟನೆ ನೀಡಿದ್ದಾರೆ. ಗುಣಮಟ್ಟ ನಿಯಂತ್ರಣ ತಂಡದ ಲೋಪದಿಂದಾಗಿ ಕ್ಯಾನ್ ಕಾಣುವ ಶಾಟ್ ಬಳಕೆಯಾಗಿತ್ತು. ಬಳಿಕ ಅದನ್ನು ಸರಿಪಡಿಸಲಾಗಿದೆ. ಜೂನಿಯರ್ ಕಲಾವಿದರೊಬ್ಬರು ಸ್ಕ್ರೀನ್‌ಶಾಟ್ ಹಂಚಿಕೊಂಡಾಗ ಈ ದೋಷ ಬೆಳಕಿಗೆ ಬಂದಿತ್ತು ಎಂದು ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:05 am, Wed, 5 November 25