AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Genelia Deshmukh: ಜೆನಿಲಿಯಾ ಸಿನಿಮಾದಿಂದ ದೂರ ಆಗಿದ್ದಕ್ಕೆ ಗಂಡ ಕಾರಣವೇ? ಕಡೆಗೂ ಬಾಯಿಬಿಟ್ಟ ನಟಿ

Genelia D'souza: ಜೆನಿಲಿಯಾ ಡಿಸೋಜಾ ಮತ್ತು ರಿತೇಶ್​ ದೇಶಮುಖ್​ ಅವರು ಮದುವೆ ಆಗಿದ್ದು 2012ರಲ್ಲಿ. ಮದುವೆ ಆದ ನಂತರ ಜೆನಿಲಿಯಾ ಅವರು ನಟನೆಯಿಂದ ನಿಧಾನವಾಗಿ ದೂರ ಸರಿಯುತ್ತಾ ಬಂದರು.

Genelia Deshmukh: ಜೆನಿಲಿಯಾ ಸಿನಿಮಾದಿಂದ ದೂರ ಆಗಿದ್ದಕ್ಕೆ ಗಂಡ ಕಾರಣವೇ? ಕಡೆಗೂ ಬಾಯಿಬಿಟ್ಟ ನಟಿ
ಜೆನಿಲಿಯಾ ದೇಶಮುಖ್​, ರಿತೇಶ್​ ದೇಶಮುಖ್​
ಮದನ್​ ಕುಮಾರ್​
|

Updated on: Jul 20, 2023 | 5:15 PM

Share

ಅನೇಕ ನಟಿಯರು ಮದುವೆ ಬಳಿಕ ಸೈಲೆಂಟ್​ ಆಗುತ್ತಾರೆ. ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವುದು ನಿಲ್ಲಿಸುತ್ತಾರೆ. ಕುಟುಂಬ, ಗಂಡ, ಮಕ್ಕಳ ಕಡೆಗೆ ಗಮನ ನೀಡುತ್ತಾ ನಟನೆಯಿಂದ ದೂರವೇ ಉಳಿದುಕೊಳ್ಳುತ್ತಾರೆ. ನಟಿ ಜೆನಿಲಿಯಾ ಡಿಸೋಜಾ (Genelia D’souza) ಅವರಿಗೂ ಈ ಮಾತು ಅನ್ವಯ. ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದ ಅವರು ಮದುವೆ ಬಳಿಕ ಕೇವಲ ಅತಿಥಿ ಪಾತ್ರಕ್ಕೆ ಸೀಮಿತವಾದರು. ಸಿನಿಮಾಗಳ ಆಯ್ಕೆಯಲ್ಲಿ ತುಂಬ ಬ್ಯೂಸಿ ಆಗಿಬಿಟ್ಟರು. ಜೆನಿಲಿಯಾ ಅವರು ಈ ರೀತಿ ನಿರ್ಧಾರ ತೆಗೆದುಕೊಳ್ಳಲು ಪತಿ ರಿತೇಶ್​ ದೇಶಮುಖ್​ (Riteish Deshmukh) ಕಾರಣವೇ ಎಂದು ಅನೇಕರು ಪ್ರಶ್ನಿಸುತ್ತಿದ್ದರು. ಅದಕ್ಕೆ ಈಗ ಸ್ವತಃ ಜೆನಿಲಿಯಾ ಡಿಸೋಜಾ ಉತ್ತರ ನೀಡಿದ್ದಾರೆ.

ಜೆನಿಲಿಯಾ ಡಿಸೋಜಾ ಮತ್ತು ರಿತೇಶ್​ ದೇಶಮುಖ್​ ಅವರು ಮದುವೆ ಆಗಿದ್ದು 2012ರಲ್ಲಿ. ಅಲ್ಲಿಯ ತನಕ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಜೆನಿಲಿಯಾ ಡಿಸೋಜಾ ಬ್ಯುಸಿ ಆಗಿದ್ದರು. ಕನ್ನಡದಲ್ಲೂ ಅವರು ನಟಿಸಿದ್ದರು. ಅವರನ್ನು ಹೆಚ್ಚು ಸಿನಿಮಾಗಳಲ್ಲಿ ನೋಡಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಆದರೆ ಜೆನಿಲಿಯಾ ಅವರು ನಟನೆಯಿಂದ ನಿಧಾನವಾಗಿ ದೂರ ಸರಿಯುತ್ತಾ ಬಂದರು. ಗಂಡನ ಸೂಚನೆ ಮೇರೆಗೆ ಜೆನಿಲಿಯಾ ಈ ನಿರ್ಧಾರ ತೆಗೆದುಕೊಂಡ್ರಾ? ಖಂಡಿತಾ ಇಲ್ಲ. ಅದು ಜೆನಿಲಿಯಾ ಅವರ ಸ್ವಂತ ನಿರ್ಧಾರ ಆಗಿತ್ತು ಎಂಬುದು ಈಗ ಸ್ಪಷ್ಟವಾಗಿದೆ.

ಇದನ್ನೂ ಓದಿ: Genelia Dsouza: ಕಿಚ್ಚ ಸುದೀಪ್​ ಚಿತ್ರಕ್ಕೆ ಬೆಂಬಲ ನೀಡಲು ಗಂಡನ ಜೊತೆ ಬಂದ ಜೆನಿಲಿಯಾ ಡಿಸೋಜಾ

‘ಜನರು ಏನು ಬೇಕಾದರೂ ಮಾತನಾಡುತ್ತಾರೆ. ಆದರೆ ನಿಜ ಏನು ಎಂದರೆ ಅದು ನನ್ನ ನಿರ್ಧಾರವಾಗಿತ್ತು. ಯಾಕೆ ಹೆಚ್ಚು ಸಿನಿಮಾ ಮಾಡಲ್ಲ ಅಂತ ಜನ ಕೇಳ್ತಾರೆ. ಆ ರೀತಿ ಮಾಡಬೇಕು ಅಂತ ನನಗೆ ಅನಿಸಿಲ್ಲ. ಮಕ್ಕಳ ಜೊತೆ ಇರುವುದನ್ನು ನಾನು ಹೆಚ್ಚು ಇಷ್ಟಪಡುತ್ತೇನೆ’ ಎಂದು ಸಂದರ್ಶನವೊಂದರಲ್ಲಿ ಜೆನಿಲಿಯಾ ಹೇಳಿದ್ದಾರೆ. ಈಗ ಅವರು ಮತ್ತೆ ಸಿನಿಮಾಗಳನ್ನು ಒಪ್ಪಿಕೊಳ್ಳಲು ಆರಂಭಿಸಿದ್ದಾರೆ. ಅದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದನ್ನೂ ಓದಿ: ಟ್ರಯಲ್​ಗೆ ಸಿಗುತ್ತಾನೆಯೇ ಅಪ್ಪ? ಸತ್ಯನ ಪ್ರೇಯಸಿ ಜೆನಿಲಿಯಾ ಹೇಳುತ್ತಾರೆ ಕೇಳಿ

ಸೋಶಿಯಲ್​ ಮೀಡಿಯಾದಲ್ಲಿ ಜೆನಿಲಿಯಾ ದೇಶಮುಖ್​ ಅವರು ಆ್ಯಕ್ಟೀವ್​ ಆಗಿದ್ದಾರೆ. ಹಲವು ಫೋಟೋ ಮತ್ತು ರೀಲ್ಸ್​ ಹಂಚಿಕೊಳ್ಳುವ ಮೂಲಕ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಕನ್ನಡದಲ್ಲಿ ಜೆನಿಲಿಯಾ ನಟಿಸಿದ ಏಕೈಕ ಸಿನಿಮಾ ‘ಸತ್ಯ ಇನ್​ ಲವ್​’. ಆ ಸಿನಿಮಾ ಬಳಿಕ ಅವರು ಬೇರೆ ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಲಿಲ್ಲ. ಈಗ ಕಿರೀಟಿ ರೆಡ್ಡಿ ನಟನೆಯ ಕನ್ನಡ-ತೆಲುಗು ಸಿನಿಮಾ ‘ಜೂನಿಯರ್​’ನಲ್ಲಿ ಜೆನಿಲಿಯಾ ಅಭಿನಯಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.