Roberrt Movie Review: ರಾಬರ್ಟ್​ ಸಿನಿಮಾದ ಸೆಕೆಂಡ್ ಹಾಫ್​ ಹೇಗಿದೆ ಗೊತ್ತಾ?

|

Updated on: Mar 11, 2021 | 10:13 AM

ಇಂದು ರಿಲೀಸ್​ ಆದ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾದ ಮೊದಲಾರ್ಧ ಹೇಗಿದೆ ಎಂಬುದನ್ನು ಟಿವಿ9 ಕನ್ನಡ ಡಿಜಿಟಿಲ್​ ಬಿಚ್ಚಿಟ್ಟಿತ್ತು. ಈಗ ಸಿನಿಮಾದ ಎರಡನೇ ಅರ್ಧ ಹೇಗಿದೆ ಎನ್ನುವ ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ..

Roberrt Movie Review: ರಾಬರ್ಟ್​ ಸಿನಿಮಾದ ಸೆಕೆಂಡ್ ಹಾಫ್​ ಹೇಗಿದೆ ಗೊತ್ತಾ?
ದರ್ಶನ್​
Follow us on

ಇಂದು ರಿಲೀಸ್​ ಆದ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾದ ಮೊದಲಾರ್ಧ ಹೇಗಿದೆ ಎಂಬುದನ್ನು ಟಿವಿ9 ಕನ್ನಡ ಡಿಜಿಟಿಲ್​ ಬಿಚ್ಚಿಟ್ಟಿತ್ತು. ಈಗ ಸಿನಿಮಾದ ಎರಡನೇ ಅರ್ಧ ಹೇಗಿದೆ ಎನ್ನುವ ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ..

ಟ್ವಿಸ್ಟ್​ ಆ್ಯಂಡ್​ ಟರ್ನ್​
ರಾಬರ್ಟ್​ ಎರಡನೇ ಅರ್ಧದಲ್ಲಿ ಸಿನಿಮಾ ಸಾಕಷ್ಟು ಟರ್ನ್​ ಆ್ಯಂಡ್​ ಟ್ವಿಸ್ಟ್​ಗಳನ್ನು ಪಡೆದುಕೊಳ್ಳುತ್ತದೆ. ಇದನ್ನು ನೋಡಿದ ಅಭಿಮಾನಿಗಳು ರೋಮಾಂಚನಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲಾರ್ಧ ಅದ್ಭುತ ಎನಿಸುವ ಸಿನಿಮಾ ಎರಡನೇ ಅರ್ಧದಲ್ಲಿ ಮತ್ತಷ್ಟು ರೋಚಕತೆ ಪಡೆದುಕೊಳ್ಳಲಿದೆ.

ವಿನೋಧ ಪ್ರಭಾಕರ್ ಎಂಟ್ರಿ
ವಿನೋಧ ಪ್ರಭಾಕರ್​ ರಾಬರ್ಟ್​ ಸಿನಿಮಾದ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಪಾತ್ರಕ್ಕೂ ತುಂಬಾನೇ ತೂಕವಿದೆ.

ಮಿಂಚಿದ ಜಗಪತಿ ಬಾಬು

ತೆಲುಗಿನಲ್ಲಿ ವಿಲನ್​ ಆಗಿ ಮಿಂಚಿರುವ ಜಗಪತಿ ಬಾಬು ರಾಬರ್ಟ್​ ಸಿನಿಮಾದಲ್ಲೂ ನಟಿಸಿದ್ದಾರೆ. ಅವರ ಖಡಕ್​ ವಿಲನ್​ ಪಾತ್ರ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿದೆ. ಓರ್ವ ಖಡಕ್​ ವಿಲನ್​ ಆಗಿ ತೆರೆಮೇಲೆ ಮಿಂಚುತ್ತಾರೆ ಜಗಪತಿ ಬಾಬು.

ಮೂರು ಆ್ಯಕ್ಷನ್​ ದೃಶ್ಯ

ದರ್ಶನ್​ ಸಿನಿಮಾ ಎಂದಾಗ ನೆನಪಾಗೋದು ಆ್ಯಕ್ಷನ್​ ದೃಶ್ಯಗಳು. ರಾಬರ್ಟ್​ ಸಿನಿಮಾದಲ್ಲೂ ಸಾಕಷ್ಟು ಆ್ಯಕ್ಷನ್​ ಇದೆ. ಮೊದಲಾರ್ಧದಲ್ಲಿ ಎರಡು ಆ್ಯಕ್ಷನ್​ ದೃಶ್ಯಗಳು ಇದ್ದವು. ಎರಡನೇ ಅರ್ಧದಲ್ಲಿ ಮೂರು ಆ್ಯಕ್ಷನ್​ ದೃಶ್ಯಗಳಿವೆ.

ಮೊದಲಾರ್ಧ ಹೇಗಿದೆ?:

ಭಿನ್ನ ಪಾತ್ರದ ಮೂಲಕ ಎಂಟ್ರಿ
ದರ್ಶನ್​ ಸಿನಿಮಾದಲ್ಲಿ ಎಂಟ್ರಿ ನೋಡೋಕೆ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆ್ಯಕ್ಷನ್​ ದೃಶ್ಯಗಳೊಂದಿಗೆ ಅವರಿಗೆ ಎಂಟ್ರಿ ಕೊಡಿಸೋಕೆ ನಿರ್ದೇಶಕರು ಕಾಯುತ್ತಿರುತ್ತಾರೆ. ಆದರೆ, ಈ ಬಾರಿ ನಿರ್ದೇಶಕ ತರುಣ್​ ಸುಧೀರ್​ ದರ್ಶನ್​ಗೆ ಬೇರೆ ರೀತಿಯಲ್ಲಿ ಎಂಟ್ರಿ ಕೊಡಿಸಿದ್ದಾರೆ. ಹನುಮನ ಪಾತ್ರದ ಮೂಲಕ ದರ್ಶನ್​ ಎಂಟ್ರಿ ಕೊಡುತ್ತಾರೆ.

ಎಲ್ಲಕ್ಕಿಂತಲೂ ಭಿನ್ನವಾಗಿದೆ ಪಾತ್ರ
ದರ್ಶನ್​ ಈ ಮೊದಲು ಸಾಕಷ್ಟು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಸಿನಿಮಾದ ಪಾತ್ರ ಇವೆಲ್ಲವುಗಳಿಗಿಂತಲೂ ವಿಶಿಷ್ಟವಾಗಿದೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ದರ್ಶನ್​ ಮಿಂಚಿದ್ದಾರೆ. ಇದು ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿದೆ.

ನಾಯಕಿಗೆ ಮಾಸ್​ ಎಂಟ್ರಿ
ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ನಾಯಕಿಯ ಪಾತ್ರ ಅಷ್ಟಾಗಿ ಹೈಲೈಟ್​ ಆಗುವುದಿಲ್ಲ. ಅಷ್ಟೇ ಅಲ್ಲ ಅವರ ಎಂಟ್ರಿ ಕೂಡ ತುಂಬಾನೇ ರೊಮ್ಯಾಂಟಿಕ್​ ಆಗಿರುತ್ತದೆ. ಆದರೆ, ರಾಬರ್ಟ್​ ಸಿನಿಮಾ ನಾಯಕಿ ಆಶಾ ಭಟ್​ಗೆ ಮಾಸ್ ಎಂಟ್ರಿ ಸಿಕ್ಕಿದೆ.

ಕಾಮಿಡಿ ಪಾತ್ರಗಳು ಕ್ಲಿಕ್​
ಸಿನಿಮಾ ಅಂದ ಮೇಲೆ ಅಲ್ಲಿ ಹಾಸ್ಯ ಅನ್ನೋದು ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅದೇ ರೀತಿ, ರಾಬರ್ಟ್​ ಸಿನಿಮಾದ ಮೊದಲಾರ್ಧದಲ್ಲಿ ಕಾಮಿಡಿ ಪಾತ್ರಗಳು ಸಾಕಷ್ಟು ಕ್ಲಿಕ್​ ಆಗಿದೆ. ಶಿವರಾಜ್​ ಕೆಆರ್ ಪೇಟೆ, ಚಿಕ್ಕಣ್ಣ, ಧರ್ಮಣ್ಣ ಪಾತ್ರಗಳು ಸಾಕಷ್ಟು ಹೈಲೈಟ್​ ಆಗಿದೆ.

ಫಸ್ಟ್​ ಹಾಫ್​ನಲ್ಲಿ ಎರಡು ಆ್ಯಕ್ಷನ್​ ದೃಶ್ಯ
ದರ್ಶನ್​ ಸಿನಿಮಾ ಎಂದಾಗ ನೆನಪಾಗೋದು ಆ್ಯಕ್ಷನ್​ ದೃಶ್ಯಗಳು. ರಾಬರ್ಟ್​ ಸಿನಿಮಾದಲ್ಲೂ ಸಾಕಷ್ಟು ಆ್ಯಕ್ಷನ್​ ಇದೆ ಎಂದು ಹೇಳಲಾಗಿತ್ತು. ಮೊದಲಾರ್ಧದಲ್ಲಿ ಕೇವಲ ಎರಡು ಆ್ಯಕ್ಷನ್​ ದೃಶ್ಯ ಮಾತ್ರ ಇಡಲಾಗಿದೆ. ಹೀಗಾಗಿ, ಪ್ರೇಕ್ಷಕರು ಎರಡನೇ ಆ್ಯಕ್ಷನ್​ ದೃಶ್ಯಕ್ಕಾಗಿ ಕಾದು ಕೂರಬೇಕಾಗಿದೆ.

ಮೊದಲಾರ್ಧದಲ್ಲಿ ಕಣ್ಣು ಹೊಡ್ಯಾಕ ಸಾಂಗ್​!
ಕಣ್ಣು ಹೊಡ್ಯಾಕ ಹಾಡನ್ನು ಚಿತ್ರತಂಡ ಯೂಟ್ಯೂಬ್​ನಲ್ಲಿ ರಿಲೀಸ್​ ಮಾಡಿತ್ತು. ಈ ಹಾಡನ್ನು ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಈ ಹಾಡು ಪ್ರೇಕ್ಷಕರಿಗೆ ಮೊದಲಾರ್ಧದಲ್ಲೇ ಎದುರುಗೊಳ್ಳಲಿದೆ. ಇದು ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದೆ.

ಕಥೆ ಬಿಟ್ಟುಕೊಟ್ಟಿಲ್ಲ…
ಸಿನಿಮಾದ ಇಂಟರ್​ವಲ್​ ಬಂದರೂ ಕಥೆ ಏನು ಎಂಬುದನ್ನು ರಾಬರ್ಟ್​ ಗುಟ್ಟಾಗಿಯೇ ಇಟ್ಟಿದ್ದಾನೆ. ಇದು ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: Roberrt Kannada Movie Review: ದರ್ಶನ್​ ನಟನೆಯ ರಾಬರ್ಟ್​ ಸಿನಿಮಾದ ಫಸ್ಟ್​ ಹಾಫ್​ನಲ್ಲಿ ಏನೆಲ್ಲ ಇದೆ?