ನಮ್ಮಲ್ಲಿ ಯಾರಲ್ಲೂ ಭಾಷಾಭಿಮಾನ ಇಲ್ಲ -ರೊಚ್ಚಿಗೆದ್ದ ದರ್ಶನ್

| Updated By: ಸಾಧು ಶ್ರೀನಾಥ್​

Updated on: Jan 29, 2021 | 2:58 PM

ನಮ್ಮಲ್ಲಿ ಯಾರಲ್ಲೂ ಭಾಷಾಭಿಮಾನ ಇಲ್ಲ. ನಾನು ಇದನ್ನು ಓಪನ್​ ಆಗಿ ಹೇಳುತ್ತೇನೆಂದು ಬೆಂಗಳೂರಿನ ಫಿಲ್ಮ್ ಚೇಂಬರ್​ನಲ್ಲಿ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮಲ್ಲಿ ಯಾರಲ್ಲೂ ಭಾಷಾಭಿಮಾನ ಇಲ್ಲ -ರೊಚ್ಚಿಗೆದ್ದ ದರ್ಶನ್
ನಟ ದರ್ಶನ್
Follow us on

ಬೆಂಗಳೂರು: ರಾಬರ್ಟ್​ ಚಿತ್ರ ರಿಲೀಸ್​ಗೆ ಟಾಲಿವುಡ್​ನಲ್ಲಿ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಫಿಲಂ ಚೇಂಬರ್​ಗೆ ನಿರ್ಮಾಪಕರು ಹಾಗೂ ನಟ ದರ್ಶನ್ ದೂರು ನೀಡಿದ್ದಾರೆ. ಈ ವೇಳೆ ಫಿಲಂ ಚೇಂಬರ್​ನಲ್ಲಿ ಮಾತನಾಡಿದ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮಲ್ಲಿ ಯಾರಲ್ಲೂ ಭಾಷಾಭಿಮಾನ ಇಲ್ಲ. ನಾನು ಇದನ್ನು ಓಪನ್​ ಆಗಿ ಹೇಳುತ್ತೇನೆಂದು ಬೆಂಗಳೂರಿನ ಫಿಲ್ಮ್ ಚೇಂಬರ್​ನಲ್ಲಿ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ. ತಮಿಳುನಾಡು, ಆಂಧ್ರಕ್ಕೆ ಹೋದ್ರೆ ಅಲ್ಲಿಯ ಭಾಷೆ ಬಳಸ್ತಾರೆ. ಅವರು ನಮ್ಮ ಭಾಷೆಯಲ್ಲಿ ಮಾತನಾಡಲ್ಲ. ಅವರ ಭಾಷೆಯಲ್ಲೇ ಮಾತಾಡ್ತಾರೆ, ಆದ್ರೆ ನಾವು ಹಾಗಲ್ಲ ಎಂದು ಹೇಳಿದ್ರು.

ದರ್ಶನ್ ಮಾತ್ರವಲ್ಲ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು
ಇನ್ನು ಟಾಲಿವುಡ್ ವಿರುದ್ಧ ನಟ ದರ್ಶನ್ ದೂರು ವಿಚಾರಕ್ಕೆ ಸಂಬಂಧಿಸಿ ಈ ವಿಚಾರದಲ್ಲಿ ದರ್ಶನ್ ಮಾತ್ರವಲ್ಲ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ T.S.ನಾಗಾಭರಣ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಹೇಳಿದ್ರು.

ಈ ವೇಳೆ ಮಾತನಾಡುತ್ತ ಭಾಷೆ ವಿಚಾರದಲ್ಲಿ ಭಾವನಾತ್ಮಕವಾಗಿ ಏನೂ ಮಾಡಬಾರದು. ಕಾನೂನಾತ್ಮಕವಾಗಿ ಮಾಡುವ ಕೆಲಸಗಳು ಉಳಿಯುತ್ತದೆ. ಭಾವನಾತ್ಮಕವಾಗಿ ಮಾಡೋಕೆ ಹೋದ್ರೆ ನ್ಯಾಯಾಲಯದಿಂದ ವಾಗ್ದಂಡನೆಗೆ ಗುರಿಯಾಗಬೇಕಾಗುತ್ತೆ. ಈ ವಿಚಾರದಲ್ಲಿ ದರ್ಶನ್ ಮಾತ್ರವಲ್ಲ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದರು.

ನಾನು ಡಬ್ಬಿಂಗ್ ವಿರೋಧಿ ಕ್ರಿಯಾ ಸಮಿತಿಯಲ್ಲಿ ಸಕ್ರಿಯವಾಗಿದ್ದೆ
ಡಬ್ಬಿಂಗ್ ಸಿನಿಮಾಗಳು ಬರ್ತಿದ್ರೆ ನೇರ ಸಿನಿಮಾ ಯಾಕೆ ಬೇಕು? ಕನ್ನಡ ಚಲನಚಿತ್ರ ಉದ್ಯಮಕ್ಕೆ ಮಾರಕವಾದ ಕೆಲಸಗಳು ನಡೆಯುತ್ತಿದೆ. ಅವುಗಳಿಂದ ಕನ್ನಡ ಚಿತ್ರ ರಂಗವನ್ನು ಕಾಪಾಡಿಕೊಳ್ಳಬೇಕು. ನಾನು ಡಬ್ಬಿಂಗ್ ವಿರೋಧಿ ಕ್ರಿಯಾ ಸಮಿತಿಯಲ್ಲಿ ಸಕ್ರಿಯವಾಗಿದ್ದೆ ಎಂದು ಹೇಳಿದ್ರು.

ಸೌಹಾರ್ದಯುತವಾಗಿ ಚರ್ಚಿಸಿ ಬಗೆಹರಿಸಲು ನಿರ್ಧಾರ -ಫಿಲ್ಮ್​ ಚೇಂಬರ್​ ಅಧ್ಯಕ್ಷ ಜೈರಾಜ್​

ತೆಲುಗು ಚಿತ್ರರಂಗದ ಸ್ವಜನ ಪಕ್ಷಪಾತ ನೀತಿಗೆ ದಚ್ಚು ಡಿಚ್ಚಿ, ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ದೂರು ಸಲ್ಲಿಸಿದ ರಾಬರ್ಟ್​ ನಿರ್ಮಾಪಕರು

Published On - 2:47 pm, Fri, 29 January 21