
ಕನ್ನಡ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ರಾಕಿಂಗ್ ಸ್ಟಾರ್ ಯಶ್ (Yash) ಜನಪ್ರಿಯತೆ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ಏರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ದೇಶದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್‌ಪತಿ’ ಅಂಗಳದಲ್ಲೂ ಈಗ ಯಶ್ ಅವರ ಹೆಸರು ಮೊಳಗಿದೆ. ಶೋನಲ್ಲಿ ಅವರ ಕುರಿತು ಪ್ರಶ್ನೆ ಎದುರಾಗಿದೆ.
ಕೌನ್ ಬನೇಗಾ ಕರೋಡ್ಪತಿ ಶೋನ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿದ್ದಾರೆ. ಈ ಶೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಪ್ರಮುಖ ಸೂಪರ್‌ಸ್ಟಾರ್‌ಗಳ ಬಿರುದುಗಳಿಗೆ ಸಂಬಂಧಿಸಿದಂತೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ‘ರಜನಿಕಾಂತ್ ‘ಸೂಪರ್’, ಚಿರಂಜೀವಿ ‘ಮೆಗಾ’, ಪವನ್ ಕಲ್ಯಾಣ್ ‘ಪವರ್’ ಆದರೆ, ಯಶ್ ಏನು?’ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಆಯ್ಕೆಗಳನ್ನು ಕೂಡ ನೀಡಲಾಯಿತು.
ಈ ವೇಳೆ’ರಾಕಿಂಗ್ ಸ್ಟಾರ್’ ಎಂದು ಸರಿಯಾದ ಉತ್ತರ ನೀಡಿದರು. ಅಮಿತಾಭ್ ಬಚ್ಚನ್ ಕೂಡ ಇದನ್ನು ಯಶ್ ಅವರ ಪಯಣವನ್ನು ಕೊಂಡಾಡಿದರು. ಕೆಬಿಸಿಯಂತಹ ರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ದಿಗ್ಗಜ ನಟರ ಸಾಲಿನಲ್ಲಿ ಯಶ್ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿರುವುದು ಅವರ ಅಗಾಧ ಕ್ರೇಜ್‌ಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ರಾರಾಜಿಸುತ್ತಿದೆ ಟಾಕ್ಸಿಕ್ ಪೋಸ್ಟರ್; ಯಶ್ ಅಭಿಮಾನಿಗಳಿಗೆ ಹಬ್ಬ
‘ಕೆಜಿಎಫ್’ ಸರಣಿಯ ಐತಿಹಾಸಿಕ ಯಶಸ್ಸಿನ ನಂತರ ಯಶ್ ಅವರ ಪ್ರತಿಯೊಂದು ನಡೆಯೂ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಪ್ರಸ್ತುತ ಅವರ ಅಭಿನಯದ ‘ಟಾಕ್ಸಿಕ್’ ಸಿನಿಮಾ ತೀವ್ರ ಕುತೂಹಲ ಮೂಡಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಭಾರಿ ಸದ್ದು ಮಾಡುತ್ತಿವೆ. ಇದಲ್ಲದೆ ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಯಶ್ ರಾವಣನಾಗಿ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಇದೇ ಆಗಸ್ಟ್ 26ರಂದು ಹಾಗೂ ದೀಪಾವಳಿಯಲ್ಲಿ ರಾಮಾಯಣ ಸಿನಿಮಾ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:44 am, Thu, 13 August 26