
ನಟ ಯಶ್ (Yash) ಅವರು ಕೇವಲ ಸ್ಯಾಂಡಲ್ವುಡ್ಗೆ ಸೀಮಿತ ಆಗಿಲ್ಲ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಅವರ ಡಿಮ್ಯಾಂಡ್ ಹೆಚ್ಚಿದೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿರುವ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ಅವರ ಲೈಫ್ಸ್ಟೈಲ್ ಕೂಡ ಬದಲಾಗಿದೆ. ಈಗ ಯಶ್ ಮನೆಗೆ ಹೊಸ ಐಷಾರಾಮಿ ಕಾರು ಬಂದಿದೆ. ರೇಂಜ್ ರೋವರ್ (Range Rover) ಕಾರನ್ನು ‘ರಾಕಿಂಗ್ ಸ್ಟಾರ್’ ಯಶ್ ಖರೀದಿಸಿದ್ದಾರೆ. ಕಪ್ಪು ಬಣ್ಣದ ಕಾರಿನಲ್ಲಿ ಅವರು ಪತ್ನಿ ರಾಧಿಕಾ ಪಂಡಿತ್ ಜೊತೆ ಸುತ್ತಾಡಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಯಶ್ ಅವರ ಮಕ್ಕಳಾದ ಯಥರ್ವ್ ಮತ್ತು ಆಯ್ರಾ ಕೂಡ ಪೋಸ್ ನೀಡಿದ್ದಾರೆ. ಹೊಸ ಕಾರಿನಲ್ಲಿ ಸುತ್ತಾಡಿದ ವಿಡಿಯೋ (Yash New Car Video) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆಲೆ ಎಷ್ಟು ಎಂದು ಕೂಡ ಅಭಿಮಾನಿಗಳು ಗೂಗಲ್ನಲ್ಲಿ ಹುಡುಕಾಡುತ್ತಿದ್ದಾರೆ.
ಹೊಸ ಕಾರು ಖರೀದಿಸಿರುವ ಯಶ್ಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅವರು ವೃತ್ತಿಜೀವನದಲ್ಲಿ ಇನ್ನಷ್ಟು ಯಶಸ್ಸು ಕಾಣಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಈ ಹೊಸ ರೇಂಜ್ ರೋವರ್ ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ! ಅನೇಕ ಐಷಾರಾಮಿ ಸೌಲಭ್ಯಗಳು ಈ ಕಾರಿನಲ್ಲಿವೆ. ಯಶ್ ನಟಿಸಲಿರುವ ಹೊಸ ಸಿನಿಮಾ ಇನ್ನಷ್ಟೇ ಸೆಟ್ಟೇರಬೇಕಿದೆ. ಅದಕ್ಕೂ ಮುನ್ನವೇ ಅವರು ದುಬಾರಿ ಬೆಲೆಯ ಕಾರನ್ನು ಖರೀದಿಸಿ ಸುದ್ದಿ ಆಗಿದ್ದಾರೆ.
ಯಶ್ ಅವರ 19ನೇ ಸಿನಿಮಾ ಬಗ್ಗೆ ತುಂಬ ಕುತೂಹಲ ಇದೆ. ಈ ಸಿನಿಮಾಗೆ ಯಾರು ನಿರ್ದೇಶನ ಮಾಡುತ್ತಾರೆ? ಬಂಡವಾಳ ಹೂಡಲಿರುವುದು ಯಾರು? ಸಿನಿಮಾದ ಶೀರ್ಷಿಕೆ ಏನು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಫ್ಯಾನ್ಸ್ ಕಾತುರರಾಗಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಗೆಲುವಿನ ಬಳಿಕ ಅವರು ದೀರ್ಘವಾದ ಬ್ರೇಕ್ ಪಡೆದುಕೊಂಡಿದ್ದಾರೆ. ಸೂಕ್ತ ತಯಾರಿಯೊಂದಿಗೆ ಹೊಸ ಸಿನಿಮಾಗೆ ಚಾಲನೆ ನೀಡಬೇಕು ಎಂಬುದು ಅವರ ಉದ್ದೇಶ. ಹಾಗಾಗಿ ಹೊಸ ಚಿತ್ರ ಅನೌನ್ಸ್ ಆಗುವ ಸಮಯ ಹಿಡಿಯುತ್ತಿದೆ.
ಇದನ್ನೂ ಓದು: Yash: ಯಶ್ಗಾಗಿ ದೊಡ್ಡ ಕಥೆ ಬರೆದಿದ್ದೆ, ಆದರೆ…; ನರ್ತನ್ ಓಪನ್ ಮಾತು
ಬಾಲಿವುಡ್ನಲ್ಲಿ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರು ಆ್ಯಕ್ಷನ್-ಕಟ್ ಹೇಳಲಿರುವ ರಾಮಾಯಣ ಆಧಾರಿತ ಸಿನಿಮಾ ಬಗ್ಗೆ ಹತ್ತಾರು ಗಾಸಿಪ್ಗಳು ಹರಿದಾಡುತ್ತಿವೆ. ಈ ಸಿನಿಮಾಗೆ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಸೀತೆ ಪಾತ್ರದಲ್ಲಿ ಆಲಿಯಾ ಭಟ್ ಹಾಗೂ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸುತ್ತಾರೆ ಎನ್ನಲಾಗುತ್ತಿದೆ. ಅದೇ ರೀತಿ ರಾವಣನ ಪಾತ್ರವನ್ನು ಯಶ್ ಅವರಿಗೆ ನೀಡಲಾಗುವುದು ಎಂಬ ಸುದ್ದಿ ಕೂಡ ಹರಿದಾಡಿತ್ತು. ಆದರೆ ಆ ಪಾತ್ರವನ್ನು ಮಾಡಲು ಯಶ್ ಒಪ್ಪಿಕೊಂಡಿಲ್ಲ ಎಂದು ಇತ್ತೀಚೆಗೆ ಮಾಹಿತಿ ಕೇಳಿಬಂದಿದೆ. ‘ರಾಕಿಂಗ್ ಸ್ಟಾರ್’ ಅವರು ರಾವಣನ ಪಾತ್ರವನ್ನು ತಿರಸ್ಕರಿಸಿದ್ದು ಒಳ್ಳೆಯದೇ ಆಯಿತು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.