ಕನ್ನಡದ ನಟ ಯಶ್ (Rocking Star Yash) ಅವರು ಪ್ಯಾನ್ ಇಂಡಿಯಾ ಹೀರೋ ಆಗಿ ಬೆಳೆದಿದ್ದಾರೆ. ಅವರಿಗೆ ವಿಶ್ವಾದ್ಯಂತ ಈಗ ಅಭಿಮಾನಿಗಳು ಇದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಯಶ್ ಇಂದಿಗೂ ಕೂಡ ಸರಳತೆಯನ್ನು ಮರೆತಿಲ್ಲ. ಅಪ್ಪಟ ಫ್ಯಾಮಿಲಿ ಮ್ಯಾನ್ ಆಗಿ ಅವರು ಜೀವನ ಸಾಗಿಸುತ್ತಿದ್ದಾರೆ. ಪತ್ನಿ ರಾಧಿಕಾ ಪಂಡಿತ್ (Radhika Pandit) ಮತ್ತು ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಸಲುವಾಗಿ ಯಶ್ ಸಮಯ ಹೊಂದಿಸಿಕೊಳ್ಳುತ್ತಾರೆ. ಜನ ಜಂಗುಳಿಯ ನಡುವೆ ಮಗಳನ್ನು ಹೆಗಲ ಮೇಲೆ ಹೊತ್ತು ಅವರು ಸಾಗುತ್ತಾರೆ. ಪುತ್ರಿಯಾಗಿ (Yash Daughter) ಚಿಕ್ಕ ಅಂಗಡಿಯಲ್ಲಿ ಯಶ್ ಚಾಕೊಲೇಟ್ ಖರೀದಿಸಿದ್ದಾರೆ. ಆ ಸಂದರ್ಭದ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಕುಟುಂಬದ ಜೊತೆ ತೆರಳಿದ್ದಾಗ ಮಗಳಿಗೆ ಚಾಕೊಲೇಟ್ ಕೊಡಿಸುವ ಸಲುವಾಗಿ ಯಶ್ ಅವರು ಪೆಟ್ಟಿಗೆ ಅಂಗಡಿಗೆ ಭೇಟಿ ನೀಡಿದ್ದಾರೆ. ಮಗಳು ಕೇಳಿದ ಚಾಕೊಲೇಟ್ ಕೊಡಿಸಿದ್ದಾರೆ. ಅವರ ಇಡೀ ಕುಟುಂಬವೇ ಸಿಂಪಲ್. ಪೆಟ್ಟಿಗೆ ಅಂಗಡಿಗೆ ಯಶ್ ತೆರಳಿದ್ದಾಗ ಅವರ ಜೊತೆ ರಾಧಿಕಾ ಪಂಡಿತ್ ಕೂಡ ಇದ್ದರು. ಸಿಂಪಲ್ ಮಹಿಳೆಯ ರೀತಿ ಅವರು ಅಲ್ಲಿ ಕುಳಿತಿರುವ ಫೋಟೋ ವೈರಲ್ ಆಗಿದೆ. ಇದನ್ನು ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾನಲ್ಲಿ ಶಾರುಖ್ ಖಾನ್ ನಟಿಸ್ತಾರಾ? ಯಶ್ ಕೊಟ್ಟರು ಉತ್ತರ
ತುಂಬ ಕಷ್ಟದಿಂದ ಬೆಳೆದುಬಂದ ನಟ ಯಶ್ ಅವರಿಗೆ ಇಂದು ಬಹುಭಾಷೆಯಲ್ಲಿ ಬೇಡಿಕೆ ಇದೆ. ಹಾಗಂತ ಅವರಲ್ಲಿನ ಸರಳತೆ ಕಾಣೆಯಾಗಿಲ್ಲ. ಕಷ್ಟ ಮತ್ತು ಬಡತನವನ್ನು ಕಂಡು ಬಂದಿರುವ ಅವರಿಗೆ ಎಲ್ಲ ಅನುಭವ ಇದೆ. ಮಗಳಿಗಾಗಿ ಸಾಮಾನ್ಯರಂತೆ ಪುಟ್ಟ ಅಂಗಡಿಗೆ ಬಂದ ಯಶ್ ಅವರ ಫೋಟೋ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಈ ಗುಣ ಎಲ್ಲರಿಗೂ ಇಷ್ಟ ಆಗಿದೆ. ಅನೇಕರಿಗೆ ಯಶ್ ಸಹಾಯ ಮಾಡಿದ್ದಾರೆ. ಆ ಕಾರಣದಿಂದಲೂ ಅವರನ್ನು ಕಂಡರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ.
‘ರಾಕಿಂಗ್ ಸ್ಟಾರ್’ ಯಶ್ ಅವರು ಈಗ ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಸೂಪರ್ ಹಿಟ್ ಆದ ನಂತರ ಯಶ್ ಈ ಸಿನಿಮಾ ಒಪ್ಪಿಕೊಂಡಿದ್ದರಿಂದ ನಿರೀಕ್ಷೆ ಜೋರಾಗಿದೆ. ಟೈಟಲ್ ಟೀಸರ್ ನೋಡಿ ಫ್ಯಾನ್ಸ್ ವಾವ್ ಎಂದಿದ್ದಾರೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಈ ಚಿತ್ರದಿಂದ ಬರುವ ಪ್ರತಿಯೊಂದು ಅಪ್ಡೇಟ್ಗಾಗಿ ಅಭಿಮಾನಿಗಳು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ