‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನೋಡಿ ಮರುಳಾದ ನಟಿ ಸಮಂತಾ; ತಂಡದ ಬಗ್ಗೆ ಮೆಚ್ಚುಗೆ

|

Updated on: Sep 18, 2023 | 9:39 AM

ಸಮಂತಾ ಟಾಲಿವುಡ್​ನ ಬೇಡಿಕೆಯ ನಟಿ. ಇಷ್ಟು ದಿನ ಅವರು ವಿದೇಶಕ್ಕೆ ತೆರಳಿದ್ದರು. ಈಗ ಭಾರತಕ್ಕೆ ಮರಳಿದ್ದಾರೆ. ಬೇರೆ ಬೇರೆ ಸಿನಿಮಾಗಳನ್ನು ನೋಡಿ ವಿಮರ್ಶೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ವೀಕ್ಷಿಸಿದ್ದಾರೆ. ಅದನ್ನು ‘ಮಾಸ್ಟರ್​ಪೀಸ್’ ಎಂದು ಕರೆದಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನೋಡಿ ಮರುಳಾದ ನಟಿ ಸಮಂತಾ; ತಂಡದ ಬಗ್ಗೆ ಮೆಚ್ಚುಗೆ
ಸಮಂತಾ-ರಕ್ಷಿತ್-ರುಕ್ಮಿಣಿ
Follow us on

ಸೆಪ್ಟೆಂಬರ್ 1ರಂದು ರಿಲೀಸ್ ಆದ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ (Sapta Sagaradaache Ello Movie) ಯಶಸ್ಸು ಕಂಡಿದೆ. ಈ ಸಿನಿಮಾ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆದುಕೊಂಡಿದೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಬಳಿಕ ರಕ್ಷಿತ್ ಹಾಗೂ ನಿರ್ದೇಶಕ ಹೇಮಂತ್ ರಾವ್ ಮತ್ತೊಮ್ಮೆ ಒಂದಾದರು. ಇವರ ಕಾಂಬಿನೇಷನ್ ಕೆಲಸ ಮಾಡಿದೆ. ಈಗ ಚಿತ್ರ ತೆಲುಗು ಭಾಷೆಗೆ ಡಬ್ ಆಗಿ ರಿಲೀಸ್ ಆಗೋಕೆ ರೆಡಿ ಆಗಿದೆ. ಅದಕ್ಕೂ ಮೊದಲು ಚಿತ್ರವನ್ನು ನೋಡಿ ಸಮಂತಾ ಮರುಳಾಗಿದ್ದಾರೆ. ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸಮಂತಾ ಟಾಲಿವುಡ್​ನ ಬೇಡಿಕೆಯ ನಟಿ. ಇಷ್ಟು ದಿನ ಅವರು ವಿದೇಶಕ್ಕೆ ತೆರಳಿದ್ದರು. ಈಗ ಭಾರತಕ್ಕೆ ಮರಳಿದ್ದಾರೆ. ಬೇರೆ ಬೇರೆ ಸಿನಿಮಾಗಳನ್ನು ನೋಡಿ ವಿಮರ್ಶೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ವೀಕ್ಷಿಸಿದ್ದಾರೆ. ಅದನ್ನು ‘ಮಾಸ್ಟರ್​ಪೀಸ್’ ಎಂದು ಕರೆದಿದ್ದಾರೆ. ‘ನೋಡಲೇಬೇಕಾದ ಸಿನಿಮಾ. ರಕ್ಷಿತ್ ಶೆಟ್ಟಿ, ರುಕ್ಮಣಿ ವಸಂತ್ ಹಾಗೂ ಹೇಮಂತ್ ರಾವ್ ತಂಡಕ್ಕೆ ಶುಭಾಶಯ’ ಎಂದಿದ್ದಾರೆ ಸಮಂತಾ.

ರಕ್ಷಿತ್ ಶೆಟ್ಟಿ ಅವರು ಪ್ರೆಸೆಂಟ್ ಮಾಡಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಕನ್ನಡದಲ್ಲಿ ಹಿಟ್ ಆದ ಬಳಿಕ ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಆಗಿ ಯಶಸ್ಸು ಕಂಡಿತು. ಅದೇ ರೀತಿ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಕೂಡ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಸಮಂತಾ ಅವರಿಂದ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿರುವುದರಿಂದ ತಂಡ ಖುಷಿಪಟ್ಟಿದೆ.

ಇದನ್ನೂ ಓದಿ: ‘ಕವಿತೆಯ ಅನುಭವ ಕೊಟ್ಟಿದೆ’; ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಗ್ಗೆ ರಾಜ್ ಬಿ. ಶೆಟ್ಟಿ ಮಾತು

ಸೆಪ್ಟೆಂಬರ್ 22ರಂದು ತೆಲುಗಿನಲ್ಲಿ ‘ಸಪ್ತ ಸಾಗರಾಲು ದಾಟಿ’ ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರ ಬಿಡುಗಡೆಯಾಗುತ್ತಿದೆ. ಈ ಮೊದಲು ರಿಲೀಸ್ ಆದ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಚಿತ್ರ ಕೂಡ ತೆಲುಗಿನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಬಗ್ಗೆಯೂ ಅಲ್ಲಿಯವರಿಗೆ ನಿರೀಕ್ಷೆ ಸೃಷ್ಟಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:36 am, Mon, 18 September 23