Sanchari Vijay: ನಟ ಸಂಚಾರಿ ವಿಜಯ್​ಗೆ ಶ್ರದ್ಧಾಂಜಲಿ ಅರ್ಪಿಸಿದ ಸಿಎಂ ಯಡಿಯೂರಪ್ಪ ಮತ್ತು ಸುದೀಪ್​

Sanchari Vijay Accident: ವೈದ್ಯರು ಮತ್ತು ಕುಟುಂಬದವರ ಕಡೆಯಿಂದ ಸಂಚಾರಿ ವಿಜಯ್ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಮುನ್ನವೇ ಅನೇಕರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ನಟ ಕಿಚ್ಚ ಸುದೀಪ್ ಸೇರಿ ಅನೇಕರು ಕಂಬನಿ ಮಿಡಿದಿದ್ದಾರೆ.

Sanchari Vijay: ನಟ ಸಂಚಾರಿ ವಿಜಯ್​ಗೆ ಶ್ರದ್ಧಾಂಜಲಿ ಅರ್ಪಿಸಿದ ಸಿಎಂ ಯಡಿಯೂರಪ್ಪ ಮತ್ತು ಸುದೀಪ್​
ಸಂಚಾರಿ ವಿಜಯ್​ -ಸುದೀಪ್​​

Updated on: Jun 14, 2021 | 1:56 PM

ನಟ ಸಂಚಾರಿ ವಿಜಯ್​ ಅವರಿಗೆ ಕಿಚ್ಚ ಸುದೀಪ್, ಸಿಎಂ ಯಡಿಯೂರಪ್ಪ ಸೇರಿ ಅನೇಕರು​ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ನೋವನ್ನು ಹಂಚಿಕೊಂಡಿರುವ ಸುದೀಪ್​, ಕಂಬನಿ ಮಿಡಿದಿದ್ದಾರೆ. ‘ಸಂಚಾರಿ ವಿಜಯ್​ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ತೀವ್ರ ನೋವಾಗುತ್ತದೆ. ಈ ಲಾಕ್​ಡೌನ್​ನಿಂತ ಕೆಲವೇ ದಿನಗಳ ಮುನ್ನ ಅವರನ್ನು ಭೇಟಿ ಮಾಡಿದ್ದೆ. ಅವರ ಮುಂದಿನ ಸಿನಿಮಾ ಬಗ್ಗೆ ನಾನು ಹೆಚ್ಚು ಎಗ್ಸೈಟ್​ ಆಗಿದ್ದೆ. ಅವರು ಇಲ್ಲದಿರುವುದು ತೀವ್ರ ನೋವಿನ ಸಂಗತಿ. ಕುಟುಂಬದವರು ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು’ ಎಂದು ಸುದೀಪ್ ಟ್ವೀಟ್​ ಮಾಡಿದ್ದಾರೆ.

ಶನಿವಾರ (ಜೂ.12) ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಸಂಚಾರಿ ವಿಜಯ್​ ಅವರಿಗೆ ಆಕ್ಸಿಡೆಂಟ್​ ಆಯಿತು. ಕೂಡಲೇ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವಿಷಯ ತಿಳಿಯುತ್ತಿದ್ದಂತೆಯೇ ಕಿಚ್ಚ ಸುದೀಪ್​ ಅವರು ಸಹಾಯಹಸ್ತ ಚಾಚಿದ್ದರು. ಅವರಿಂದಾಗಿ ವಿಜಯ್​ಗೆ ರಾತ್ರೋರಾತ್ರಿ ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವಾಯಿತು. ಅಷ್ಟಾದರೂ ಕೂಡ ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದರು.

ಇದನ್ನೂ ಓದಿ:

ಸಂಚಾರಿ ವಿಜಯ್​ ಬದುಕುಳಿಯುವ ಸಾಧ್ಯತೆ ಕಡಿಮೆ, ಆತನ ಅಂಗಾಂಗ ದಾನ ಮಾಡುತ್ತೇವೆ: ಸಹೋದರ ಸಿದ್ದೇಶ್​ ಗದ್ಗದಿತ

ಸಂಚಾರಿ ವಿಜಯ್​ ಮಾಡಿದ ಆ ಒಂದು ತಪ್ಪು ನಿರ್ಧಾರ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಯ್ತು

Published On - 1:20 pm, Mon, 14 June 21

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us