ಸುದೀಪ್ ಅಳಿಯನ ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಟೈಟಲ್; ರೆಟ್ರೋ ಲುಕ್​ನಲ್ಲಿ ಸಂಚಿತ್ ಎಂಟ್ರಿ

Sanchith Sanjeev Birthday: ‘ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರು 'ಮ್ಯಾಂಗೋ ಪಚ್ಚ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಈ ರೆಟ್ರೋ ಶೈಲಿಯ ಚಿತ್ರವು 90ರ ದಶಕದ ಹಿನ್ನೆಲೆಯನ್ನು ಹೊಂದಿದ್ದು, ಮೈಸೂರಿನಲ್ಲಿ ಚಿತ್ರೀಕರಣಗೊಳ್ಳಲಿದೆ. ಮಾಲಾಶ್ರೀ, ಮಯೂರ್ ಪಟೇಲ್, ಕಾಜಲ್ ಕುಂದರ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಫೆಬ್ರವರಿ 10 ರಿಂದ ಚಿತ್ರೀಕರಣ ಆರಂಭವಾಗಲಿದೆ.

ಸುದೀಪ್ ಅಳಿಯನ ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಟೈಟಲ್; ರೆಟ್ರೋ ಲುಕ್​ನಲ್ಲಿ ಸಂಚಿತ್ ಎಂಟ್ರಿ
ಸಂಚಿತ್ ಸಂಜೀವ್

Updated on: Feb 05, 2025 | 1:58 PM

ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ವೇದಿಕೆ ಸಿದ್ಧವಾಗಿದೆ. ಅವರ ಮೊದಲ ಸಿನಿಮಾದ ಕೆಲಸ ಅಧಿಕೃತವಾಗಿ ಆರಂಭ ಆಗುತ್ತಿದೆ. ಈ ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಸಂಚಿತ್ ಜನ್ಮದಿನದ ಪ್ರಯುಕ್ತ ಇಂದು  (ಫೆಬ್ರವರಿ 5) ಟೈಟಲ್ ಅನೌನ್ಸ್ ಆಗಿದೆ. ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿಬರುತ್ತಿದೆ.

ಕನ್ನಡದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ‘ಕೆಆರ್​ಜಿ ಸ್ಟುಡಿಯೋಸ್’ ಹಾಗೂ ‘ಸುಪ್ರಿಯಾ ಪಿಕ್ಚರ್ಸ್ ಸ್ಟುಡಿಯೋ’ ಒಟ್ಟಾಗಿ ಸಂಚಿತ್ ಅವರ ಮೊದಲ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಿನಿಮಾದ ಕಥೆ ಮೈಸೂರಿನಲ್ಲಿ ಸಾಗಲಿದ್ದು, 90ರ ದಶಕದಲ್ಲಿ ಕಥೆ ಮೂಡಿ ಬಂದಿದೆ ಎಂದು ಹೇಳಲಾಗಿದೆ. ಈ ಸಿನಿಮಾದ ಟೈಟಲ್ ಟೀಸರ್ ಗಮನ ಸೆಳೆದಿದೆ.

‘ಕ್ರೇಜಿ ಸ್ಟಾರ್’ ಹೆಸರಿನ ಬಾರ್​ಗೆ ಇಬ್ಬರ ಆಗಮನ ಆಗುತ್ತದೆ. ಇದರಲ್ಲಿ ಒಬ್ಬರು ವಿದೇಶಿ ಮಹಿಳೆ. ಮತ್ತೋರ್ವ ಲೋಕಲ್ ಗೈಡ್. ‘ಪ್ರಳಯಾಂತಕ’ ಹೆಸರಿನ ಟೇಬಲ್ ಮೇಲೆ ವಿದೇಶಿ ಮಹಿಳೆ ಕೂರಲು ಹೋಗುತ್ತಾರೆ. ಆದರೆ, ಅಲ್ಲಿ ಕೂರಬೇಡಿ ಎಂದು ಎಲ್ಲರೂ ಕೋರುತ್ತಾರೆ. ಆ ಪ್ರಳಯಾಂತಕ ಟೇಬಲ್ ರಿಸರ್ವ್ ಆಗಿರೋದು ಪಚ್ಚನಿಗೆ! ಆಗ ಕಥಾ ನಾಯಕನ ಎಂಟ್ರಿ ಆಗುತ್ತದೆ.

ಸಂಚಿತ್ ಸಂಜೀವ್ ಅವರು ರೆಟ್ರೋ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ. ಕಥಾ ನಾಯಕನಿಗೆ ಮ್ಯಾಂಗೋ ಪಚ್ಚ ಎಂದು ಕರೆಯೋದೇಕೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇದಕ್ಕೆ ಸಿನಿಮಾದಲ್ಲಿ ಉತ್ತರ ಸಿಗಬೇಕಿದೆ. ಈ ಚಿತ್ರದ ಪ್ರೋಮೋನ ಕಿಚ್ಚ ಸುದೀಪ್ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸುದೀಪ್ ಅಕ್ಕನ ಮಗ ಸಂಚಿತ್ ನಟನೆಯ ಹೊಸ ಚಿತ್ರ ಅನೌನ್ಸ್​; ಕಿಚ್ಚ, ಕೆಆರ್​ಜಿ ನಿರ್ಮಾಣ

ಈ ಚಿತ್ರದಲ್ಲಿ ಮಾಲಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಯೂರ್ ಪಟೇಲ್, ಕಾಜಲ್ ಕುಂದರ್ ಮೊದಲಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ವಿವೇಕ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳ ತೆರೆಹಿಂದೆ ಕೆಲಸ ಮಾಡಿದ ಅನುಭವ ಅವರಿಗೆ ಇದೆ.  ಕಾರ್ತಿಕ್, ಯೋಗಿ ಜಿ ರಾಜ್, ಪ್ರಿಯಾ ಸುದೀಪ್ ಬಂಡವಾಳ ಹೂಡುತ್ತಿದ್ದಾರೆ. ಫೆಬ್ರವರಿ 10ರಿಂದ ಸಿನಿಮಾದ ಶೂಟ್ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us