Actor Shivaram: ಸ್ಯಾಂಡಲ್​ವುಡ್ ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ; ಐಸಿಯುವಿನಲ್ಲಿ ಚಿಕಿತ್ಸೆ

ಸ್ಯಾಂಡಲ್​ವುಡ್ ಹಿರಿಯ ನಟ ಶಿವರಾಂ ಅವರಿಗೆ ಅಪಘಾತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Actor Shivaram: ಸ್ಯಾಂಡಲ್​ವುಡ್ ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ; ಐಸಿಯುವಿನಲ್ಲಿ ಚಿಕಿತ್ಸೆ
ನಟ ಶಿವರಾಂ (ಸಂಗ್ರಹ ಚಿತ್ರ)


ಚಂದನವನದ ಹಿರಿಯ ನಟ ಶಿವರಾಂ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಸಕೆರೆ ಹಳ್ಳಿಯ ಖಾಸಗಿ ಅಸ್ಪತ್ರೆಗೆ ಅವರು ದಾಖಲಾಗಿದ್ದಾರೆ. 3 ದಿನಗಳ ಹಿಂದೆ ಕಾರಿನಲ್ಲಿ ತೆರಳುವಾಗ ಅಪಘಾತವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಮನೆಗೆ ಮರಳಿದ್ದರು. ಮನೆಯಲ್ಲಿದ್ದ ವೇಳೆ ಶಿವರಾಂ ಅವರ ಸ್ಥಿತಿ ಮತ್ತೆ ಗಂಭೀರವಾಗಿದೆ. ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ವೈದ್ಯರು ಶಿವರಾಂ ಅವರ ಆರೋಗ್ಯ ಚೇತರಿಕೆಗೆ ಮಿರಾಕಲ್ ಆಗಬೇಕು ಎಂದು ಹೇಳಿದ್ದಾರೆ.

ಹಿರಿಯ ನಟ ಶಿವರಾಮ್ ಅವರ ಅರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರ ಅರೋಗ್ಯದ ಬಗ್ಗೆ ಶಿವರಾಮ್ ಹಿರಿಯ ಪುತ್ರ ರವಿಶಂಕರ್ ಮಾಹಿತಿ ನೀಡಿದ್ದಾರೆ. ‘‘ಮೂರು ದಿನಗಳ ಹಿಂದೆ ಕಾರಿನಲ್ಲಿ ಹೊರಗೆ ಹೋಗಿದ್ದ ವೇಳೆ ಕಾರ್ ಆಕ್ಸಿಡೆಂಟ್ ಆಗಿತ್ತು. ನಂತರ ಮೂರು ದಿನಗಳಿಂದ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮೊನ್ನೆ ರಾತ್ರಿ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ರೂಂಗೆ ಹೋಗಿದ್ದರು. ಆ ವೇಳೆ ರೂಂನಲ್ಲಿ ಬಿದ್ದ ಹಿನ್ನೆಲೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಮೊನ್ನೆ ರಾತ್ರಿಯೇ ಅಸ್ಪತ್ರೆಗೆ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡಿಸಿದ್ದೆವು. ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಯಿತು. ವೈದ್ಯರು ಸರ್ಜರಿ ಮಾಡಬೇಕು ಎಂದು ಹೇಳಿದರು. ಅದ್ರೆ ನಮ್ಮ ತಂದೆಗೆ ವಯಸ್ಸಾದ ಹಿನ್ನೆಲೆ ಸರ್ಜರಿ ಮಾಡಲು ಆಗಿಲ್ಲ. ಸದ್ಯ ಐಸಿಯುನಲ್ಲೇ ಅವರಿಗೆ ಚಿಕಿತ್ಸೆ ಮುಂದು ವರೆದಿದೆ’’ ಎಂದು ರವಿಶಂಕರ್ ಹೇಳಿದ್ದಾರೆ.

ವೈದ್ಯರು ಶಿವರಾಂ ಆರೋಗ್ಯದ ಕುರಿತು ಮಾಹಿತಿ ನೀಡಿರುವ ವಿಡಿಯೋ:

ಆಸ್ಪತ್ರೆಗೆ ದೊಡ್ಡಣ್ಣ ಭೇಟಿ:
ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ನಂತರ ಮಾತನಾಡಿದ ಅವರು, ‘‘ಹಿರಿಯ ನಟ ಶಿವರಾಮಣ್ಣವರು ಮನೆಯಲ್ಲಿ ಪೂಜೆ ಮಾಡುವಾಗ ಬಿದ್ದು ಗಾಯಗೊಂಡಿದ್ದರು.  ಶಿವರಾಮಣ್ಣವರು ಕನ್ನಡ ಚಿತ್ರರಂಗದ ಹಿರಿಯಕೊಂಡಿ. ಡಾ.ರಾಜ್​ಕುಮಾರ್​ ಜತೆ ಹೆಚ್ಚಿನ ಒಡನಾಟ ಇಟ್ಕೊಂಡಿದ್ದರು. ಅವರು ಆಸ್ಪತ್ರೆಗೆ ದಾಖಲಾದ ವಿಚಾರ ತಿಳಿದು ಗಾಬರಿಯಾದೆ. ಗುಣಮುಖರಾಗಿ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ’’ ಎಂದು ಬೆಂಗಳೂರಿನ ಆಸ್ಪತ್ರೆ ಬಳಿ ಹಿರಿಯ ನಟ ದೊಡ್ಡಣ್ಣ ನುಡಿದಿದ್ದಾರೆ. ಹಿರಿಯ ನಟಿ ಭಾರತಿಯವರು ಆಸ್ಪತ್ರೆಗೆ ಆಗಮಿಸಿದ್ದಾರೆ.

ಇದನ್ನೂ ಓದಿ:

ಮೈಸೂರು: ಕುಡಿದ ಅಮಲಿನಲ್ಲಿ ಇಬ್ಬರ ಕೊಲೆ; ಗರ್ಭಿಣಿ ಪತ್ನಿ ಸೇರಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ

Published On - 12:29 pm, Thu, 2 December 21

Click on your DTH Provider to Add TV9 Kannada