ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ರಿಸೆಪ್ಷನ್​ನಲ್ಲಿ.. ಯಶ್​​, ಸುದೀಪ್​ ಡಾನ್ಸ್ ಧಮಾಕಾ!

|

Updated on: Jan 17, 2021 | 6:13 PM

ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಅವರ ಆರತಕ್ಷತೆ ಕಾರ್ಯಕ್ರಮಕ್ಕೆ ಸ್ಯಾಂಡಲ್​ವುಡ್​ ನಟರು ಆಗಮಿಸಿ ನವದಂಪತಿಗೆ ಶುಭಹಾರೈಸಿದರು. ಈ ವೇಳೆ, ಸಮಾರಂಭದಲ್ಲಿ ನಟ ನಟಿಯರ ಡಾನ್ಸ್ ಧಮಾಕಾ ಎಲ್ಲರ ಗಮನ ಸೆಳೆಯಿತು.

ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ರಿಸೆಪ್ಷನ್​ನಲ್ಲಿ.. ಯಶ್​​, ಸುದೀಪ್​ ಡಾನ್ಸ್ ಧಮಾಕಾ!
ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ರಿಸೆಪ್ಷನ್​ನಲ್ಲಿ ಯಶ್​​, ಸುದೀಪ್​ ಡಾನ್ಸ್ ಧಮಾಕಾ!
Follow us on

ಬೆಂಗಳೂರು: ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಅವರ ಆರತಕ್ಷತೆ ಕಾರ್ಯಕ್ರಮಕ್ಕೆ ಸ್ಯಾಂಡಲ್​ವುಡ್​ ನಟರು ಆಗಮಿಸಿ ನವದಂಪತಿಗೆ ಶುಭಹಾರೈಸಿದರು. ಈ ವೇಳೆ, ಸಮಾರಂಭದಲ್ಲಿ ನಟ ನಟಿಯರ ಡಾನ್ಸ್ ಧಮಾಕಾ ಎಲ್ಲರ ಗಮನ ಸೆಳೆಯಿತು.

ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಚ್ಚ ಸುದೀಪ್​ ಅವರ ಜಬರ್​ದಸ್ತ್​ ಸ್ಟೆಪ್ಸ್ ನೋಡಿ ನೆರೆದವರು ಫುಲ್​ ಫಿದಾ ಆದರು. ಈ ವೇಳೆ, ನಟರ ಪತ್ನಿಯರು, ನಟಿ ಹರ್ಷಿಕಾ ಪೂಣಚ್ಚಾ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್​ ಅವರಿಗೆ ಸಾಥ್​ಕೊಟ್ಟರು.

ಅಂದ ಹಾಗೆ, ರಮೇಶ್​ ಅರವಿಂದ್​ ಪುತ್ರಿ ನಿಹಾರಿಕಾ ಹಾಗೂ ಅಕ್ಷಯ್ ಡಿಸೆಂಬರ್ 28ರಂದು ವೈವಾಹಿಕ‌ ಜೀವನಕ್ಕೆ ಕಾಲಿಟ್ಟಿದ್ದರು. ನಿನ್ನೆ ರಾತ್ರಿ ನಗರದ ಖಾಸಗಿ ಹೋಟೆಲ್​ನಲ್ಲಿ ರಿಸೆಪ್ಷನ್​ ಸಮಾರಂಭವನ್ನು ಆಯೋಜಿಸಲಾಗಿತ್ತು.

ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ, ಅಕ್ಷಯ್ ಆರತಕ್ಷತೆ: ಗಣ್ಯಾತಿಗಣ್ಯರಿಂದ ನವದಂಪತಿಗೆ ಶುಭಹಾರೈಕೆ

Published On - 5:44 pm, Sun, 17 January 21