ಸ್ಯಾಂಡಲ್​ವುಡ್​ ಬೌಲಿಂಗ್ ಲೀಗ್‌ 2ನೇ ಸೀಸನ್​ಗೆ ಸೆಲೆಬ್ರಿಟಿಗಳ ಉತ್ಸಾಹ; ನಡೆಯುತ್ತಿದೆ ತಯಾರಿ

|

Updated on: Nov 05, 2023 | 2:38 PM

Sandalwood Bowling League: ಚಂದನವನದಲ್ಲಿ ನಿರ್ಮಾಪಕ ಕಮರ್​ ಅವರು ಬೌಲಿಂಗ್​ ಲೀಗ್​ ಪರಿಚಯಿಸಿದರು. ಮೊದಲ ಸೀಸನ್​ಗೆ ಎಲ್ಲರಿಂದ ಸಿಕ್ಕ ಪ್ರತಿಕ್ರಿಯೆ ಕಂಡು ಅವರು ಖುಷಿ ಆಗಿದ್ದಾರೆ. ಹಾಗಾಗಿ ಮತ್ತೊಮ್ಮೆ ಅಷ್ಟೇ ಉತ್ಸಾಹದಿಂದ 2ನೇ ಸೀಸನ್​ನ ಬೌಲಿಂಗ್​ ಲೀಗ್​ ನಡೆಸಲು ಅವರು ಸಜ್ಜಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​ ಬೌಲಿಂಗ್ ಲೀಗ್‌ 2ನೇ ಸೀಸನ್​ಗೆ ಸೆಲೆಬ್ರಿಟಿಗಳ ಉತ್ಸಾಹ; ನಡೆಯುತ್ತಿದೆ ತಯಾರಿ
ಸ್ಯಾಂಡಲ್​ವುಡ್​ ಬೌಲಿಂಗ್​ ಲೀಗ್​ ಸುದ್ದಿಗೋಷ್ಠಿ
Follow us on

ಸ್ಯಾಂಡಲ್​ವುಡ್​ (Sandalwood) ಮಂದಿಗೆ ಕ್ರೀಡೆಯಲ್ಲಿ ಸಖತ್​ ಆಸಕ್ತಿ. ಸಿನಿಮಾ ಕೆಲಸಗಳ ನಡುನಡುವೆ ಕ್ರಿಕೆಟ್​, ಟೆನಿಸ್​ ಮುಂತಾದ ಪಂದ್ಯಗಳಲ್ಲಿ ಚಂದನವನದ ತಾರೆಯರು ಭಾಗಿ ಆಗುತ್ತಾರೆ. ಕ್ರಿಕೆಟ್, ಬ್ಯಾಡ್ಮಿಂಟನ್, ಕಬ್ಬಡಿ ಲೀಗ್‌ ಸೇರಿದಂತೆ ಹಲವು ಲೀಗ್‌ಗಳ ಜೊತೆಗೆ ಇದೀಗ ಬೌಲಿಂಗ್ ಲೀಗ್ (Bowling League) ಸಹ ಸೆಲೆಬ್ರಿಟಿಗಳ ವಲಯದಲ್ಲಿ ಕ್ರೇಜ್​ ಹುಟ್ಟುಹಾಕಿದೆ. ಕನ್ನಡ ಚಿತ್ರರಂಗದ ತಾರೆಯರು ಈ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಬೌಲಿಂಗ್ ಲೀಗ್ 2ನೇ ಸೀಸನ್​ಗೆ ಸಕಲ ಸಿದ್ಧತೆ ಶುರುವಾಗಿದೆ. ನಿರ್ಮಾಪಕ ಕಮರ್​ (Kamar) ಅವರು ಇದರ ಆಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳನ್ನು ಅವರು ಒಂದೆಡೆ ಸೇರಿಸುತ್ತಿದ್ದಾರೆ.

ಕಳೆದ ಬಾರಿ ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಸೀಸನ್​ನ ಬೌಲಿಂಗ್ ಲೀಗ್ ಯಶಸ್ವಿಯಾಗಿತ್ತು. ಅದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಆ ಯಶಸ್ಸಿನ ಬೆನ್ನಲ್ಲೇ ಇದೀಗ 2ನೇ ಸೀಸನ್​ನ ಬೌಲಿಂಗ್ ಲೀಗ್‌ ಆಯೋಜನೆಗೊಳ್ಳುತ್ತಿದೆ. ಅದರಲ್ಲಿ ಪಾಲ್ಗೊಳ್ಳಲು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಉತ್ಸಾಹ ತೋರಿಸಿದ್ದಾರೆ. ಈ ಬಾರಿಯ ಬೌಲಿಂಗ್ ಲೀಗ್ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಲಾಗಿದೆ. ಶನಿವಾರ (ನವೆಂಬರ್​ 4) ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸೆಲೆಬ್ರಿಟಿಗಳು ತಮ್ಮ ಎಗ್ಸೈಟ್​ಮೆಂಟ್​ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ‘ಟಗರು ಪಲ್ಯ’ ಚಿತ್ರಕ್ಕೆ ಜನಮೆಚ್ಚುಗೆ; ನಿರ್ಮಾಪಕನಾಗಿ ಡಾಲಿ ಧನಂಜಯ್​ಗೆ ಹ್ಯಾಟ್ರಿಕ್​ ಗೆಲುವು

ಚಂದನವನದಲ್ಲಿ ನಿರ್ಮಾಪಕ ಕಮರ್​ ಅವರು ಬೌಲಿಂಗ್​ ಲೀಗ್​ ಪರಿಚಯಿಸಿದರು. ಮೊದಲ ಸೀಸನ್​ಗೆ ಎಲ್ಲರಿಂದ ಸಿಕ್ಕ ಪ್ರತಿಕ್ರಿಯೆ ಕಂಡು ಅವರು ಖುಷಿ ಆಗಿದ್ದಾರೆ. ಹಾಗಾಗಿ ಮತ್ತೊಮ್ಮೆ ಅಷ್ಟೇ ಉತ್ಸಾಹದಿಂದ 2ನೇ ಸೀಸನ್​ನ ಬೌಲಿಂಗ್​ ಲೀಗ್​ ನಡೆಸಲು ಅವರು ಸಜ್ಜಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಕಾರುಣ್ಯ ರಾಮ್​, ರಚನಾ ಇಂದರ್​, ಧನ್ಯಾ ರಾಮ್​ಕುಮಾರ್​, ಬೃಂದಾ ಆಚಾರ್ಯಾ, ಸಾಕ್ಷಿ, ರಕ್ಷಿತಾ ಶೆಟ್ಟಿ, ಕೆಂಪೇಗೌಡ, ತರುಣ್​ ಚಂದ್ರ, ಭರತ್​ ಮುಂತಾದವರು ಭಾಗಿ ಆಗಿದ್ದರು.

ಇದನ್ನೂ ಓದಿ: ದೆವ್ವದ ಸಿನಿಮಾ ಶೂಟಿಂಗ್ ವೇಳೆ ಆದ ಅನುಭವಗಳ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು

ಮೊದಲ ಸೀಸನ್​ನ ಬೌಲಿಂಗ್​ ಲೀಗ್​ನಲ್ಲಿ ಶ್ರೀನಗರ ಕಿಟ್ಟಿ ನೇತೃತ್ವದ ತಂಡ ಗೆಲುವು ಸಾಧಿಸಿತ್ತು. ಹಾಗಾದರೆ, ಬಾರಿಯ ಬೌಲಿಂಗ್ ಲೀಗ್‌ ಟ್ರೋಫಿ ಯಾರ ಪಾಲಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಡಿಸೆಂಬರ್‌ ತಿಂಗಳಲ್ಲಿ ಲೀಗ್ ಆರಂಭ ಆಗಲಿದೆ. 2 ದಿನಗಳ ಕಾಲ ಲೀಗ್​ ನಡೆಯಲಿದೆ. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಬೌಲಿಂಗ್​ ಲೀಗ್​ನಲ್ಲಿ ಯಾವೆಲ್ಲ ವಿಶೇಷತೆಗಳು ಇರಲಿವೆ? ಭಾಗವಹಿಸುವ ಸೆಲೆಬ್ರಿಟಿಗಳು ಯಾರು ಎಂಬಿತ್ಯಾದಿ ವಿವರಗಳನ್ನು ‘ಕಮರ್​ ಫಿಲ್ಮ್​ ಫ್ಯಾಕ್ಟರ್​’ ಸದ್ಯದಲ್ಲೇ ನೀಡಲಿದೆ. ಈ ಬಾರಿ ಲೀಗ್‌ನಲ್ಲಿ 6 ತಂಡಗಳು ಇರಲಿದ್ದು, ಸೆಲೆಬ್ರಿಟಿಗಳ ಜೊತೆ ಪತ್ರಕರ್ತರು ಕೂಡ ಭಾಗವಹಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.