‘ಟಗರು ಪಲ್ಯ’ ಚಿತ್ರಕ್ಕೆ ಜನಮೆಚ್ಚುಗೆ; ನಿರ್ಮಾಪಕನಾಗಿ ಡಾಲಿ ಧನಂಜಯ್ಗೆ ಹ್ಯಾಟ್ರಿಕ್ ಗೆಲುವು
ಒಂದೆಡೆ ನಟನೆ, ಇನ್ನೊಂದೆಡೆ ನಿರ್ಮಾಣ.. ಹೀಗೆ ಎರಡೂ ಕ್ಷೇತ್ರಗಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಹಾಗಿದ್ದರೂ ಕೂಡ ಡಾಲಿ ಧನಂಜಯ್ ಅವರು ಈ ಎರಡೂ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ‘ಬಡವ ರಾಸ್ಕಲ್’, ‘ಹೆಡ್ ಬುಷ್’ ಮತ್ತು ‘ಟಗರು ಪಲ್ಯ’ ಸಿನಿಮಾಗಳ ಯಶಸ್ಸಿನಿಂದ ಅವರಿಗೆ ಹೊಸ ಹುಮ್ಮಸ್ಸು ಬಂದಂತೆ ಆಗಿದೆ.
ಚಿತ್ರರಂಗದಲ್ಲಿ ನಟ ಡಾಲಿ ಧನಂಜಯ್ (Daali Dhananjay) ಅವರು ಅಭಿನಯದ ಜೊತೆಗೆ ಸಿನಿಮಾಗಳ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ನಟನಾಗಿ ಅವರಿಗೆ ಭರ್ಜರಿ ಡಿಮ್ಯಾಂಡ್ ಇದೆ. ಹಾಗಂತ ಅವರು ಅಷ್ಟಕ್ಕೇ ಸುಮ್ಮನಾಗಿಲ್ಲ. ನಿರ್ಮಾಣದಲ್ಲೂ ಆಸಕ್ತಿ ಹೊಂದಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಧನಂಜಯ್ ಅವರು ತಮ್ಮದೇ ನಿರ್ಮಾಣ ಸಂಸ್ಥೆಯಾದ ‘ಡಾಲಿ ಪಿಕ್ಚರ್ಸ್’ (Daali Pictures) ಮೂಲಕ ಬೇರೆ ಕಲಾವಿದರು ಮತ್ತು ತಂತ್ರಜ್ಞರಿಗೂ ಅವಕಾಶ ನೀಡುತ್ತಿದ್ದಾರೆ. ನಟನಾಗಿ ಯಶಸ್ಸು ಕಂಡ ಅವರಿಗೆ ನಿರ್ಮಾಪಕನಾಗಿಯೂ ಗೆಲುವು ದಕ್ಕಿದೆ. ಈಗಾಗಲೇ 2 ಚಿತ್ರಗಳನ್ನು ನಿರ್ಮಿಸಿ ಸಕ್ಸಸ್ ರುಚಿ ಕಂಡಿದ್ದ ಡಾಲಿ ಅವರು 3ನೇ ಚಿತ್ರವಾದ ‘ಟಗರು ಪಲ್ಯ’ (Tagaru Palya Movie) ಸಿನಿಮಾಗೆ ಬಂಡವಾಳ ಹೂಡಿ ಭರ್ಜರಿ ಲಾಭ ಮಾಡುತ್ತಿದ್ದಾರೆ. ಆ ಮೂಲಕ ಅವರಿಗೆ ನಿರ್ಮಾಣದಲ್ಲಿ ಹ್ಯಾಟ್ರಿಕ್ ಗೆಲುವು ಸಿಕ್ಕಂತಾಗಿದೆ.
ಡಾಲಿ ಧನಂಜಯ್ ಅವರು ಮೊದಲು ನಿರ್ಮಾಣ ಶುರು ಮಾಡಿದ್ದು ‘ಬಡವ ರಾಸ್ಕಲ್’ ಸಿನಿಮಾ ಮೂಲಕ. ಅವರ ಪ್ರಯತ್ನಗಳಿಗೆ ಪ್ರೇಕ್ಷಕರು ಬೆಂಬಲ ಸೂಚಿಸುತ್ತಿದ್ದಾರೆ. ಮೂರು ಚಿತ್ರಗಳನ್ನು ನಿರ್ಮಿಸಿ, ಡಾಲಿ ಯಶಸ್ವಿಯಾಗಿದ್ದಾರೆ. ‘ಡಾಲಿ ಪಿಕ್ಚರ್ಸ್’ ಮೂಲಕ ಉತ್ತಮವಾದ ಸಿನಿಮಾಗಳು ಮೂಡಿಬರುತ್ತಿದೆ. ಈ ಸಂಸ್ಥೆಯಲ್ಲಿ ನಿರ್ಮಾಣವಾದ ಚಿತ್ರಗಳಿಂದ ಹೊಸ ಪ್ರತಿಭೆಗಳಿಗೆ ಚಾನ್ಸ್ ಸಿಗುತ್ತಿದೆ. ಗಾಂಧಿನಗರದಲ್ಲಿ ನಿರ್ಮಾಪಕನಾಗಿ ಡಾಲಿ ಧನಂಜಯ್ ಅವರ ಗೆಲುವಿನ ಓಟ ಮುಂದುವರಿದಿದೆ.
ಊರ್ ನೆನಪಿಸೋ ಸಿನಿಮಾ NAATI HIT! 💥🐏#TagaruPalya Running Successfully.
Book Your Tickets Now : https://t.co/ckCEVaZLPl#TagaruPalyaInCinemas#TagaruPalya @Dhananjayaka @dr_bhushana @iamruthaprem @ukkutni @vasukivaibhav @Karthik1423 @yogigraj #RangayanaRaghu @Itharaanooradha pic.twitter.com/DfnY1I1vPf
— Daali Pictures (@daali_pictures) October 29, 2023
ಒಂದೆಡೆ ನಟನೆ, ಇನ್ನೊಂದೆಡೆ ನಿರ್ಮಾಣ.. ಹೀಗೆ ಎರಡೂ ಕ್ಷೇತ್ರಗಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಹಾಗಿದ್ದರೂ ಕೂಡ ಡಾಲಿ ಧನಂಜಯ್ ಅವರು ಈ ಎರಡೂ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅಭಿನಯದಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿರುವ ಅವರು ಈಗ ನಿರ್ಮಾಣದಲ್ಲೂ ಅಚ್ಚುಕಟ್ಟುತನ ಪ್ರದರ್ಶಿಸಿದ್ದಾರೆ. ‘ಬಡವ ರಾಸ್ಕಲ್’, ‘ಹೆಡ್ ಬುಷ್’ ಮತ್ತು ‘ಟಗರು ಪಲ್ಯ’ ಸಿನಿಮಾಗಳ ಯಶಸ್ಸಿನಿಂದ ಅವರಿಗೆ ಹೊಸ ಹುಮ್ಮಸ್ಸು ಬಂದಂತೆ ಆಗಿದೆ.
ಇದನ್ನೂ ಓದಿ: ‘ಟಗರು ಪಲ್ಯ’ ಸಿನಿಮಾದಲ್ಲಿ ಪ್ರೇಮ್ ಮಗಳು ಅಮೃತಾ ನಟನೆ ಹೇಗಿದೆ?
‘ಟಗರು ಪಲ್ಯ’ ಚಿತ್ರಕ್ಕೆ ಜನರ ಮೆಚ್ಚುಗೆ:
ಅಕ್ಟೋಬರ್ 27ರಂದು ‘ಟಗರು ಪಲ್ಯ’ ಸಿನಿಮಾ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆದಿದೆ. ನಾಗಭೂಷಣ್, ಅಮೃತಾ ಪ್ರೇಮ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಅಪ್ಪಟ ಹಳ್ಳಿ ಸೊಗಡಿನ ಕಥೆಯನ್ನು ಹೊಂದಿದೆ. ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೌಟುಂಬಿಕ ಕಥಾಹಂದರ ಈ ಸಿನಿಮಾದಲ್ಲಿದೆ. ಹಾಗಾಗಿ ಫ್ಯಾಮಿಲಿ ಆಡಿಯನ್ಸ್ ಮನಸೋತಿದ್ದಾರೆ. ರಾಜ್ಯದ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಅದಕ್ಕಾಗಿ ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಈ ಸಿನಿಮಾದ ಗೆಲುವಿನ ಬಳಿಕ ‘ಡಾಲಿ ಪಿಕ್ಚರ್ಸ್’ ಸಂಸ್ಥೆಯ ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.