ಹಿಟ್ ಆಯ್ತು ‘ಟಗರು ಪಲ್ಯ’, ರೀಮೇಕ್ಗೂ ಬೇಡಿಕೆ, ಡಾಲಿ ಖುಷಿಗೆ ಪಾರವಿಲ್ಲ
Tagaru Palya: ಡಾಲಿ ಧನಂಜಯ್ ನಿರ್ಮಿಸಿ, ನಾಗಭೂಷಣ್, ಲವ್ಲಿ ಪ್ರೇಮ್ ಪುತ್ರಿ ಅಮೃತಾ ನಟಿಸಿರುವ ಅಪ್ಪಟ ಹಳ್ಳಿ ಸೊಗಡಿನ ಕತೆ ಹೊಂದಿರುವ 'ಟಗರು ಪಲ್ಯ' ಸಿನಿಮಾಕ್ಕೆ ಪ್ರೇಕ್ಷಕರ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದ ಶೋಗಳ ಸಂಖ್ಯೆ ಹೆಚ್ಚಾಗಿರುವ ಜೊತೆಗೆ ರೀಮೇಕ್ಗೂ ಬೇಡಿಕೆ ಹೆಚ್ಚಾಗಿದೆ.

ಒಳ್ಳೆಯ ಸಿನಿಮಾಗಳನ್ನು ಕನ್ನಡ ಸಿನಿಮಾ ಪ್ರೇಕ್ಷಕ ಕೈಬಿಟ್ಟ ಉದಾಹರಣೆ ಅಪರೂಪದಲ್ಲಿ ಅಪರೂಪ. ಒಳ್ಳೆಯ ಕತೆ, ಸರಳ ನಿರೂಪಣೆ, ಒಂದಿಷ್ಟು ತಿಳಿ ಹಾಸ್ಯ, ಜಿನ್ಯೂನ್ ಆದ ಭಾವನೆಗಳು ಇವುಗಳನ್ನು ಪ್ಪಟ ಹಳ್ಳಿಗಾಡಿನ ಕತೆಯೊಳಗೆ ಸೇರಿಸಿಬಿಟ್ಟರೆ ಆ ಸಿನಿಮಾವನ್ನು ಕನ್ನಡಿಗ ಕೈಬಿಡುವುದುಂಟೆ. ಈ ಎಲ್ಲ ಅಂಶಗಳನ್ನು ಒಳಗೊಂಡಿರುವ ‘ಟಗರು ಪಲ್ಯ‘ (Tagaru Palya) ಸಿನಿಮಾವನ್ನು ಸಹ ಕನ್ನಡ ಪ್ರೇಕ್ಷಕ ಕೈಹಿಡಿದಿದ್ದಾರೆ. ಸಿನಿಮಾ ಗೆದ್ದಿದೆ. ಮಾತ್ರವಲ್ಲ ಪರಭಾಷೆಗಳಿಗೂ ಹೋಗಲು ಸಜ್ಜಾಗುತ್ತಿದೆ.
ಕರ್ಮಷಿಯಲ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ಹಳ್ಳಿ ಸೊಗಡಿನ ಟಗರು ಪಲ್ಯವನ್ನು ಪ್ರೇಕ್ಷಕ ಚಪ್ಪರಿಸಿಕೊಂಡು ಸವಿಯುತ್ತಿದ್ದಾನೆ. ಶುಕ್ರವಾರ ರಾಜ್ಯಾದ್ಯಂತ ರಿಲೀಸ್ ಆಗಿದ್ದ ಚಿತ್ರ ಎಲ್ಲೆಡೆ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ದಿನದಿಂದ ದಿನಕ್ಕೆ ಶೋಗಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ.
ಸಂಬಂಧ, ಪ್ರೀತಿ, ನಗು, ಅಳು, ಹಳ್ಳಿಗರ ಅಮಾಯಕತೆ, ಹಳ್ಳಿಗಾಡಿನ ಜೀವನ ಹೀಗೆ ಒಂದೊಳ್ಳೆ ಫ್ಯಾಮಿಲಿ ಡ್ರಾಮಾ ಎನಿಸಿಕೊಂಡಿರುವ ‘ಟಗರು ಪಲ್ಯ’ ಸಿನಿಮಾ ಬಗ್ಗೆ ಪ್ರೇಕ್ಷಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿನಿಮಾದ ಸರಳತೆಯನ್ನು, ನೈಜತೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ವಿಮರ್ಶಕರು ಸಹ ಸಿನಿಮಾದ ಬಗ್ಗೆ ಧನಾತ್ಮಕವಾಗಿ ಮಾತನಾಡಿದ್ದಾರೆ. ಪ್ರೇಕ್ಷಕರು, ವಿಮರ್ಶಕರು ಇಬ್ಬರಿಂದಲೂ ಮೆಚ್ಚುಗೆ ಗಳಿಸಿರುವ ‘ಗಟರು ಪಲ್ಯ’ ಸಿನಿಮಾದ ರೀಮೇಕ್ ಹಕ್ಕುಗಳಿಗೂ ಬೇಡಿಕೆ ಹೆಚ್ಚಾಗುತ್ತಿದ್ದು, ತಮಿಳು, ತೆಲುಗು ಭಾಷೆಗಳ ಕೆಲ ನಿರ್ಮಾಪಕರು, ನಿರ್ದೇಶಕರು ಬೇಡಿಕೆ ಇಟ್ಟಿದ್ದಾರಂತೆ. ರೀಮೇಕ್ ಹಕ್ಕು ಮಾರಾಟದ ವಿಷಯ ಈಗಾಗಲೆ ಮಾತುಕತೆ ಹಂತದಲ್ಲಿದ್ದು ಸದ್ಯದಲ್ಲೇ ರಿಮೇಕ್ ಹಕ್ಕುಗಳು ಮಾರಾಟ ಆಗಲಿದೆ.
ಇದನ್ನೂ ಓದಿ:‘ಟಗರು ಪಲ್ಯ’ ಚಿತ್ರ ನೋಡಿದ ಶ್ರುತಿಗೆ ನೆನಪಾಯ್ತು ‘ಕಾಂತಾರ’, ‘ಕೆಜಿಎಫ್ 2’; ಕಾರಣ ಏನು?
ಡಾಲಿ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ ನಿರ್ಮಿಸಿರುವ ಮೂರನೇ ಸಿನಿಮಾ ಆಗಿರುವ ‘ಟಗರು ಪಲ್ಯ’ ಸಿನಿಮಾಗೆ ಉಮೇಶ್ ಕೆ ಕೃಪಾ ನಿರ್ದೇಶನ ಮಾಡಿದ್ದಾರೆ. ಇದು ಇವರ ಮೊದಲ ಸಿನಿಮಾ ಆಗಿದ್ದು ಮೊದಲ ಸಿನಿಮಾದಲ್ಲಿಯೇ ಗೆಲುವು ಸಾಧಿಸಿದ್ದಾರೆ. ತಾರಾ ಅನುರಾಧಾ, ರಂಗಾಯಣ ರಘು, ಅಮೃತಾ ಪ್ರೇಮ್, ನಾಗಭೂಷಣ್ ಸೇರಿದಂತೆ ಇಡೀ ಕಲಾವಿದರು ತಮ್ಮ ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ವಾಸುಕಿ ವೈಭವ್ ಅದ್ಭುತ ಮ್ಯೂಸಿಕ್ , ಧನಂಜಯ್ ಸಾಹಿತ್ಯ, ಎಸ್ ಕೆ ರಾವ್ ಛಾಯಾಗ್ರಹಣ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.
ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ ‘ಟಗರು ಪಲ್ಯ’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದ್ದು, ಪ್ರೀಮಿಯರ್ ಶೋ ನಲ್ಲಿಯೇ ಹಲವು ಸೆಲೆಬ್ರಿಟಿಗಳು ಸಿನಿಮಾ ನೋಡಿ ಮೆಚ್ಚಿಕೊಂಡು ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದರು. ಇದೀಗ ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ಸಹ ‘ಟಗರು ಪಲ್ಯ’ ಸಿನಿಮಾ ವೀಕ್ಷಿಸಲಿದ್ದಾರೆ. ಇನ್ನು ನಟ, ನಿರ್ಮಾಪಕ ಧನಂಜಯ್ ಹೈದ್ರಾಬಾದ್ ನಲ್ಲಿ ಅಭಿಮಾನಿಗಳೊಟ್ಟಿಗೆ ಟಗರು ಪಲ್ಯ ಸಿನಿಮಾ ವೀಕ್ಷಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ