AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆರೆ ಬೇಟೆ’ ಸಿನಿಮಾಕ್ಕೆ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳ ಮೆಚ್ಚುಗೆ

Kere Bete Movie: ಇತ್ತೀಚೆಗಷ್ಟೆ ಬಿಡುಗಡೆ ಆಗಿರುವ ‘ಕೆರೆ ಬೇಟೆ’ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ವಿಶೇಷವೆಂದರೆ ಈ ಭಿನ್ನ ಪ್ರಯತ್ನವನ್ನು ಪ್ರೇಕ್ಷಕ ಮಾತ್ರವಲ್ಲ, ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಸಹ ಇಷ್ಟಪಟ್ಟಿದ್ದಾರೆ.

‘ಕೆರೆ ಬೇಟೆ’ ಸಿನಿಮಾಕ್ಕೆ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳ ಮೆಚ್ಚುಗೆ
Follow us
ಮಂಜುನಾಥ ಸಿ.
|

Updated on: Mar 17, 2024 | 2:07 PM

ಇತ್ತೇಚೆಗೆ ಬಿಡುಗಡೆ ಆದ ‘ಕೆರೆಬೇಟೆ‘ (Kere Bete) ಸಿನಿಮಾ ಸ್ಯಾಂಡಲ್ ವುಡ್​ನಲ್ಲಿ ಸದ್ದು ಮಾಡುತ್ತಿದೆ. ಮಲೆನಾಡ ಸಣ್ಣ ಹಳ್ಳಿಯೊಂದರ ಕತೆ ಒಳಗೊಂಡ ‘ಕೆರೆ ಬೇಟೆ’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಸಿನಿಮಾಗಳ ಕೊರತೆ ಇದೆ, ಕಂಟೆಂಟ್ ಓರಿಯೆಂಟ್ ಸಿನಿಮಾಗಳು ಬರ್ತಾ ಇಲ್ಲ ಎನ್ನುವ ಕೊರಗಿಗೆ ಈಗ ಮದ್ದು ನೀಡಿದೆ ‘ಕೆರೆಬೇಟೆ’ ಸಿನಿಮಾ. ಜಾತಿ, ಪ್ರೀತಿ ಇನ್ನಿತರ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾ ಎಲ್ಲ ವಯೋಮಾನದ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಭಿನ್ನ ಕತೆ, ನಿರೂಪಣೆ, ಮೇಕಿಂಗ್ ಹೊಂದಿರುವ ಈ ಸಿನಿಮಾದ ಕತೆಗೆ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಸಹ ಮನಸೋತಿದ್ದಾರೆ.

ಉತ್ತಮ ಸಿನಿಮಾಗಳನ್ನು ಅಭಿಮಾನಿಗಳು ಯಾವತ್ತೂ ಕೈ ಬಿಡಲ್ಲ ಎನ್ನುವುದಕ್ಕೆ ಕೆರೆಬೇಟೆ ಚಿತ್ರವೇ ಸಾಕ್ಷಿ. ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದಷ್ಟೇ ಅಲ್ಲ ಸಿನಿಮಾ ಗಣ್ಯರು ಕೂಡ ಕೆರೆಬೇಟೆ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಗಣ್ಯರು ಕೂಡ ಉತ್ತಮ ಕಂಟೆಕ್ಟ್ ಇರುವ ಸಿನಿಮಾಗಳಿಗೆ ಸಪೋರ್ಟ್ ಮಾಡುತ್ತಾರೆ ಎನ್ನುವುದಕ್ಕೆ ಕೆರೆಬೇಟೆ ಸಿನಿಮಾ ಮತ್ತೊಂದು ಉದಾಹರಣೆ. ಸ್ಯಾಂಡಲ್​ವುಡ್​ನ ಹಲವು ಸೆಲೆಬ್ರಿಟಿಗಳು ‘ಕರೆಬೇಟೆ’ ಸಿನಿಮಾಕ್ಕೆ ಬೆಂಬಲ ನೀಡಿದ್ದಾರೆ.

ಸಿನಿಮಾ ಸೆಲೆಬ್ರಿಟಿಗಳು ಸಹ ಗೌರಿಶಂಕರ್ ಮತ್ತು ರಾಜಗುರು ಅವರ ಪರಿಶ್ರಮವನ್ನು ಕೊಂಡಾಡುತ್ತಿದ್ದಾರೆ. ಡಾಲಿ ಧನಂಜಯ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನೆನಪಿರಲಿ ಪ್ರೇಮ್, ನಿರ್ದೇಶಕರಾದ ಶಶಾಂಕ್, ಪವನ್ ಒಡೆಯರ್, ಕವಿರಾಜ, ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ‘ಕೆರೆ ಬೇಟೆ’ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. ಉತ್ತಮ ಸಿನಿಮಾಗಳಿಗೆ ಯಾವತ್ತೂ ಅನ್ಯಾಯವಾಗಬಾರದು ದಯವಿಟ್ಟು ಸಿನಿಮಾ ನೋಡಿ ಎಂದು ಪ್ರೇಕ್ಷಕರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಕೆರೆ ಬೇಟೆ: ಮಲೆನಾಡ ಗೊಂಬೆಗೆ ಮನಸೋತ ಮನೆಹಾಳನಿಗೆ ಭೇಷ್ ಎಂದ ರಿಯಲ್ ಸ್ಟಾರ್ ಉಪ್ಪಿ

‘ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ನಾನು ಕೂಡ ಸದ್ಯದಲ್ಲೇ ಸಿನಿಮಾವನ್ನು ನೋಡುತ್ತೇನೆ, ನೀವೆಲ್ಲರೂ ಸಿನಿಮಾ ನೋಡಿ’  ಎಂದು ಡಾಲಿ ಕೂಡ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇನ್ನು ನಟ ಧ್ರುವ ಸರ್ಜಾ ಕೂಡ ಕೆರೆಬೇಟಿ ಚಿತ್ರಕ್ಕೆ ಫಿದಾ ಆಗಿದ್ದಾರೆ. ‘ಎಲ್ಲಾ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ತಾ ಇದೆ. ಸಿನಿಮಾ ತುಂಬಾ ಚೆನ್ನಾಗಿ ಇದೆ. ಎಲ್ಲರೂ ಸಿನಿಮಾ ನೋಡಿ’ ಎಂದು ಅಭಿಮಾನಿಗಳಲ್ಲಿ ಕೇಳಿಡಿದ್ದಾರೆ. ನಿರ್ದೇಶಕ ಶಶಾಂಕ್ ಅವರಿಗೆ ಸಿನಿಮಾ ತುಂಬಾ ಇಷ್ಟವಾಗಿದೆ. ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಶಶಾಂಕ್ ಪ್ರೇಕ್ಷಕರಿಗೆ ಸಿನಿಮಾ ನೋಡುವಂತೆ ಕೇಳಿಕೊಂಡಿದ್ದಾರೆ.

ಸಿನಿಮಾದ ಕಥೆ, ನಿರ್ದೇಶನ, ಊಹಿಸಲಾಗದ ಟ್ವಿಸ್ಟ್, ಮಲೆನಾಡಿನ ಚಿತ್ರಣ, ಅಲ್ಲಿನ ಭಾಷೆ, ಆಚಾರ ವಿಚಾರ, ಕೆರೆಬೇಟೆ ಸಂಸ್ಕ್ರತಿ ಎಲ್ಲವನ್ನು ಈ ಚಿತ್ರದ ಮೂಲಕ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜಗುರು. ಚಿತ್ರದಲ್ಲಿ ನಾಯಕಿ ಬಿಂದು ಶಿವರಾಮ್ ಪಾತ್ರ, ಗೋಪಾಲ ದೇಶಪಾಂಡೆ, ಸಂಪತ್ ಕುಮಾರ್ ಮತ್ತು ನಟಿ ಹರಣಿಯವರ ಪಾತ್ರಗಳು ಸಹ ಅದ್ಭುತವಾಗಿ ಮೂಡಿ ಬಂದಿದೆ. ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ ಇದಾಗಿದ್ದು ಮಣ್ಣಿನ ಕಥೆಯ ಸಿನಿಮಾಗಳಿಗೆ ಯಾವತ್ತೂ ಸೋಲಿಲ್ಲ ಎನ್ನುವುದಕ್ಕೆ ಈ ಸಿನಿಮಾ ಮತ್ತೊಂದು ಉದಾಹರಣೆಯಾಗಿದೆ. ಕೆರೆಬೇಟೆ ಜನಮನ ಸಿನಿಮಾಸ್ ಬ್ಯಾಮರ್ ನಲ್ಲಿ ನಾಯಕ ಗೌರಿ ಶಂಕರ್ ಹಾಗೂ ಸಹೋದರ ಜೈ ಶಂಕರ್ ಪಟೇಲ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಗಗನ್ ಬದೇರಿಯ ಅವರ ಸಂಗೀತವಿದೆ. ಕೀರ್ತನ್ ಪೂಜಾರಿಯವರ ಛಾಯಾಗ್ರಹಣವಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ