‘ಕೆಜಿಎಫ್ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಹೈಪ್ ಸೃಷ್ಟಿಸಿಕೊಂಡಿದೆ. ಕೊವಿಡ್ ಎರಡನೇ ಅಲೆ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈಗ ಯಶ್ ಮುಂದಿನ ಸಿನಿಮಾ ಬಗ್ಗೆ ಅಚ್ಚರಿಯ ಅಪ್ಡೇಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ತೆರೆಕಂಡ ನಂತರದಲ್ಲಿ ಯಶ್ ನಿರ್ದೇಶಕ ನರ್ತನ್ ಜತೆ ಕೈ ಜೋಡಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಕೂಡ ದೊಡ್ಡ ಬಜೆಟ್ನಲ್ಲಿ ಮೂಡಿ ಬರುತ್ತಿದ್ದು, ಈಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ. ಮೂಲಗಳ ಪ್ರಕಾರ ನರ್ತನ್ ಸಿನಿಮಾದಲ್ಲಿ ಯಶ್ ನೇವಿ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.
ಯಶ್ ಈರೆಗೆ ಈ ರೀತಿಯ ಪಾತ್ರ ನಿರ್ವಹಿಸಿಲ್ಲ. ಈಗ ಅವರು ಭಿನ್ನ ಪಾತ್ರ ಮಾಡುತ್ತಿರುವ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಅಂದಹಾಗೆ, ನೌಕಾ ನೆಲೆಯ ಅಧಿಕಾರಿ ಎಂದರೆ, ಸಮುದ್ರ ದೃಶ್ಯಗಳು ಇರಲಿವೆಯೇ? ಹೌದು ಎಂದಾದರೆ ಶೂಟಿಂಗ್ ಎಲ್ಲಿ ನಡೆಯಲಿದೆ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
Buzz is that #YashBOSS is about to do a Navy officer role in his next project after #KGFChapter2 #Yash19
Directed by Narthan (Mufthi fame)
Waiting For The Official announcement ? @TheNameIsYash pic.twitter.com/VOWdo53gWE
— Bellary Yash FC® (@BellaryYashFc) June 17, 2021
ಕೆಜಿಎಫ್ ಜುಲೈ ತಿಂಗಳಲ್ಲಿ ತೆರೆಗೆ ಬರುವ ಬಗ್ಗೆ ಚಿತ್ರತಂಡ ಘೋಷಣೆ ಮಾಡಿತ್ತು. ಆದರೆ, ಕೊವಿಡ್ ಕಾರಣದಿಂದ ಇನ್ನೂ ಚಿತ್ರರಂಗ ಓಪನ್ ಆಗಿಲ್ಲ. ಹೀಗಾಗಿ, ಸಿನಿಮಾ ರಿಲೀಸ್ ಸದ್ಯಕ್ಕೆ ಸಾಧ್ಯವಾಗೋದು ಅನುಮಾನವೇ. ಪ್ಯಾನ್ ಇಂಡಿಯಾ ಚಿತ್ರವಾದ್ದರಿಂದ ಸಾಕಷ್ಟು ಸಮಯ ತೆಗೆದುಕೊಂಡು ಚಿತ್ರ ರಿಲೀಸ್ ಮಾಡಬಹುದು.
Fan Made Poster ??
Just A Buzz ??More Than 10K Tweets And Trending Nationwide ?#Yash19 #KGFChapter2 #YashBOSS pic.twitter.com/scbesp4vgX
— Only Yash™ (@TeamOnlyYash) June 17, 2021
ಕೆಜಿಎಫ್ 2 ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಈಗಾಗಲೆ ಸಲಾರ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ನಟನೆಯ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಹೀಗಿರುವಾಗಲೇ ಯಶ್ ಹೊಸ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ.
ನರ್ತನ್ ನಿರ್ದೇಶನದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಶಿವರಾಜ್ಕುಮಾರ್ ಹಾಗೂ ಶ್ರೀಮುರಳಿ ಕಾಂಬಿನೇಷನ್ನಲ್ಲಿ ತೆರೆಗೆ ತಂದ ಮಫ್ತಿ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಕಾರಣಕ್ಕ ಯಶ್-ನರ್ತನ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಚಿತ್ರದ ಮೇಲೆ ನಿರೀಕ್ಷೆ ಇದೆ.
ಇದನ್ನೂ ಓದಿ: ಅಭಿಮಾನಿಗಳ ಮನಗೆದ್ದ ರಾಧಿಕಾ ಪಂಡಿತ್ ಮಗು ಯಥರ್ವ್ ಯಶ್ ಮುದ್ದಾದ ನಗು; ಇಲ್ಲಿದೆ ವಿಡಿಯೋ
Published On - 7:20 pm, Thu, 17 June 21