ಕಾರ್ತಿಕ್ ಮಹೇಶ್ (Karthik Mahesh) ಹಾಗೂ ಸಂಗೀತಾ ಶೃಂಗೇರಿ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಆಪ್ತತೆ ಬೆಳೆದಿದೆ. ಆರಂಭದಿಂದ ಇಬ್ಬರೂ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಆದರೆ, ದಿನ ಕಳೆದಂತೆ ಇಬ್ಬರ ಮಧ್ಯೆ ಯಾಕೋ ಹೊಂದಾಣಿಕೆ ಆಗುತ್ತಿಲ್ಲ. ಇವರು ಕಿತ್ತಾಡಿಕೊಳ್ಳೋಕೆ ಶುರು ಮಾಡಿದ್ದಾರೆ. ಇಬ್ಬರ ಮಧ್ಯೆ ಮನಸ್ತಾಪಗಳು ಹೆಚ್ಚಾಗುತ್ತಿವೆ. ಸಂಗೀತಾ ಅವರು ತಮ್ಮ ಆಟಕ್ಕಾಗಿ ಕಾರ್ತಿಕ್ ಅವರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದು ಅವರ ಕಿವಿಗೆ ಬಿದ್ದರೆ ಯಾವ ರೀತಿಯಲ್ಲಿ ರಿಯಾಕ್ಟ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ನವೆಂಬರ್ 7ರ ಎಪಿಸೋಡ್ನಲ್ಲಿ ಮುಂಜಾನೆ ಕಾರ್ತಿಕ್ ಹಾಗೂ ಸಂಗೀತಾ ಬೆಡ್ನಿಂದ ಒಟ್ಟಿಗೆ ಎದ್ದರು. ಆಗ ಸಂಗೀತಾ ಅವರನ್ನು ಮಾತನಾಡಿಸಲು ಪ್ರಯತ್ನಿಸಿದರು ಕಾರ್ತಿಕ್. ‘ಎಲ್ಲರೂ ಮಲಗಿದ್ದಾರೆ ಮಾತನಾಡಬೇಡ’ ಎಂದು ಕಾರ್ತಿಕ್ಗೆ ಸಂಗೀತಾ ಹೇಳಿದರು. ಆದಾಗ್ಯೂ ಕಾರ್ತಿಕ್ ಮಾತನಾಡೋಕೆ ಹೋದರು. ಇದು ಸಂಗೀತಾಗೆ ಕೋಪ ತರಿಸಿತು. ಈ ಕೋಪ ನೋಡಿ ಕಾರ್ತಿಕ್ಗೆ ಅಸಮಾಧಾನ ಆಗಿದೆ.
‘ಶ್ ಅಂದ ತಕ್ಷಣ ನಾನು ಸುಮ್ಮನಿರಬೇಕು. ಇಷ್ಟೊಂದು ಡಾಮಿನೇಷನ್ ಆದರೆ ನನ್ನ ಬಳಿ ಸಾಧ್ಯವಿಲ್ಲ’ ಎಂದು ಸಂಗೀತಾ ಬಗ್ಗೆ ಕಾರ್ತಿಕ್ ಅವರು ತನಿಷಾ ಬಳಿ ಹೇಳಿದ್ದಾರೆ. ತನಿಷಾ ಅವರು ಕಾರ್ತಿಕ್ನ ಸಮಾಧಾನ ಮಾಡೋಕೆ ಪ್ರಯತ್ನಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯನ್ನು ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಕುಳಿತು ನೋಡುತ್ತಿದ್ದರು. ಅವರು ಈ ಜೋಡಿ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದರು.
‘ಸಂಗೀತಾ ಸ್ಟ್ರಾಂಗ್ ಆಗಿದ್ದಾರೆ. ಅವರಿಗೆ ಬೇರೆಯವರ ಸಹಾಯ ಬೇಡ. ಆದಾಗ್ಯೂ ಕಾರ್ತಿಕ್ ಜೊತೆ ಅವಳು ಆಪ್ತವಾಗಿದ್ದಾಳೆ. ಅವಳಿಗೆ ಕಾರ್ತಿಕ್ ಟಿಶ್ಯೂ ಪೇಪರ್ ಇದ್ದ ಹಾಗೆ. ಮುಖ ಒರೆಸಿಕೊಂಡು ಬಿಸಾಕುತ್ತಾಳೆ’ ಎಂದು ವರ್ತೂರು ಸಂತೋಷ್ ಅವರು ತಮ್ಮ ಅಭಿಪ್ರಾಯ ಹೊರಹಾಕಿದರು. ಇದಕ್ಕೆ ತುಕಾಲಿ ಸಂತೋಷ್ ಅವರು ಹೌದು ಎಂಬಂತೆ ತಲೆ ಅಲ್ಲಾಡಿಸಿದ್ದಾರೆ.
ಇದನ್ನೂ ಓದಿ: ‘ನಾನು ನಿಮ್ಮ ಉದ್ಯೋಗಿ ಅಲ್ಲ’; ಸಂಗೀತಾ, ತನಿಷಾ ಜೊತೆ ಜಗಳಕ್ಕೆ ಇಳಿದ ಸ್ನೇಹಿತ್
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರತಿ ದಿನ ರಾತ್ರಿ 9:30ಕ್ಕೆ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡೋಕೆ ಅವಕಾಶ ಇದೆ. ಈ ಬಾರಿ ಬಿಗ್ ಬಾಸ್ಗೆ ಒಳ್ಳೆಯ ಟಿಆರ್ಪಿ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:37 am, Wed, 8 November 23