AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜು ವೆಡ್ಸ್ ಗೀತಾ 2 ಸಿನಿಮಾ ಘೋಷಣೆ: ಕಿಟ್ಟಿ ಜೊತೆಗೆ ರಮ್ಯಾ ಇರ್ತಾರಾ?

Sanju Weds Geetha 2: ಸಂಜು ವೆಡ್ಸ್ ಗೀತಾ 2 ಸಿನಿಮಾದ ಪೋಸ್ಟರ್ ಬಿಡುಗಡೆ. ಶ್ರೀನಗರ ಕಿಟ್ಟಿ ಜೊತೆಗೆ ರಮ್ಯಾ ಸಹ ಇರಲದ್ದಾರಾ? ನಾಗಶೇಖರ್ ಹೇಳಿದ್ದು ಹೀಗೆ...

ಸಂಜು ವೆಡ್ಸ್ ಗೀತಾ 2 ಸಿನಿಮಾ ಘೋಷಣೆ: ಕಿಟ್ಟಿ ಜೊತೆಗೆ ರಮ್ಯಾ ಇರ್ತಾರಾ?
ಸಂಜು ವೆಡ್ಸ್ ಗೀತಾ 2
ಮಂಜುನಾಥ ಸಿ.
|

Updated on:Jul 08, 2023 | 12:08 PM

Share

ಸಂಜು ವೆಡ್ಸ್ ಗೀತಾ (Sanju Weds Geetha), ಕಳೆದ ಒಂದು ದಶಕದಲ್ಲಿ ಕನ್ನಡದಲ್ಲಿ ಬಂದ ಅತ್ಯುತ್ತಮ ಪ್ರೇಮಕಥಾ ಸಿನಿಮಾಗಳಲ್ಲಿ ಒಂದು ಎನ್ನಲಾಗುತ್ತದೆ. ಶ್ರೀನಗರ ಕಿಟ್ಟಿ (Srinagar Kitty) ಹಾಗೂ ರಮ್ಯಾರ (Ramya) ಕೆಮಿಸ್ಟ್ರಿ ಸಿನಿ ಪ್ರೇಮಿಗಳ ಮನಸ್ಸು ಗೆದ್ದಿತ್ತು, ಸಿನಿಮಾದ ಹಾಡುಗಳು, ಸಂಭಾಷಣೆ ಬಹಳ ಹಿಟ್ ಆಗಿದ್ದವು. ಚಿತ್ರೀಕರಣ ಮಾಡಿದ್ದ ವಿಧಾನವೂ ಸಿನಿಪ್ರೇಮಿಗಳಿಗೆ ಹಿಡಿಸಿತ್ತು. ಇದೀಗ ಸಂಜು ವೆಡ್ಸ್ ಗೀತಾ 2 ಸಿನಿಮಾದ ಘೋಷಣೆ ಆಗಿದ್ದು ಪೋಸ್ಟರ್ ಸಹ ಬಿಡುಗಡೆ ಆಗಿದೆ. ಇಂದು (ಜುಲೈ 08) ಶ್ರೀನಗರ ಹುಟ್ಟುಹಬ್ಬದ ಸಂದರ್ಭ ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.

ಸಂಜು ವೆಡ್ಸ್ ಗೀತ ಸಿನಿಮಾ ನಿರ್ದೇಶಿಸಿದ್ದ ನಾಗಶೇಖರ್ ಅವರೇ ಸಂಜು ವೆಡ್ಸ್ ಗೀತಾ 2 ಸಿನಿಮಾವನ್ನು ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಸಂಜು ವೆಡ್ಸ್ ಗೀತಾ ಸಿನಿಮಾ 2011 ರಲ್ಲಿ ಬಿಡುಗಡೆ ಆಗಿತ್ತು, ಅದಾದ 12 ವರ್ಷಗಳ ಬಳಿಕ ಎರಡನೇ ಭಾಗ ಘೋಷಣೆ ಆಗಿದೆ. ಆದರೆ ಈ ಸಿನಿಮಾದಲ್ಲಿ ನಾಯಕಿಯಾಗಿ ರಮ್ಯಾ ಇರಲಿದ್ದಾರಾ ಎಂಬ ಪ್ರಶ್ನೆಗೆ ನಾಗಶೇಖರ್ ಉತ್ತರ ನೀಡಿದ್ದಾರೆ.

”ಶ್ರೀನಗರ ಕಿಟ್ಟಿ ಅಂತೂ ಸಿನಿಮಾದಲ್ಲಿ ಇರಲಿದ್ದಾರೆ ಅದು ಖಾತ್ರಿ. ಆದರೆ ರಮ್ಯಾ ಅವರು ವಿದೇಶದಲ್ಲಿ ಇರುವ ಕಾರಣ ಅವರನ್ನು ಭೇಟಿಯಾಗಿ ಒಪ್ಪಿಗೆ ಕೇಳಿಲ್ಲ. ಗೀತಾ ಪಾತ್ರಕ್ಕೆ ಬೇರೆಯವರನ್ನು ಊಹಿಸಿಕೊಳ್ಳುವುದು ಕಷ್ಟ. ಒಂದೊಮ್ಮೆ ಅವರು ಒಪ್ಪಿಕೊಂಡರೆ ಸರಿ ಇಲ್ಲವಾದರೆ ಬೇರೆ ಆಯ್ಕೆಗಳನ್ನು ಹುಡುಕಬೇಕಾಗುತ್ತದೆ. ರಮ್ಯಾ ಅವರು ಕತೆಯನ್ನು ಒಪ್ಪಿಕೊಳ್ಳುವ ನಿರೀಕ್ಷೆ ಇದೆ. ಒಂದೊಮ್ಮೆ ಅವರು ಒಪ್ಪಿಕೊಳ್ಳದಿದ್ದರೆ ಅವರ ಶುಭಹಾರೈಕೆಯೊಂದಿಗೆ ನಾವು ಸಿನಿಮಾ ಪ್ರಾರಂಭಿಸುತ್ತೇವೆ. ರಮ್ಯಾ ಸದಾ ನಮಗೆ ಒಳ್ಳೆಯದನ್ನೇ ಬಯಸುತ್ತಾರೆ” ಎಂದಿದ್ದಾರೆ ನಾಗಶೇಖರ್.

ಇದನ್ನೂ ಓದಿ:ಬದುಕೋಕೆ ಗೂಳಿ ಆಗುವ ಗೌಳಿ; ಟ್ರೇಲರ್​ನಲ್ಲಿ ರಗಡ್ ಅವತಾರ ತಾಳಿದ ಶ್ರೀನಗರ ಕಿಟ್ಟಿ

ಸಂಜು ವೆಡ್ಸ್ ಗೀತಾ 2 ಸಿನಿಮಾದ ಮುಹೂರ್ತ ಆಗಸ್ಟ್ 15 ರಂದು ನಡೆಯಲಿದ್ದು ಅಂದೇ ಚಿತ್ರೀಕರಣ ಶುರುವಾಗಲಿದೆ. ಇತರೆ ಪಾತ್ರಗಳ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಸಿನಿಮಾದ ಹಾಡುಗಳು ಈಗಾಗಲೇ ರೆಕಾರ್ಡ್ ಆಗಿದ್ದು ಎಲ್ಲ ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ. ಕಳೆದ ಬಾರಿಗಿಂತಲೂ ಉತ್ತಮವಾದ ಸಿನಿಮಾ ನೀಡಬೇಕು ಎಂಬ ಜವಾಬ್ದಾರಿ ಇದೆ” ಎಂದ ನಾಗಶೇಖರ್, ಸಂಜು ವೆಡ್ಸ್ ಗೀತಾ ಸಿನಿಮಾದ ಮುಂದುವರೆದ ಭಾಗವಾ? ಅಥವಾ ಹೊಸ ಕತೆಯ ಎಂಬ ಪ್ರಶ್ನೆಗೆ ಅದೊಂದನ್ನು ಸದ್ಯಕ್ಕೆ ಗುಟ್ಟಾಗಿ ಇರಿಸಿಕೊಳ್ಳೋಣ ಎಂದಷ್ಟೆ ಹೇಳಿದರು.

ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಸಂಜು ವೆಡ್ಸ್ ಗೀತಾ 2 ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. 2011 ರಲ್ಲಿ ಬಿಡುಗಡೆ ಆಗಿದ್ದ ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಚಿತ್ರಣ ಹಾಗೂ ಅದರ ಹಿನ್ನೆಲೆಯಲ್ಲಿ ಒಂದು ಭಾವಕ ಪ್ರೇಮಕತೆಯನ್ನು ಹೊಂದಿತ್ತು. ಸಂಜು ವೆಡ್ಸ್ ಗೀತಾ ಸಿನಿಮಾ ಬಹಳ ದೊಡ್ಡ ಹಿಟ್ ಎನಿಸಿಕೊಂಡಿತ್ತು. ಶ್ರೀನಗರ ಕಿಟ್ಟು ಹುಟ್ಟುಹಬ್ಬಕ್ಕೆ ಸಂಜು ವೆಡ್ಸ್ ಗೀತಾ 2 ಜೊತೆಗೆ ಅವರ ನಟನೆಯ ಟೆರರ್ ಹೆಸರಿನ ಸಿನಿಮಾದ ಲುಕ್ ಸಹ ಬಿಡುಗಡೆ ಮಾಡಲಾಗಿದೆ. ಟೆರರ್ ಚಿತ್ರದಲ್ಲಿ ಆದಿತ್ಯ ಹಾಗೂ ಶ್ರೀನಗರ ಕಿಟ್ಟಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ರಂಜನ್ ನಿರ್ದೇಶನ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Sat, 8 July 23

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು