AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pramod Shetty: ರಿಷಬ್ ಶೆಟ್ಟಿ ಬಗ್ಗೆ ಯಾರಿಗೂ ಗೊತ್ತಿರದ ವಿಷಯ ಹಂಚಿಕೊಂಡ ಗೆಳೆಯ ಪ್ರಮೋದ್ ಶೆಟ್ಟಿ

Rishab Shetty: ರಿಷಬ್ ಶೆಟ್ಟಿ ಬಗ್ಗೆ ಯಾರಿಗೂ ತಿಳಿಯದ ವಿಷಯ ಹೇಳಿದ ಗೆಳೆಯ ಪ್ರಮೋದ್ ಶೆಟ್ಟಿ.

Pramod Shetty: ರಿಷಬ್ ಶೆಟ್ಟಿ ಬಗ್ಗೆ ಯಾರಿಗೂ ಗೊತ್ತಿರದ ವಿಷಯ ಹಂಚಿಕೊಂಡ ಗೆಳೆಯ ಪ್ರಮೋದ್ ಶೆಟ್ಟಿ
ರಿಷಬ್ ಶೆಟ್ಟಿ-ಪ್ರಮೋದ್ ಶೆಟ್ಟಿ
ಮಂಜುನಾಥ ಸಿ.
|

Updated on: Jul 08, 2023 | 10:16 AM

Share

ರಿಷಬ್ ಶೆಟ್ಟಿ (Rishab Shetty) ನಿನ್ನೆ (ಜುಲೈ 7) ಅದ್ಧೂರಿಯಾಗಿ ತಮ್ಮ ಅಭಿಮಾನಿಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ಆಯೋಜಿಸಲಾಗಿದ್ದ ರಿಷಬ್​ರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಹಲವು ಅಭಿಮಾನಿಗಳು ಆಗಮಿಸಿ ನೆಚ್ಚಿನ ನಟನಿಗೆ ಖುದ್ದಾಗಿ ಹುಟ್ಟುಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ. ಇದೇ ಕಾರ್ಯಕ್ರಮದ ವೇದಿಕೆಯಲ್ಲಿ ರಿಷಬ್​ರ ಪತ್ನಿ ಪ್ರಗತಿ ಶೆಟ್ಟಿ, ರಿಷಬ್ ಶೆಟ್ಟಿ ಫೌಂಡೇಶನ್​ಗೆ (Rishab Shetty Foundation) ಚಾಲನೆ ನೀಡಿದ್ದು ವಿಶೇಷವಾಗಿತ್ತು. ಫೌಂಡೇಶನ್​ಗೆ ಚಾಲನೆ ನೀಡಿದ ಬೆನ್ನಲ್ಲೆ ಮೈಕ್ ಕೈಗೆತ್ತಿಕೊಂಡ ರಿಷಬ್​ರ ಆತ್ಮೀಯ ಗೆಳೆಯ ಪ್ರಮೋದ್ ಶೆಟ್ಟಿ (Pramod Shetty), ರಿಷಬ್​ ಬಗ್ಗೆ ಯಾರಿಗೂ ತಿಳಿಯದ ವಿಷಯವೊಂದನ್ನು ಹಂಚಿಕೊಂಡರು.

”ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು’ ಸಿನಿಮಾದ ಬಳಿಕ ರಿಷಬ್ ಶೆಟ್ಟಿ ಪ್ರಚಾರವಿಲ್ಲದೆ ಸರ್ಕಾರಿ ಶಾಲೆಗಳಿಗೆ ಸಹಾಯ ಮಾಡುತ್ತಾ ಬಂದಿದ್ದಾನೆ. ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾನೆ. ಶಿಕ್ಷಕರ ವ್ಯವಸ್ಥೆ ಮಾಡಿಕೊಟ್ಟಿದ್ದಾನೆ. ಆದರೆ ಇದ್ಯಾರಿಗೂ ಗೊತ್ತಿಲ್ಲ, ಯಾರಿಗೂ ಹೇಳಿಕೊಳ್ಳುವ ಜಾಯಮಾನವೂ ನಮ್ಮದಲ್ಲ. ಆದರೆ ನಾನು ಈ ಸತ್ಯವನ್ನು ಹೇಳಬಹುದು. ಆದರೆ ಈ ಎಲ್ಲ ಕಾರ್ಯಗಳಲ್ಲಿಯೂ ಒಂದು ಶಿಸ್ತು, ನಿಯಮಿತತೆ ತರಲೆಂದು ಫೌಂಡೇಶನ್ ಪ್ರಾರಂಭ ಮಾಡಿದ್ದೀವಿ” ಎಂದರು ಪ್ರಮೋದ್ ಶೆಟ್ಟಿ.

”ಪ್ರಗತಿ ಶೆಟ್ಟಿ ಅವರು ಫೌಂಡೇಶನ್ ಮಾಡುವ ಯೋಜನೆ ಹಾಕಿದರು. ನಾನೂ ಸಹ ಅದಕ್ಕೆ ಸಾಥ್ ಕೊಟ್ಟಿದ್ದೇನೆ. ನಮ್ಮ ಉದ್ದೇಶ ಅಗತ್ಯ ಮಕ್ಕಳಿಗೆ ಶಿಕ್ಷಣ ನೀಡುವುದು, ಸರ್ಕಾರೆ ಶಾಲೆಗಳ ಉನ್ನತೀಕರಣಕ್ಕೆ ಸಹಾಯ ಮಾಡುವುದು. ಕಾಡುಜನರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವುದು. ಯಾವುದಾದರೂ ಮಕ್ಕಳಿಗೆ ನಮ್ಮ ನೆರವಿನ ಅಗತ್ಯ ಬಿದ್ದರೆ ನಮ್ಮ ಗಮನಕ್ಕೆ ತನ್ನಿ ನಾವು ಅವರಿಗೆ ಸಹಾಯ ಮಾಡುತ್ತೇವೆ” ಎಂದರು ಪ್ರಮೋದ್ ಶೆಟ್ಟಿ.

ಇದನ್ನೂ ಓದಿ:Kantara Movie: ‘ಕಾಂತಾರ’ ಯಶಸ್ಸಿನ ಬಳಿಕ ರಿಷಬ್​ ಶೆಟ್ಟಿ ತಲೆಯಲ್ಲಿ ಏನು ಓಡ್ತಿದೆ? ಪ್ರಮೋದ್​ ಶೆಟ್ಟಿ ಕೊಟ್ರು ಉತ್ತರ

ಮುಂದುವರೆದು, ”ಯಾವುದೋ ಫೌಂಡೇಶನ್ ಮಾಡಿದ್ದಾರೆ, ನಾನೂ ಮನೆಗೆ ಫೌಂಡೇಶನ್ ಹಾಕಿದ್ದೀನಿ, ರೂಫ್​ ಕಟ್ಟಲು ಹಣ ಕೊಡಿ ಎಂದೋ ಕುಡಿದು ಕಿಡ್ನಿ ಹಾಳಾಗಿದೆ ಹಣ ಕೊಡಿ ಎಂದೆಲ್ಲ ಮನೆಯ ಬಳಿ ಬರಬೇಡಿ, ನಾವು ಹಣ ಅಂಥಹದ್ದಕ್ಕೆಲ್ಲ ಹಣ ಕೊಡುವುದಿಲ್ಲ. ಅದಕ್ಕೆ ಸಹಾಯ ಮಾಡುವ ಬೇರೆ ಸಂಸ್ಥೆಗಳು ಇದ್ದಾವೆ. ನಾವು ಕೆಲಸ ಮಾಡಲು ಉದ್ದೇಶಿಸಿರುವುದು ಶಿಕ್ಷಣ ಕ್ಷೇತ್ರದಲ್ಲಿ. ಬಡಮಕ್ಕಳಿಗೆ ಶಿಕ್ಷಣ ಒದಗಿಸುವುದು ನಮ್ಮ ಫೌಂಡೇಶನ್​ನ ಉದ್ದೇಶ” ಎಂದರು.

ರಿಷಬ್ ಶೆಟ್ಟಿ ಫೌಂಡೇಶನ್ ಅನ್ನು ಪ್ರಗತಿ ಶೆಟ್ಟಿ ರಿಷಬ್​ರ ಹುಟ್ಟುಹಬ್ಬ ಆಯೋಜಿಸಿದ್ದ ವೇದಿಕೆಯಲ್ಲಿ ಅನಾವರಣ ಮಾಡಿದರು. ಮೊದಲಿನಿಂದಲೂ ನಮ್ಮ ಕೈಲಾದ ಸೇವೆ ಮಾಡುತ್ತಲೇ ಬಂದಿದ್ದೇವೆ ಆದರೆ ಅದನ್ನು ವ್ಯವಸ್ಥಿತ ರೀತಿಯಲ್ಲಿ ಮಾಡುವ ಉದ್ದೇಶಿದಿಂದ ಫೌಂಡೇಶನ್ ಪ್ರಾರಂಭಿಸಿದ್ದೇವೆ. ಸಮಾಜ ಸೇವೆ ರಿಷಬ್​ ಶೆಟ್ಟಿಯವರಿಗೆ ಖುಷಿ ಕೊಡುವ ಕೆಲಸ, ಹಾಗಾಗಿ ಅವರ ಹುಟ್ಟುಹಬ್ಬದಂದೇ ಈ ಉಡುಗೊರೆಯನ್ನು ಅವರಿಗೆ ನೀಡುತ್ತಿದ್ದೇವೆ. ದೇವರು ನಮಗೆ ಶಕ್ತಿ ಕೊಟ್ಟಷ್ಟು ದಿವಸ ನಾವು ರಿಷಬ್ ಶೆಟ್ಟಿ ಫೌಂಡೇಶನ್ ಮೂಲಕ ಬಡಮಕ್ಕಳ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ