ಪತಿ ರಿಷಬ್ ಶೆಟ್ಟಿಗೆ ವೇದಿಕೆ ಮೇಲೆಯೇ ಅದ್ಭುತ ಉಡುಗೊರೆ ಕೊಟ್ಟ ಪ್ರಗತಿ ಶೆಟ್ಟಿ

Pragathi Shetty: ರಿಷಬ್ ಶೆಟ್ಟಿ ಹುಟ್ಟುಹಬ್ಬ ಕಾರ್ಯಕ್ರಮದ ವೇದಿಕೆಯಲ್ಲಿ ರಿಷಬ್​ರ ಪತ್ನಿ ಪ್ರಗತಿ ಶೆಟ್ಟಿ ಅದ್ಭುತ ಉಡುಗೊರೆಯೊಂದನ್ನು ನೀಡಿದರು.

ಪತಿ ರಿಷಬ್ ಶೆಟ್ಟಿಗೆ ವೇದಿಕೆ ಮೇಲೆಯೇ ಅದ್ಭುತ ಉಡುಗೊರೆ ಕೊಟ್ಟ ಪ್ರಗತಿ ಶೆಟ್ಟಿ
ರಿಷಬ್-ಪ್ರಗತಿ
Follow us
ಮಂಜುನಾಥ ಸಿ.
|

Updated on: Jul 07, 2023 | 9:02 PM

ರಿಷಬ್ ಶೆಟ್ಟಿ (Rishab Shetty) ಇಂದು (ಜುಲೈ 07) ಅದ್ಧೂರಿಯಾಗಿ ಅಭಿಮಾನಿಗಳೊಟ್ಟಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ಅದ್ಧೂರಿ ವೇದಿಕೆಯಲ್ಲಿ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ. ವಿಶೇಷವೆಂದರೆ ಇದೇ ವೇದಿಕೆ ಮೇಲೆ ರಿಷಬ್​ರ ಪತ್ನಿ ಪ್ರಗತಿ ಶೆಟ್ಟಿ (Pragathi Shetty), ಪತಿ ರಿಷಬ್ ಶೆಟ್ಟಿಗೆ ಅದ್ಭುತವಾದ ಉಡುಗೊರೆಯನ್ನು ನೀಡಿದ್ದಾರೆ.

ಪ್ರಗತಿ ಶೆಟ್ಟಿಯವರು ರಿಷಬ್ ಶೆಟ್ಟಿ ಫೌಂಡೇಶನ್ ಅನ್ನು ಇಂದು ಲಾಂಚ್ ಮಾಡಿದ್ದಾರೆ. ಅದರ ಲೋಗೋ ಅನ್ನು ರಿಷಬ್​ರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿಯೇ ಅನಾವರಣ ಸಹ ಮಾಡಲಾಗಿದೆ. ಲೋಗೋ ಅನಾವರಣವಾದ ಬಳಿಕ ಮಾತನಾಡಿದ ಪ್ರಗತಿ ಶೆಟ್ಟಿ, ”ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು’ ಸಿನಿಮಾ ಮಾಡಿದಾಗಿನಿಂದಲೂ ರಿಷಬ್ ಶೆಟ್ಟಿಯವರು ಶಿಕ್ಷಣ ಕ್ಷೇತ್ರದಲ್ಲಿ ಕೈಲಾದ ಸೇವೆ ಮಾಡುತ್ತಲೇ ಇದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಆದರೆ ಅದ್ಯಾವುದೂ ಒಂದು ವ್ಯವಸ್ಥಿತ ರೀತಿಯಲ್ಲಿರಲಿಲ್ಲ” ಎಂದಿದ್ದಾರೆ ಪ್ರಗತಿ.

”ಸಮಾಜ ಸೇವೆ ಅದರಲ್ಲಿಯೂ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಕೊಡುವುದು ರಿಷಬ್​ಗೆ ಬಹಳ ಇಷ್ಟವಾಗುವ ಕೆಲಸ. ಈ ಬಗ್ಗೆ ನಾನು ರಿಷಬ್ ಬಹಳ ದಿನಗಳಿಂದ ಯೋಚಿಸುತ್ತಲೇ ಇದ್ದೆವು, ಟ್ರಸ್ಟ್ ಮಾಡಿ ಸಮಾಜಕ್ಕೆ ಉಪಯೋಗುವ ಕೆಲಸ ಮಾಡಬೇಕು ಅಂತ. ಹಾಗಾಗಿಯೇ ಯೋಚಿಸಿ ರಿಷಬ್ ಶೆಟ್ಟಿ ಫೌಂಡೇಶನ್ ಮಾಡಿದ್ದೇವೆ, ಇದಕ್ಕಿಂತಲೂ ಒಳ್ಳೆಯ ಉಡುಗೊರೆಯನ್ನು ರಿಷಬ್​ಗೆ ಕೊಡಲಾರೆ ಎನಿಸಿತು ಹಾಗಾಗಿ ಇದನ್ನು ಮಾಡಿದ್ದೇವೆ. ಮತ್ತು ಇದನ್ನು ಲಾಂಚ್ ಮಾಡಲು ಇದಕ್ಕಿಂತಲೂ ಒಳ್ಳೆಯ ದಿನವೂ ಸಿಗಲಾರದು” ಎಂದಿದ್ದಾರೆ ಪ್ರಗತಿ ಶೆಟ್ಟಿ.

ಇದನ್ನೂ ಓದಿ:‘ಕಾಂತಾರ’ ರಾಣಿ ಪ್ರಗತಿ ಶೆಟ್ಟಿಗೆ ಕಾಡುತ್ತಿದೆ ಚಿತ್ರೀಕರಣದ ನೆನಪು, ಕಾಂತಾರ 2 ನಲ್ಲಿ ಪತ್ನಿಗೆ ಮರು ಅವಕಾಶ ಕೊಡ್ತಾರಾ ರಿಷಬ್?

”ಶಿಕ್ಷಣ ನಮ್ಮ ಆದ್ಯತೆ, ನಮ್ಮ ಮೂಲಭೂತ ಹಕ್ಕು ಸಹ. ಹಾಗಿದ್ದರೂ ಸಹ ಎಷ್ಟೋ ಜನ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಎಷ್ಟೋ ಶಾಲೆಗಳಲ್ಲಿ ಸೂಕ್ತವಾದ ವ್ಯವಸ್ಥೆಗಳು ಇಲ್ಲ. ನಮ್ಮ ಉದ್ದೇಶ ಇಷ್ಟೆ, ನಮ್ಮ ಶಕ್ತಿ ಇದ್ದಷ್ಟು, ದೇವರು ಕೊಟ್ಟಷ್ಟು, ಸಮಾಜಕ್ಕೆ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಕೊಡುಗೆ ನೀಡುವ ಉದ್ದೇಶ ಹೊಂದಿದ್ದೇವೆ” ಎಂದರು ಪ್ರಗತಿ ಶೆಟ್ಟಿ.

ಅದಕ್ಕೂ ಮುನ್ನ ಮಾತನಾಡಿ, ಪತಿ ರಿಷಬ್ ಶೆಟ್ಟಿಗೆ ನಾಚುತ್ತಲೇ ಹ್ಯಾಪಿ ಬರ್ತ್​ಡೇ ಹೇಳಿದ ಪ್ರಗತಿ ಶೆಟ್ಟಿ, ”ಕಾಂತಾರದಿಂದ ನಾವು ಗಳಿಸಿದ್ದು ನಿಮ್ಮ ಪ್ರೀತಿ. ಅದನ್ನು ಹೀಗೆಯೇ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಇಲ್ಲಿ ನಿಮ್ಮನ್ನೆಲ್ಲ ನೋಡಿ, ಇಷ್ಟೋಂದು ಪ್ರೀತಿ ನೋಡಿ ನಾನು ಭಾವುಕಳಾಗಿದ್ದೇನೆ” ಎಂದರು.

ರಿಷಬ್ ಶೆಟ್ಟಿ ಇಂದು (ಜುಲೈ 07) ಅದ್ಧೂರಿಯಾಗಿ ಅಭಿಮಾನಿಗಳೊಟ್ಟಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ನಂದಿ ಗ್ರೌಂಡ್ಸ್​ನಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಿ ಅಭಿಮಾನಿಗಳೊಟ್ಟಿಗೆ ಮಾತನಾಡಿ, ಅವರೊಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡು ಸಂಭ್ರಮಿಸಿದ್ದಾರೆ ರಿಷಬ್. ಈ ವೇಳೆ ಅಭಿಮಾನಿಗಳಿಗಾಗಿ ಭರ್ಜರಿ ಊಟದ ವ್ಯವಸ್ಥೆಯನ್ನು ಸಹ ರಿಷಬ್ ಹಾಗೂ ತಂಡ ಆಯೋಜಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ