ನಿಮ್ಮ ಋಣ ತೀರಿಸುವ ಕಾರ್ಯವನ್ನು ಮಾಡುತ್ತಲೇ ಇರ್ತೀನಿ: ಬರ್ತ್​ಡೇಯಲ್ಲಿ ರಿಷಬ್ ಶೆಟ್ಟಿ ಭಾವುಕ

Rishab Shetty Birthday: ರಿಷಬ್ ಶೆಟ್ಟಿ ಹುಟ್ಟುಹಬ್ಬ ಕಾರ್ಯಕ್ರಮ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ನಡೆದಿದ್ದು, ಅಭಿಮಾನಿಗಳನ್ನುದ್ದೇಶಿಸಿ ಭಾವುಕರಾಗಿ ಮಾತನಾಡಿದರು ರಿಷಬ್.

ನಿಮ್ಮ ಋಣ ತೀರಿಸುವ ಕಾರ್ಯವನ್ನು ಮಾಡುತ್ತಲೇ ಇರ್ತೀನಿ: ಬರ್ತ್​ಡೇಯಲ್ಲಿ ರಿಷಬ್ ಶೆಟ್ಟಿ ಭಾವುಕ
ರಿಷಬ್ ಶೆಟ್ಟಿ
Follow us
ಮಂಜುನಾಥ ಸಿ.
|

Updated on: Jul 07, 2023 | 8:22 PM

ರಿಷಬ್ ಶೆಟ್ಟಿ (Rishab Shetty) ಮೊದಲ ಬಾರಿಗೆ ಅದ್ಧೂರಿಯಾಗಿ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ (Birthday) ಆಚರಿಸಿಕೊಂಡಿದ್ದಾರೆ. ಪ್ರಮೋದ್ ಶೆಟ್ಟಿ ಹಾಗೂ ರಿಷಬ್​ರ ಇತರೆ ಆತ್ಮೀಯರು ಸೇರಿ ಆಯೋಜಿಸಿದ್ದ ತಮ್ಮದೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು (Fan) ಉದ್ದೇಶಿಸಿ ಮಾತನಾಡಿದ ರಿಷಬ್ ಶೆಟ್ಟಿ, ”ನಾನು ಮಾಡಿರುವ ಸಂಪಾದನೆ ಎಂದರೆ ಅದು ನೀವೇ. ಮಳೆ ಬಂದರೂ ಇಷ್ಟುಹೊತ್ತು ನೀವು ಕಾದಿದ್ದೀರಿ, ಇದಕ್ಕಿಂತಲೂ ದೊಡ್ಡ ಸಂಪಾದನೆ ನನಗೆ ಇರಲಾರದು” ಎಂದರು.

”ಕಾಂತಾರ ಸಿನಿಮಾಕ್ಕೆ ಮುನ್ನ ಇದನ್ನೆಲ್ಲ ಹೇಗೆ ನಿಭಾಯಿಸಬೇಕು ಎಂಬುದು ಸಹ ನನಗೆ ಗೊತ್ತಿರಲಿಲ್ಲ. ಕಾಂತಾರದ ಬಳಿಕ ಹಲವು ಬಾರಿ ನೀವು ನನ್ನ ಮನೆಯ ಬಳಿ ಬಂದಿದ್ದೀರಿ, ಕಾರ್ಯಕ್ರಮಗಳಲ್ಲಿ ಭೇಟಿ ಆಗಲು ಯತ್ನಿಸಿದ್ದಿರಿ, ನನಗೂ ನಿಮ್ಮನ್ನು ಭೇಟಿ ಮಾಡುವ ಆಸೆಯಿತ್ತು ಆದರೆ ಸಾಧ್ಯವಾಗಿರಲಿಲ್ಲ. ಆದರೆ ನಿಮ್ಮನ್ನು ಭೇಟಿ ಮಾಡಲೇ ಬೇಕು ಎಂದುಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಆಯೋಜನೆಯ ಹಿಂದೆ ಪ್ರಮೋದ್ ಶೆಟ್ಟಿ ಹಾಗೂ ಪತ್ನಿ ಪ್ರಗತಿಯ ಒತ್ತಾಸೆ ಬಹಳ ದೊಡ್ಡದು” ಎಂದರು ರಿಷಬ್.

ಬೆಂಗಳೂರಿಗೆ ಬರ್ಬೇಕಾದ್ರೆ ಗಾಂಧಿನಗರದಲ್ಲಿ ಥೀಯೆಟರ್ ಎಲ್ಲಿದೆ ಅಂತಾನೇ ಗೊತ್ತಿರಲಿಲ್ಲ, ಕನಸು ಕಂಡ್ರೆ ಏನ್ ಬೇಕಾದ್ರು ಮಾಡಬಹುದು ಅಂತ ತೋರಿಸಿದ್ದಿರ, ನನ್ನಂತ ಮಿಡಲ್ ಕ್ಲಾಸ್ ಹುಡುಗನಿಗೆ ಸಿನಿಮಾ ಕನಸಿಗೆ ಜೀವ ತುಂಬಿದ್ದು ಅಭಿಮಾನಿಗಳು ಎಂದ ರಿಷಬ್, ಅಣ್ಣಾವ್ರು ಅಭಿಮಾನಿಗಳನ್ನ ದೇವರು ಅಂದರು ಅದು ನಿಜ. ಇವತ್ತು ಮಳೆಲಿ ಪ್ರೋಗ್ರಾಂ ಆಗುತ್ತಾ ಅಂತ ಡೌಟ್ ಇತ್ತು ಅದರೆ, ಕಾರ್ಯಕ್ರಮ ಆಗೆ ಅಗುತ್ತಾ ಬಾ ಅಂತ ಹೇಳಿದರು, ನೀವು ಇಷ್ಟೋತ್ತಿನ ಕಾದ್ರಲ್ಲ ಇದು ರಿಯಲ್ ಸಂಪಾದನೆ, ಇದಕ್ಕಿಂತ ಹೆಚ್ಚನದೇನು ನನಗೆ ಬೇಡ, ನನ್ನ ಹುಟ್ಟುಹಬ್ಬಕ್ಕೆ ನೀವೆಲ್ಲ ಬಂದಿರೋದೆ ನನಗೆ ದೊಡ್ಡ ಉಡುಗೊರೆ, ಕಾಂತಾರ ಸಕ್ಸಸ್ ಆಗೋಕೆ ಮೂಲ ಕಾರಣ ಕನ್ನಡಗರು ಅವರಿಗೆ ನಾನು ತಲೇಬಾಗುತ್ತೀನಿ. ಇನ್ನು ಅದ್ಭುತ ಸಿನಿಮಾಗಳನಗನ ಕೋಡ್ತಾನೆ ಹೋಗ್ತಿನಿ ನಾನು ಯಾವಾಗಲು ಋಣಿ” ಎಂದರು ರಿಷಬ್ ಶೆಟ್ಟಿ.

ಇದನ್ನೂ ಓದಿ:Kantara 2 Movie: ರಿಷಬ್ ಶೆಟ್ಟಿಗೆ ‘ಹೊಂಬಾಳೆ’ ಕಡೆಯಿಂದ ಬರ್ತ್​ಡೇ ವಿಶ್​; ಅಭಿಮಾನಿಗಳಿಗೆ ನಿರಾಸೆ

ರಿಷಬ್ ಶೆಟ್ಟಿ, ಕಪ್ಪು ಶರ್ಟ್, ಬಿಳಿ ಪಂಚೆ ಉಟ್ಟು ಪತ್ನಿ ಪ್ರಗತಿ ಶೆಟ್ಟಿ ಅವರೊಟ್ಟಿಗೆ ವೇದಿಕೆಗೆ ಆಗಮಿಸಿದ್ದರು. ರಿಷಬ್ ಆಗಮನದ ವೇಳೆ ಅಭಿಮಾನಿಗಳ ಶಿಳ್ಳೆ-ಚಪ್ಪಾಳೆ ಮುಗಿಲು ಮುಟ್ಟಿತ್ತು. ಕೇಕ್ ಕತ್ತರಿಸುವ ಬದಲಿಗೆ ದೀಪ ಹಚ್ಚಿ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮಕ್ಕೆ ರಿಷಬ್ ಚಾಲನೆ ನೀಡಿದರು. ವೇದಿಕೆ ಮೇಲೆ ಹುಲಿ ಕುಣಿತ ಜೋರಾಗಿತ್ತು, ರಿಷಬ್ ಶೆಟ್ಟಿ ಸಹ ಪಂಚೆ ಉಟ್ಟುಕೊಂಡೆ ಕಲಾವಿದರೊಟ್ಟಿಗೆ ಹುಲಿ ಕುಣಿತ ಹಾಕಿದರು, ಪ್ರಮೋದ್ ಶೆಟ್ಟಿ ಹಾಗೂ ರಿಷಬ್​ರ ಇನ್ನೂ ಕೆಲವು ಗೆಳೆಯರು ಅವರೊಟ್ಟಿಗೆ ಸೇರಿಕೊಂಡರು. ಜೊತೆಗೆ ಕಾಂತಾರ ಸಿನಿಮಾದ ಕೆಲವು ಸಂಭಾಷಣೆಗಳನ್ನು ಹೇಳಿ ಅಭಿಮಾನಿಗಳನ್ನು ರಿಷಬ್ ಶೆಟ್ಟಿ ರಂಜಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ