AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟುಹಬ್ಬ ಆಚರಣೆಗೆ ಬಂದ ಅಭಿಮಾನಿಗಳಿಗೆ ಭರ್ಜರಿ ಊಟ ಹಾಕಿಸಿದ ರಿಷಬ್: ಮೆನು ಏನಿತ್ತು?

Rishab Shetty: ರಿಷಬ್ ಶೆಟ್ಟಿ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಆಗಮಿಸಿದ ಅಭಿಮಾನಿಗಳಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೆನುವಿನಲ್ಲಿ ಏನೇನಿತ್ತು?

ಹುಟ್ಟುಹಬ್ಬ ಆಚರಣೆಗೆ ಬಂದ ಅಭಿಮಾನಿಗಳಿಗೆ ಭರ್ಜರಿ ಊಟ ಹಾಕಿಸಿದ ರಿಷಬ್: ಮೆನು ಏನಿತ್ತು?
ರಿಷಬ್
ಮಂಜುನಾಥ ಸಿ.
|

Updated on: Jul 07, 2023 | 9:40 PM

Share

ಬೆಂಗಳೂರಿನ ನಂದಿ ಲಿಂಕ್​ ಗ್ರೌಂಡ್​ನಲ್ಲಿ ಅದ್ದೂರಿಯಾಗಿ ಇಂದು ರಿಷಬ್ ಶೆಟ್ಟಿ (Rishab Shetty) ಹುಟ್ಟುಹಬ್ಬ ಆಚರಿಸಲಾಗಿದೆ. ವಾರದ ಮೊದಲೇ ಈ ಬಗ್ಗೆ ವಿಡಿಯೋ ಮಾಡಿ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದ ರಿಷಬ್, ಕಾಂತಾರದ (Kanthara) ಬಳಿಕ ಹಲವರು ಮನೆಯ ಹತ್ತಿರ ಬಂದು ಭೇಟಿಗೆ ಯತ್ನಿಸಿದ್ದೀರಿ, ಹಲವು ಕಾರ್ಯಕ್ರಮಗಳಲ್ಲಿ ಭೇಟಿಗೆ ಕಾದಿದ್ದೀರಿ ಆದರೆ ಸರಿಯಾಗಿ ನಿಮ್ಮನ್ನು ಭೇಟಿ ಆಗಲು ಆಗಿರಲಿಲ್ಲ, ಹಾಗಾಗಿ ಈ ಬಾರಿ ನನ್ನ ಹುಟ್ಟುಹಬ್ಬದಂದು ಎಲ್ಲರನ್ನೂ ಭೇಟಿ ಆಗುತ್ತೀನಿ ಎಂದಿದ್ದರು. ಅಂತೆಯೇ ಇಂದು (ಜುಲೈ 7) ಅಭಿಮಾನಿಗಳನ್ನು (Fan) ಭೇಟಿಯಾಗಿ ಅವರೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ರಿಷಬ್.

ರಿಷಬ್​ರ ಹುಟ್ಟುಹಬ್ಬ ಆಚರಣೆಗೆ ಕಳೆದೆರಡು ದಿನಗಳಿಂದಲೂ ನಂದಿ ಲಿಂಕ್​ ಗ್ರೌಂಡ್​ನಲ್ಲಿ ತಯಾರಿ ನಡೆದಿತ್ತು, ರಿಷಬ್​ರ ಆತ್ಮೀಯ ಗೆಳೆಯ ಪ್ರಮೋದ್ ಶೆಟ್ಟಿ ಹಾಗೂ ಇನ್ನಿತರರು ಕಾರ್ಯಕ್ರಮ ಆಯೋಜನೆಯ ಮುಂದಾಳತ್ವ ವಹಿಸಿ ಅಭಿಮಾನಿಗಳಿಗೆ ಸಮಸ್ಯೆ ಆಗದಂತೆ ವ್ಯವಸ್ಥೆಗಳನ್ನು ಮಾಡಿದ್ದರು, ವೇದಿಕೆ ನಿರ್ಮಿಸಿದ್ದರು. ಜೊತೆಗೆ ದೂರ ದೂರಗಳಿಂದ ಬರುವ ರಿಷಬ್​ರ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿಸಿದ್ದರು.

ರಿಷಬ್​ರ ಅಭಿಮಾನಗಳಿಗಾಗಿ ಪುಲಾವ್, ಮೊಸರು ಬಜ್ಜಿ, ಮೊಸರನ್ನ, ಉಪ್ಪಿನ ಕಾಯಿ, ಅನ್ನ, ರಸಂ, ಮದ್ದೂರು ವಡೆ, ಬರ್ಫಿ, ಹಪ್ಪಳಗಳನ್ನು ಮಾಡಿಸಲಾಗಿತ್ತು. ಸುಮಾರು ಎಂಟು ಸಾವಿರ ಜನಕ್ಕೆ ಊಟದ ತಯಾರಿಯನ್ನು ಮಾಡಿಸಲಾಗಿತ್ತು. ರಿಷಬ್​ರ ಹುಟ್ಟುಹಬ್ಬಕ್ಕೆ ಬರುವವರು ಹಸಿದುಕೊಂಡು ಹೋಗಬಾರದೆಂಬ ಉದ್ದೇಶದಿಂದ ಊಟದ ವ್ಯವಸ್ಥೆಯನ್ನು ಮಾಡಿಸಿದ್ದಾಗಿ ರಿಷಬ್​ ಆಪ್ತರ ತಂಡ ಹೇಳಿತ್ತು. ರಿಷಬ್​ರ ಪಕ್ಕದ ಊರಾದ ಉಪ್ಪಿನ ಕುದುರುವಿನ ಅಡುಗೆ ಕಾಂಟ್ರ್ಯಾಕ್ಟರ್ ಗೋಪಾಲ್ ಮೆಲಾಡಿ ಅವರನ್ನು ಕರೆಯಿಸಿ ಅಡುಗೆ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿತ್ತು.

ಇದನ್ನೂ ಓದಿ:ನಿಮ್ಮ ಋಣ ತೀರಿಸುವ ಕಾರ್ಯವನ್ನು ಮಾಡುತ್ತಲೇ ಇರ್ತೀನಿ: ಬರ್ತ್​ಡೇಯಲ್ಲಿ ರಿಷಬ್ ಶೆಟ್ಟಿ ಭಾವುಕ

ರಿಷಬ್ ಶೆಟ್ಟಿಯವರ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಮಧ್ಯಾಹ್ನದಿಂದಲೇ ಕಾಯುತ್ತಿದ್ದರು. ಕಾರ್ಯಕ್ರಮವನ್ನು ಐದು ಗಂಟೆಗೆ ಆಯೋಜನೆ ಮಾಡಲಾಗಿತ್ತು, ಆದರೆ ಇಂದು ಮಧ್ಯಾಹ್ನದ ನಂತರ ಬೆಂಗಳೂರಿನಲ್ಲಿ ಮಳೆ ಪ್ರಾರಂಭವಾದ ಕಾರಣ ಇಂದು ಕಾರ್ಯಕ್ರಮ ಸುಸೂತ್ರವಾಗಿ ನಡೆಯುವುದು ಅನುಮಾನ ಎಂಬಂತಾಗಿತ್ತು. ಮಳೆಯ ನಡುವೆಯೂ ಅಭಿಮಾನಿಗಳು ಕಾಯುತ್ತಲೇ ಇದ್ದರು. ಸುಮಾರು 6 ರ ಸುಮಾರಿಗೆ ಪತ್ನಿ ಪ್ರಗತಿ ಶೆಟ್ಟಿಯೊಂದಿಗೆ ವೇದಿಕೆಗೆ ಆಗಮಿಸಿದ ರಿಷಬ್ ಶೆಟ್ಟಿ, ಅಭಿಮಾನಿಗಳಿಗೆ ವಂದಿಸಿ ಧನ್ಯವಾದ ಹೇಳಿದರು.

ಈ ರೀತಿ ದೊಡ್ಡ ಸಂಖ್ಯೆಯ ಅಭಿಮಾನಿಗಳೊಟ್ಟಿಗೆ ರಿಷಬ್ ಶೆಟ್ಟಿ ತಮ್ಮ ಹುಟ್ಟುಹಬ್ಬ ಆಚರಸಿಕೊಳ್ಳುತ್ತಿರುವುದು ಇದೇ ಮೊದಲು. ಸ್ವತಃ ಅವರೇ ಇಂದಿನ ಭಾಷಣದಲ್ಲಿ ಹೇಳಿದಂತೆ, ”ಕಾಂತಾರಗೆ ಮುಂಚೆ ಇದನ್ನೆಲ್ಲ ನನಗೆ ಹೇಗೆ ನಿಭಾಯಿಸಬೇಕು ಎಂಬುದು ಸಹ ನನಗೆ ಗೊತ್ತಿರಲಿಲ್ಲ. ಆದರೆ ನಿಮ್ಮನ್ನು ಭೇಟಿ ಆಗುವ ಬಹಳ ಆಸೆಯಿತ್ತು. ನನ್ನ ಪತ್ನಿ ಪ್ರಗತಿ, ಪ್ರಮೋದ್ ಶೆಟ್ಟಿ ಹಾಗೂ ಇತರರು ಒತ್ತಾಯ ಮಾಡಿ ಈ ಕಾರ್ಯಕ್ರಮವನ್ನು ಮಾಡಲೇ ಬೇಕು, ಅಭಿಮಾನಿಗಳಿಗೆ ಧನ್ಯವಾದ ಹೇಳಲೇ ಬೇಕು ಎಂದರು. ಹಾಗಾಗಿ ಕಾರ್ಯಕ್ರಮ ಆಯೋಜಿಸಿದ್ದೇವೆ” ಎಂದರು ರಿಷಬ್ ಶೆಟ್ಟಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ