AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂತಾರವನ್ನು ಪ್ಯಾನ್ ಇಂಡಿಯಾ ಮಾಡಿ ಎಂದು ಮೊದಲು ಹೇಳಿದ್ದು ಯಾರು? ಮಾಡಿರಲಿಲ್ಲ ಏಕೆ?

Kantara: ಬಿಡುಗಡೆ ಆಗಿ ಒಂದು ವಾರದ ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ಆಯ್ತು ಕಾಂತಾರ. ಆದರೆ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡುವಂತೆ ಮೊದಲೇ ಒಬ್ಬರು ರಿಷಬ್​ಗೆ ಸಲಹೆ ನೀಡಿದ್ದರಂತೆ! ಯಾರವರು?

ಕಾಂತಾರವನ್ನು ಪ್ಯಾನ್ ಇಂಡಿಯಾ ಮಾಡಿ ಎಂದು ಮೊದಲು ಹೇಳಿದ್ದು ಯಾರು? ಮಾಡಿರಲಿಲ್ಲ ಏಕೆ?
ರಿಷಬ್-ಪ್ರಗತಿ
ಮಂಜುನಾಥ ಸಿ.
|

Updated on: Jun 28, 2023 | 8:57 PM

Share

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ ಕಾಂತಾರ (Kantara) ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. 15 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಭಾರಿ ದೊಡ್ಡ ಕಲೆಕ್ಷನ್ (Box Office) ಮಾಡಿತು. ಚಿತ್ರಮಂದಿರದಿಂದ ದೂರ ಉಳಿದಿದ್ದ ಫ್ಯಾಮಿಲಿ ಆಡಿಯನ್ಸ್ ಅನ್ನು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಮರಳಿ ಕರೆತಂದಿತು. ಹಲವಾರು ಚಿತ್ರಮಂದಿರಗಳಲ್ಲಿ 50 ದಿನ ಮುಗಿಸಿ ದಾಖಲೆಯನ್ನು ಸೃಷ್ಟಿಸಿತು. ಕರ್ನಾಟಕ ಮಾತ್ರವಲ್ಲದೆ ಇತರೆ ಭಾಷೆಗಳಲ್ಲಿಯೂ ಭಾರಿ ದೊಡ್ಡ ಯಶಸ್ಸನ್ನು ಸಿನಿಮಾ ಗಳಿಸಿಕೊಂಡಿತು. ಆದರೆ ಈ ಸಿನಿಮಾವನ್ನು ಚಿತ್ರತಂಡದವರು ಪ್ಯಾನ್ ಇಂಡಿಯಾ (Pan Idia) ಮಾಡಲಿಲ್ಲ ಬದಲಿಗೆ ಸಿನಿಮಾ ನೋಡಿದ ಪ್ರೇಕ್ಷಕರೇ ಪ್ಯಾನ್ ಇಂಡಿಯಾ ಮಾಡಿದರು.

ಕಾಂತಾರ ಸಿನಿಮಾವನ್ನು ರಿಷಬ್ ಶೆಟ್ಟಿ ಮಾಡುವಾಗ ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಉಮೇದು ಅವರಿಗೆ ಇರಲಿಲ್ಲ. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ಅದಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ಕಂಡು ಬೆರಗಾಗಿ ಪ್ರೇಕ್ಷಕರ ಒತ್ತಾಯವೂ ಕಾರಣವಾಗಿ ಸಿನಿಮಾವನ್ನು ಇತರೆ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಿದರು. ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿಯೂ ಸಿನಿಮಾ ಭಾರಿ ದೊಡ್ಡ ಕಲೆಕ್ಷನ್ ಮಾಡಿ ದಾಖಲೆ ಬರೆಯಿತು.

ಆದರೆ ರಿಷಬ್ ಶೆಟ್ಟಿ, ಕಾಂತಾರ ಸಿನಿಮಾದ ಚಿತ್ರೀಕರಣ ಮಾಡುವಾಗಲೇ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವಂತೆ ಒಬ್ಬರು ಸಲಹೆ ಕೊಟ್ಟಿದ್ದರಂತೆ, ಅವರೇ ರಿಷಬ್​ರ ಪತ್ನಿ ಪ್ರಗತಿ ಶೆಟ್ಟಿ. ಕಾಂತಾರ ಸಿನಿಮಾ ಮೂಡಿಬರುತ್ತಿರುವ ರೀತಿಯನ್ನು ಕಂಡು ಸಿನಿಮಾದ ಬಗ್ಗೆ ಅತೀವ ನಂಬಿಕೆ ಮೂಡಿತ್ತಂತೆ, ಹಾಗಾಗಿಯೇ ಕಾಂತಾರ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವಂತೆ ಹೇಳಿದ್ದರಂತೆ. ಆದರೆ ರಿಷಬ್ ಶೆಟ್ಟಿ ಅವರಿಗೆ ಬೇರೆಯದ್ದೇ ಆಲೋಚನೆ ಇತ್ತು.

ಇದನ್ನೂ ಓದಿ:‘ನಾನು ಪಡೆದ ದೊಡ್ಡ ಪ್ರಶಸ್ತಿ ಕನ್ನಡಿಗರು’; ಅಮೆರಿಕದ ನೆಲದಲ್ಲಿ ನಿಂತು ಹೆಮ್ಮೆಯಿಂದ ಹೇಳಿದ ರಿಷಬ್ ಶೆಟ್ಟಿ

ಬೇರೆ ಭಾಷೆಗಳ ಸಿನಿಮಾವನ್ನು ನೋಡಿದಾಗ ಅವರು ತಮ್ಮ ಭಾಷೆಯಲ್ಲಿ ತಮ್ಮ ಸಂಸ್ಕೃತಿ, ಪ್ರಾಂತ್ಯ, ಆಚರಣೆಗಳ ಕತೆ ಹೇಳುತ್ತಾರೆ. ಇದು ನಮ್ಮ ರಾಜ್ಯದ ಸಂಸ್ಕೃತಿಯ ಕತೆ ಹಾಗಾಗಿ ಇದು ಕನ್ನಡ ಸಿನಿಮಾ ಆಗಿಯೇ ಬಿಡುಗಡೆ ಆಗಬೇಕು ಎಂದು ಕನ್ನಡದಲ್ಲಿ ಬಿಡುಗಡೆ ಮಾಡಿದರಂತೆ. ಆದರೆ ಜನರಿಂದ ವ್ಯಕ್ತವಾದ ಪ್ರೀತಿ, ಬೇಡಿಕೆಗಳನ್ನು ಗಮನಿಸಿ ಸಿನಿಮಾ ಬಿಡುಗಡೆ ಆದ ಒಂದು ವಾರ ಮೂರು ದಿನಗಳಿಗೆ ಎಲ್ಲ ಭಾಷೆಗಳಲ್ಲಿಯೂ ಡಬ್ ಮಾಡಿ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಆದ ಎಲ್ಲ ಭಾಷೆಗಳಲ್ಲಿಯೂ ಕಾಂತಾರ ಸೂಪರ್ ಹಿಟ್ ಆಗಿದ್ದು ಈಗ ಇತಿಹಾಸ.

ವಾಷಿಂಗ್ಟನ್​ನ ಸಿಯಾಟಲ್​ನಲ್ಲಿ ವಿಶ್ವಶ್ರೇಷ್ಠ ಕನ್ನಡಿಗ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಿಷಬ್ ಶೆಟ್ಟಿ, ”ಕಾಂತಾರ, ಸೆಲ್ಫ್​ ಮೇಡ್ ಪ್ಯಾನ್ ಇಂಡಿಯಾ ಸಿನಿಮಾ. ಜನರೇ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಆಗುವಂತೆ ಮಾಡಿದರು. ಹಾಗೆಯೇ ಜನರು ಕೇಳಿದ್ದಕ್ಕಾಗಿಯೇ ಈಗ ಕಾಂತಾರ ಸಿನಿಮಾದ ಇನ್ನೊಂದು ಭಾಗವನ್ನು ಮಾಡುತ್ತಿದ್ದೇವೆ. ಆದರೆ ಈಗಾಗಲೇ ನೀವು ನೋಡಿರುವುದು ಕಾಂತಾರ 2 ಈಗ ಬರಲಿರುವುದು ಕಾಂತಾರದ ಮೊದಲ ಭಾಗ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಪತ್ನಿ ಪ್ರಗತಿ ಶೆಟ್ಟಿ ಜೊತೆ ರಿಷಬ್ ಶೆಟ್ಟಿ ಭಾಗವಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ