ಕಮಲ್ ಹಾಸನ್ ಜೊತೆ ನಟಿಸಲು ಷರತ್ತು ಇರಿಸಿದ್ದ ಶಾರುಖ್ ಖಾನ್: ಕಮಲ್​ರನ್ನು ಕಾಪಾಡಿದ್ದು ಅದೇ ಷರತ್ತು

Shah Rukh Khan: ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಾದ ಶಾರುಖ್ ಖಾನ್, ಕಮಲ್ ಹಾಸನ್​ಗಾಗಿ ಸಂಭಾವನೆ ತ್ಯಜಿಸಿದ್ದರಂತೆ.

ಕಮಲ್ ಹಾಸನ್ ಜೊತೆ ನಟಿಸಲು ಷರತ್ತು ಇರಿಸಿದ್ದ ಶಾರುಖ್ ಖಾನ್: ಕಮಲ್​ರನ್ನು ಕಾಪಾಡಿದ್ದು ಅದೇ ಷರತ್ತು
ಶಾರುಖ್ ಖಾನ್
Follow us
ಮಂಜುನಾಥ ಸಿ.
|

Updated on: Jun 28, 2023 | 7:59 PM

ಬಾಲಿವುಡ್​ (Bollywood) ಬಾದ್​ಶಾ ಶಾರುಖ್ ಖಾನ್ (Shah Rukh Khan) ಪಠಾಣ್ (Pathaan) ಸಿನಿಮಾದ ಭರ್ಜರಿ ಗೆಲುವಿನ ಖುಷಿಯಲ್ಲದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಶಾರುಖ್ ಖಾನ್​ ಸಹ ಒಬ್ಬರು. ಸಿನಿಮಾ ನಿರ್ಮಾಪಕರೂ ಆಗಿರುವ ಶಾರುಖ್ ಖಾನ್ ಸಂಭಾವನೆ, ಕಲೆಕ್ಷನ್, ಸಿನಿಮಾಕ್ಕೆ ಮಾಡುವ ಖರ್ಚು ಇತರೆ ವಿಷಯಗಳಲ್ಲಿ ಬಹಳ ಶಿಸ್ತು. ಸಿನಿಮಾ ವ್ಯವಹಾರದ ವಿಷಯಕ್ಕೆ ಬಂದರೆ ಶಾರುಖ್ ಖಾನ್ ಪಕ್ಕಾ ಉದ್ಯಮಿಯ ಹಾಗೆ ಯೋಚಿಸುತ್ತಾರೆ ಎಂಬ ಮಾತಿದೆ. ಇಂಥಹಾ ಶಾರುಖ್ ಖಾನ್ ಸಹ ಕಮಲ್ ಹಾಸನ್​ಗಾಗಿ ಉಚಿತವಾಗಿ ನಟಿಸಿದ್ದರಂತೆ.

ಶಾರುಖ್ ಖಾನ್, ಕಮಲ್ ಹಾಸನ್​ರ ಅತಿ ದೊಡ್ಡ ಅಭಿಮಾನಿ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಕಮಲ್ ಹಾಸನ್ ಬಗ್ಗೆ ತಮ್ಮ ಮೆಚ್ಚುಗೆ, ಪ್ರೀತಿ, ಗೌರವಗಳ ಬಗ್ಗೆ ಶಾರುಖ್ ಖಾನ್ ಹೇಳಿಕೊಂಡಿದ್ದಾರೆ. ಕಮಲ್ ಹಾಸನ್ ಹಾಗೂ ಶಾರುಖ್ ಖಾನ್ 1999ರಲ್ಲಿ ಒಟ್ಟಿಗೆ ನಟಿಸಿದ್ದರು. ಅದುವೇ ಹೇ ರಾಮ್ ಸಿನಿಮಾದಲ್ಲಿ. ಹೇ ರಾಮ್ ಸಿನಿಮಾವನ್ನು ಕಮಲ್ ಹಾಸನ್ ನಿರ್ದೇಶಿಸಿ ನಿರ್ಮಾಣವನ್ನು ಮಾಡಿದ್ದರು.

ಆಗಿನ ಕಾಲಕ್ಕೆ ಸುಮಾರು 12 ಕೋಟಿ (ಈಗಿನ ನೂರು ಕೋಟಿಗೆ ಸಮ) ವೆಚ್ಚದಲ್ಲಿ ಹೇ ರಾಮ್ ಸಿನಿಮಾವನ್ನು ನಿರ್ಮಿಸಿದ್ದರು ಕಮಲ್ ಹಾಸನ್. ಸಿನಿಮಾ ಬಿಡುಗಡೆ ಆದಾಗ ಭಾರಿ ವಿವಾದಗಳಿಗೆ ಗುರಿಯಾಗಿತ್ತು, ಗಾಂಧಿ ಕೊಲೆಯ ಬಗ್ಗೆ ಇದ್ದ ಸಿನಿಮಾದಲ್ಲಿ ಶಾರುಖ್ ಖಾನ್, ನಾಯಕನ ಮುಸ್ಲಿಂ ಗೆಳೆಯನ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ನಟಿಸಲು ಶಾರುಖ್ ಖಾನ್ ಸಂಭಾವನೆಯನ್ನೇ ಪಡೆದಿರಲಿಲ್ಲವಂತೆ. ಸಂಭಾವನೆ ನೀಡಬಾರದು ಎಂಬುದೇ ಶಾರುಖ್ ಖಾನ್​ರ ಷರತ್ತಾಗಿತ್ತಂತೆ. ಸಿನಿಮಾದ ಬಜೆಟ್ ಮೀರಿ ಹೋಗಿರುವುದು ಅರಿವಿದ್ದ ಶಾರುಖ್ ಖಾನ್, ಕಮಲ್​ರಿಂದ ಹಣ ಪಡೆಯಲಿಲ್ಲವಂತೆ. ಈ ಬಗ್ಗೆ ಕಮಲ್ ಹಾಸನ್ ಹಲವು ಸಂದರ್ಶನಗಳಲ್ಲಿ ನೆನಪಿಸಿಕೊಂಡಿದ್ದಾರೆ. ಆದರೆ ಶಾರುಖ್ ಖಾನ್​ಗೆ ವಾಚ್ ಒಂದನ್ನು ಉಡುಗೊರೆಯಾಗಿ ನೀಡಿದರಂತೆ ಕಮಲ್ ಹಾಸನ್.

ಇದನ್ನೂ ಓದಿ:‘ಡಾನ್ 3’ ಚಿತ್ರದಿಂದ ಹೊರನಡೆದ ಶಾರುಖ್ ಖಾನ್; ಸಂಭಾವನೆ ವಿಚಾರದಲ್ಲಿ ಕಿರಿಕ್?

ಈಗ ಹೇ ರಾಮ್ ಸಿನಿಮಾ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದೆ ಆದರೆ ಬಿಡುಗಡೆ ಆದಾಗ ಸಿನಿಮಾ ಫ್ಲಾಪ್ ಆಗಿತ್ತು. ಕಮಲ್ ಹಾಸನ್ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಆ ಸಿನಿಮಾದ ಹಿಂದಿ ಡಬ್ಬಿಂಗ್ ಆವೃತ್ತಿಯನ್ನು ಕಮಲ್ ಹಾಸನ್ ಯಾರಿಗೋ ಮಾರಿದ್ದರಂತೆ. ಅದಾದ ಎಷ್ಟೋ ವರ್ಷಗಳ ಬಳಿಕ ಶಾರುಖ್ ಖಾನ್ ಹೇ ರಾಮ್ ಸಿನಿಮಾದ ಡಬ್ಬಿಂಗ್ ಹಕ್ಕನ್ನು ಮತ್ತೆ ತಾವೆ ಖರೀದಿಸಿದ್ದಾರೆ. ಈ ಬಗ್ಗೆಯೂ ಮಾತನಾಡಿರುವ ಕಮಲ್ ಹಾಸನ್, ”ಶಾರುಖ್ ಮನಿ ಮೈಂಡೆಂಡ್ ಎನ್ನುತ್ತಾರೆ ಆದರೆ ಅವರು ಹಾಗಲ್ಲ. ಅದನ್ನೆಲ್ಲ ಮೀರಿದ ವ್ಯಕ್ತಿ ಆತ. ಹೇ ರಾಮ್ ಸಿನಿಮಾದ ಹಿಂದಿ ಹಕ್ಕು ಖರೀದಿಸಿದ್ದಾರೆ. ಅದರಿಂದ ಅವರಿಗೆ ಲಾಭವಾಗಲಿ, ನೂರು ಕೋಟಿ ಲಾಭ ಆಗುವುದಾದರೆ 200 ಕೋಟಿ ಅವರಿಗೆ ಸಿಗಲಿ” ಎಂದಿದ್ದಾರೆ ಕಮಲ್ ಹಾಸನ್.

ಶಾರುಖ್ ಖಾನ್​ಗೆ ಕಮಲ್ ಹಾಸನ್ ಎಂದರೆ ಬಹಳ ಗೌರವ. ”ಕಮಲ್​ ರನ್ನು ನೋಡಬಹುದು, ಅವರನ್ನು ಮುಟ್ಟಬಹುದು ಎಂಬ ಕಾರಣಕ್ಕಷ್ಟೆ ನಾನು ಹೇ ರಾಮ್ ಸಿನಿಮಾ ಒಪ್ಪಿಕೊಂಡೆ. ಪ್ರತಿದಿನ ಅವರೊಟ್ಟಿಗೆ ನಟಿಸುವಾಗ ಖುಷಿ ಪಟ್ಟಿದ್ದೇನೆ” ಎಂದು ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ