AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ದಿನವೇ ಐದುನೂರು ಕೋಟಿ ಗಳಿಸಲಿದೆ: ಪ್ರಭಾಸ್ ಹೊಸ ಸಿನಿಮಾ ಬಗ್ಗೆ ನಿರ್ಮಾಪಕ ಭವಿಷ್ಯ

Project K: ಪ್ರಭಾಸ್​ರ ಆದಿಪುರುಷ್ ಸಿನಿಮಾ ಸೋತಿದ್ದರೂ ಸಹ ಅವರ ಮೇಲಿನ ನಿರೀಕ್ಷೆ ಕಡಿಮೆಯಾಗಿಲ್ಲ. ಚಿತ್ರೀಕರಣ ಹಂತದಲ್ಲಿರುವ ಪ್ರಭಾಸ್​ರ ಹೊಸ ಸಿನಿಮಾ ಪ್ರಾಜೆಕ್ಟ್ ಕೆ ಮೊದಲ ದಿನವೇ 500-600 ಕೋಟಿ ಗಳಿಸಲಿದೆ ಎಂದು ನಿರ್ಮಾಪಕರೊಬ್ಬರು ಭವಿಷ್ಯ ನುಡಿದಿದ್ದಾರೆ.

ಮೊದಲ ದಿನವೇ ಐದುನೂರು ಕೋಟಿ ಗಳಿಸಲಿದೆ: ಪ್ರಭಾಸ್ ಹೊಸ ಸಿನಿಮಾ ಬಗ್ಗೆ ನಿರ್ಮಾಪಕ ಭವಿಷ್ಯ
ಪ್ರಭಾಸ್
ಮಂಜುನಾಥ ಸಿ.
|

Updated on: Jun 28, 2023 | 10:02 PM

Share

ಪ್ರಭಾಸ್ (Prabhas) ನಟನೆಯ ಆದಿಪುರುಷ್ (Adipurush) ಸಿನಿಮಾ ಬಿಡುಗಡೆ ಆಗಿ ವಾರವಷ್ಟೆ ಆಗಿದೆ. ಆದಿಪುರುಷ್ ಮೇಲೆ ಸಿನಿ ಪ್ರಿಯರಿಗೆ ಭಾರಿ ನಿರೀಕ್ಷೆಗಳಿದ್ದವು ಆದರೆ ಅವೆಲ್ಲವೂ ಸಿನಿಮಾದ ಜೊತೆಗೆ ಠುಸ್ಸ್ ಆಗಿದೆ. ಬಿಡುಗಡೆ ದಿನದಿಂದಲೂ ಋಣಾತ್ಮಕ ವಿಮರ್ಶೆಗಳು ಆದಿಪುರುಷ್ ಬಗ್ಗೆ ಕೇಳಿ ಬಂದಿದ್ದು ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಸಹ ಮೊದಲ ಮೂರು ದಿನಗಳ ಬಳಿಕ ಧಾರುಣವಾಗಿ ಕುಸಿದಿದೆ. ಹಾಗಿದ್ದರೂ ಸಹ ಪ್ರಭಾಸ್ ಮೇಲಿನ ನಿರೀಕ್ಷೆ ಕಡಿಮೆ ಆಗಿಲ್ಲ. ಇನ್ನೂ ಚಿತ್ರೀಕರಣದ ಹಂತದಲ್ಲಿರುವ ಪ್ರಭಾಸ್​ರ ಸಿನಿಮಾ ಒಂದರ ಮೇಲೆ ತೆಲುಗು ಚಿತ್ರರಂಗ (Tollywood) ಭಾರಿ ನಿರೀಕ್ಷೆ ಇರಿಸಿಕೊಂಡಿದ್ದು ನಿರ್ಮಾಪಕರೊಬ್ಬರು ಸಿನಿಮಾದ ಕಲೆಕ್ಷನ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ನಾಗ್ ಅಶ್ವಿನ್ ನಿರ್ದೇಶನದ ‘ಪ್ರಾಜೆಕ್ಟ್ ಕೆ’ ಎಂದು ಸದ್ಯಕ್ಕೆ ಕರೆಯಲಾಗುತ್ತಿರುವ ಹೊಸ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಈ ಸಿನಿಮಾದ ಬಗ್ಗೆ ತೆಲುಗು ಚಿತ್ರರಂಗ ಭಾರಿ ದೊಡ್ಡ ನಿರೀಕ್ಷೆಗಳನ್ನು ಇರಿಸಿಕೊಂಡಿದೆ. ಈ ಸಿನಿಮಾದ ಬಗ್ಗೆ ಮಾತನಾಡಿರುವ ತೆಲುಗಿನ ಹಿರಿಯ ನಿರ್ಮಾಪಕ ಹಾಗೂ ನಿರ್ದೇಶಕ ತಮ್ಮಾರೆಡ್ಡಿ, ”ಪ್ರಭಾಸ್​ರ ಪ್ರಾಜೆಕ್ಟ್ ಕೆ ಸಿನಿಮಾ ಬಿಡುಗಡೆ ಆದ ಮೊದಲ ದಿನವೇ 500 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ” ಎಂದಿದ್ದಾರೆ.

”ನಾಗ್ ಅಶ್ವಿನ್ ನಿರ್ದೇಶಿಸಿ ಪ್ರಭಾಸ್ ನಟಿಸುತ್ತಿರುವ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಅಂಥಹಾ ದೊಡ್ಡ ನಟರಿದ್ದಾರೆ. ಇತ್ತೀಚೆಗೆ ಕಮಲ್ ಹಾಸನ್ ಸಹ ಸೇರಿಕೊಂಡಿದ್ದಾರೆ. ಅವರು ಸಿನಿಮಾವನ್ನು ಸರಿಯಾಗಿ ಪ್ರೊಜೆಕ್ಟ್ ಮಾಡಿದರೆಂದರೆ ಆ ಸಿನಿಮಾ ದಾಖಲೆಗಳನ್ನು ಬರೆಯಲಿದೆ. ಮೊದಲ ದಿನವೇ 500-600 ಕೋಟಿ ಕಲೆಕ್ಷನ್ ಮಾಡಲಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಲಿದೆ. ಏಕೆಂದರೆ ನಾನು ಆ ಸಿನಿಮಾದ ಸೆಟ್​ಗೆ ಹೋಗಿದ್ದೇನೆ, ಅವರ ಅದ್ಭುತ ಲೋಕ ನೋಡಿದ್ದೇನೆ ಹಾಗಾಗಿ ಈ ಮಾತು ಹೇಳುತ್ತಿದ್ದೇನೆ” ಎಂದಿದ್ದಾರೆ ತಮ್ಮಾರೆಡ್ಡಿ.

ಇದನ್ನೂ ಓದಿ:Project K Budget: ‘ಪ್ರಾಜೆಕ್ಟ್​ ಕೆ’ ಕಲಾವಿದರ ಒಟ್ಟು ಸಂಭಾವನೆ 200 ಕೋಟಿ ರೂ? ಇದರಲ್ಲಿ ಪ್ರಭಾಸ್​, ಕಮಲ್​ ಹಾಸನ್​ ಪಾಲು ಎಷ್ಟು?

”ಅವರು ಸಿನಿಮಾವನ್ನು ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಿದರೆಂದರೆ ಸಿನಿಮಾ ದಾಖಲೆಗಳನ್ನು ಬರೆಯಲಿದೆ. ವಿಶ್ವಮಟ್ಟದಲ್ಲಿ ಭಾರಿ ಸದ್ದು ಮಾಡಲಿದೆ. ಆ ಸಿನಿಮಾ ಪಕ್ಕಾ ದೊಡ್ಡ ಹಿಟ್ ಆಗಲಿದೆ ಎಂಬ ನಂಬಿಕೆ ನನಗೆ ಇದೆ. ಏಕೆಂದರೆ ಅಂಥಹಾ ದೊಡ್ಡ ನಟರು ಆ ಸಿನಿಮಾದಲ್ಲಿದ್ದಾರೆ. ಆದಿಪುರುಷ್ ಸಿನಿಮಾ ಓಪನಿಂಗ್ ಕಲೆಕ್ಷನ್ 140 ಕೋಟಿ, ಪ್ರಭಾಸ್​ಗೆ ಇರುವ ಮಾರುಕಟ್ಟೆ ಅದು. ಕತೆ ಚೆನ್ನಾಗಿದ್ದರೆ ಸಾಕು ಪ್ರಾಜೆಕ್ಟ್ ಕೆ ಸಾವಿರಾರು ಕೋಟಿಯನ್ನು ಒಂದೆರಡು ದಿನಗಳಲ್ಲಿ ಗಳಿಸಿಬಿಡುತ್ತದೆ. ಒಂದು ದಿನ ಬರುತ್ತದೆ ತೆಲುಗು ಜನರು ವಿಶ್ವದೆಲ್ಲೆಡೆ ಕಾಲರ್ ಎತ್ತಿಕೊಂಡು ಹೆಮ್ಮೆಯಿಂದ ಓಡಾಡುತ್ತಾರೆ ಅದಕ್ಕೆ ನಮ್ಮ ಸಿನಿಮಾಗಳು ಕಾರಣವಾಗುತ್ತವೆ. ಪ್ರಾಜೆಕ್ಟ್ ಕೆ ಸಿನಿಮಾ ಒಂದೊಮ್ಮೆ ಸರಿಯಾಗಿ ಬಿಡುಗಡೆ ಆಗಲಿಲ್ಲವೆಂದರೆ ರಾಜಮೌಳಿ-ಮಹೇಶ್ ಬಾಬು ಸಿನಿಮಾ ದೊಡ್ಡ ಹಿಟ್ ಹೊಡೆಯಲಿದೆ. ಆ ಸಿನಿಮಾ ಸುಲಭವಾಗಿ 1000 ಕೋಟಿ ಕಲೆಕ್ಷನ್ ಮಾಡಲಿದೆ” ಎಂದಿದ್ದಾರೆ ತಮ್ಮಾರೆಡ್ಡಿ.

ಪ್ರಾಜೆಕ್ಟ್ ಕೆ ಸಿನಿಮಾ ಬೃಹತ್ ಬಜೆಟ್​ನಲ್ಲಿ ಚಿತ್ರಿತವಾಗುತ್ತಿದೆ. ಈ ಸಿನಿಮಾದ ಬಜೆಟ್ 500 ಕೋಟಿ ಎನ್ನಲಾಗುತ್ತಿದ್ದು, ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಬಾಲಿವುಡ್ ಟಾಪ್ ತಾರೆಯರಾದ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಇದ್ದಾರೆ. ಇತ್ತೀಚೆಗಷ್ಟೆ ಸಿನಿಮಾಕ್ಕೆ ಕಮಲ್ ಹಾಸನ್ ಸಹ ಸೇರಿಕೊಂಡಿದ್ದು ಕಮಲ್ ಅವರದ್ದು ವಿಲನ್ ಪಾತ್ರ ಎನ್ನಲಾಗುತ್ತಿದೆ. ಸಿನಿಮಾದ ಕತೆ ಬಹಳ ಭಿನ್ನವಾಗಿದ್ದು, ಈ ಸಿನಿಮಾವು ಭವಿಷ್ಯದ ಪ್ರಪಂಚ ಹಾಗೂ ಭೂತ ಕಾಲದ ಪ್ರಪಂಚದ ಕತೆಯನ್ನು ಒಳಗೊಂಡಿರಲಿದೆ. ಸಿನಿಮಾಕ್ಕಾಗಿ ಹಲವು ವಿಶೇಷ ವಾಹನಗಳನ್ನು ಚಿತ್ರತಂಡ ಸಿದ್ಧಪಡಿಸಿದೆ. ಇದಕ್ಕೆ ಮಹಿಂದ್ರಾ ಸಂಸ್ಥೆಯ ನೆರವನ್ನು ಸಹ ನಿರ್ದೇಶಕ ನಾಗ್ ಅಶ್ವಿನ್ ತೆಗೆದುಕೊಂಡಿದ್ದಾರೆ.

ಬಾಹುಬಲಿ 2 ಬಳಿಕ ಬಿಡುಗಡೆ ಆದ ಪ್ರಭಾಸ್​ರ ಮೂರೂ ಸಿನಿಮಾಗಳು ಸಹ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿವೆ. ಹಾಗಿದ್ದರೂ ಸಹ ಮೂರೂ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕಲೆಕ್ಷನ್ ಮಾಡಿವೆ. ಸತತ ಮೂರು ಸಿನಿಮಾಗಳು ನಿರೀಕ್ಷೆ ಹುಸಿಗೊಳಿಸಿದ್ದರೂ ಪ್ರಭಾಸ್ ಕ್ರೇಜ್ ಕಡಿಮೆ ಆಗಿಲ್ಲ. ಅಂದಹಾಗೆ ಪ್ರಾಜೆಕ್ಟ್ ಕೆ ಗೆ ಮೊದಲು ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೇಲೂ ಪ್ರಭಾಸ್ ಅಭಿಮಾನಿಗಳು ಭಾರಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಸಿನಿಮಾದ ಟೀಸರ್ ಮುಂದಿನ ವಾರ ಬಿಡುಗಡೆ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್