‘ದಳಪತಿ’ ವಿಜಯ್ ಮಗನ ಚಿತ್ರಕ್ಕೆ ಧ್ವನಿಯಾದ ಸಾನ್ವಿ ಸುದೀಪ್

'ಮಸ್ತ್ ಮಲೈಕಾ' ಹಿಟ್ ನೀಡಿದ್ದ ಗಾಯಕಿ ಸಾನ್ವಿ ಸುದೀಪ್ ಅವರ ಧ್ವನಿಯಲ್ಲಿ 'ಸುಲೋಚನ' ಹೊಸ ಹಾಡು ಮೂಡಿಬಂದಿದೆ. ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶಿಸುತ್ತಿರುವ 'ಸಿಗ್ಮಾ' ಸಿನಿಮಾದ ಈ ಗೀತೆಗೆ ಎಸ್. ಥಮನ್ ಸಂಗೀತ ನೀಡಿದ್ದು, ಹಾಡು ಯೂಟ್ಯೂಬ್‌ನಲ್ಲಿ ಗಮನ ಸೆಳೆದಿದೆ. 

‘ದಳಪತಿ’ ವಿಜಯ್ ಮಗನ ಚಿತ್ರಕ್ಕೆ ಧ್ವನಿಯಾದ ಸಾನ್ವಿ ಸುದೀಪ್
ಸಾನ್ವಿ

Updated on: Sep 23, 2026 | 1:24 PM

ನಟ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ತಮ್ಮ ಗಾಯನದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಈ ಮೊದಲು’ಮಾರ್​ಕ್’ ಸಿನಿಮಾದ ‘ಮಸ್ತ್‌ ಮಲೈಕಾ’ ಸೂಪರ್ ಹಿಟ್ ಹಾಡಿನ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸಾನ್ವಿ ಸುದೀಪ್, ಈಗ ‘ಸಿಗ್ಮಾ’ ಚಿತ್ರದ ‘ಸುಲೋಚನ’ ಎಂಬ ಮತ್ತೊಂದು ರೋಮ್ಯಾಂಟಿಕ್ ಹಾಡಿಗೆ ಧ್ವನಿಯಾಗುವ ಮೂಲಕ ಮತ್ತೆ ಸೌಂಡ್ ಮಾಡುತ್ತಿದ್ದಾರೆ.

ಹೊಸ ಹೆಜ್ಜೆ ಇಟ್ಟ ಸಾನ್ವಿ

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ‘ಮಸ್ತ್ ಮಲೈಕಾ’ ಹಾಡು ಗಮನ ಸೆಳೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಹಾಡು ಭಾರಿ ಟ್ರೆಂಡ್ ಸೃಷ್ಟಿಸಿತ್ತು. ಸಾನ್ವಿ ಅವರ ವಿಶಿಷ್ಟ ಕಂಠ ಮತ್ತು ಧ್ವನಿಯಲ್ಲಿನ ಹೊಸತನ ಯುವಜನತೆಯನ್ನು ಅಪಾರವಾಗಿ ಸೆಳೆದಿತ್ತು. ಆ ಹಾಡಿನ ಯಶಸ್ಸಿನ ಬಳಿಕ ಅವರನ್ನು ಹುಡುಕಿ ಸಾಕಷ್ಟು ಆಫರ್ ಹುಡುಕಿ ಬರುತ್ತಿವೆ. ಅವರು ಈಗ ‘ಸುಲೋಚನ’ ಹಾಡನ್ನು ಒಪ್ಪಿ ಹಾಡಿದ್ದಾರೆ.

ಕಾಲಿವುಡ್‌ಗೆ ಹೆಜ್ಜೆ ಇಟ್ಟ ಸಾನ್ವಿ

ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ‘ಸಿಗ್ಮಾ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿದೇಶದಲ್ಲಿ ಸಿನಿಮಾ ನಿರ್ದೇಶನದ ತರಬೇತಿ ಮುಗಿಸಿ ಬಂದಿರುವ ಜೇಸನ್ ಸಂಜಯ್, ತಮ್ಮ ಚೊಚ್ಚಲ ಚಿತ್ರದಲ್ಲೇ ಭರವಸೆಯ ಕಥಾವಸ್ತುವಿನೊಂದಿಗೆ ಬಂದಿದ್ದಾರೆ. ಈ ಬಿಗ್ ಪ್ರಾಜೆಕ್ಟ್‌ ಅನ್ನು ಖ್ಯಾತ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸುತ್ತಿದೆ. ಈ ಸಿನಿಮಾದಲ್ಲಿ ಹಾಡುವ ಅವಕಾಶ ಸಾನ್ವಿಗೆ ಸಿಕ್ಕಿದ್ದು, ಈ ಮೂಲಕ ಕಾಲಿವುಡ್​​ಗೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್​​ಗೆ ಇಷ್ಟ ಆಯ್ತು ಸಾನ್ವಿ ಸುದೀಪ್ ಕಂಠ; ಮೆಚ್ಚುಗೆ ಸೂಚಿಸಿದ ನಟ

ಸಿಗ್ಮಾ ಚಿತ್ರದಲ್ಲಿ ಕಲಾವಿದರ ದಂಡು

‘ಸಿಗ್ಮಾ’ ಸಿನಿಮಾದಲ್ಲಿ ಯುವ ನಟ ಸಂದೀಪ್ ಕಿಶನ್ ಹಾಗೂ ‘ಜಾತಿ ರತ್ನಲು’ ಖ್ಯಾತಿಯ ಫರಿಯಾ ಅಬ್ದುಲ್ಲಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಸ್. ಥಮನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಸಾನ್ವಿ ಅವರ ಗಾಯನಕ್ಕೆ ಅದ್ಭುತ ಮೆಲೋಡಿ ಸ್ಪರ್ಶ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us