‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಸಿಕ್ಕ ‘ಬುಕ್​ ಮೈ ಶೋ’, ‘ಐಎಂಡಿಬಿ’ ರೇಟಿಂಗ್​ ಎಷ್ಟು?

|

Updated on: Sep 03, 2023 | 11:50 AM

ಜನರು ನೀಡಿರುವ ಅಭಿಪ್ರಾಯದ ಆಧಾರದ ಮೇಲೆ ಈ ರೇಟಿಂಗ್​ ಕೊಡಲಾಗಿದೆ. ‘ಬುಕ್​ ಮೈ ಶೋ’ ಮತ್ತು ‘ಐಎಂಡಿಬಿ’ಯಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಸಾವಿರಾರು ಮಂದಿ ವೋಟ್​ ಮಾಡಿದ್ದಾರೆ. ವೀಕೆಂಡ್​ನಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಆ ಮೂಲಕ ರಕ್ಷಿತ್​ ಶೆಟ್ಟಿ ಅವರಿಗೆ ಗೆಲುವು ಸಿಕ್ಕಿದೆ.

‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಸಿಕ್ಕ ‘ಬುಕ್​ ಮೈ ಶೋ’, ‘ಐಎಂಡಿಬಿ’ ರೇಟಿಂಗ್​ ಎಷ್ಟು?
ರಕ್ಷಿತ್​ ಶೆಟ್ಟಿ, ರುಕ್ಮಿಣಿ ವಸಂತ್​
Follow us on

ನಟ ರಕ್ಷಿತ್​ ಶೆಟ್ಟಿ (Rakshit Shetty) ಅವರು ‘777 ಚಾರ್ಲಿ’ ಬಳಿಕ ಮತ್ತೆ ಗೆದ್ದು ಬೀಗಿದ್ದಾರೆ. ಅವರು ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ (ಸೈಡ್​ ಎ) ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ಸೆಪ್ಟೆಂಬರ್​ 1ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಹೇಮಂತ್​ ಎಂ. ರಾವ್​ ಅವರು ನಿರ್ದೇಶನ ಮಾಡಿದ್ದಾರೆ. ರಕ್ಷಿತ್​ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ ವಸಂತ್​ ಅವರು ಅಭಿನಯಿಸಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ವೀಕೆಂಡ್​ನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradaache Ello) ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಬಹುತೇಕ ಕಡೆಗಳಲ್ಲಿ ಹೌಸ್​ಫುಲ್​ ಆಗುತ್ತಿದೆ. ಹಾಗಾಗಿ ಈ ಚಿತ್ರಕ್ಕೆ ‘ಬುಕ್​ ಮೈ ಶೋ’ನಲ್ಲಿ (Book My Show) ಉತ್ತಮ ರೇಟಿಂಗ್​ ಸಿಕ್ಕಿದೆ. ಅದೇ ರೀತಿ ‘ಐಎಂಡಿಬಿ’ಯಲ್ಲೂ ಕೂಡ ಒಳ್ಳೆಯ ರೇಟಿಂಗ್​ ಪಡೆದುಕೊಂಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಜನರು ನೀಡಿರುವ ಅಭಿಪ್ರಾಯದ ಆಧಾರದ ಮೇಲೆ ಈ ರೇಟಿಂಗ್​ ಕೊಡಲಾಗಿದೆ. ‘ಬುಕ್​ ಮೈ ಶೋ’ನಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಭಾನುವಾರ (ಸೆಪ್ಟೆಂಬರ್​ 3) ಬೆಳಗ್ಗೆ 11 ಗಂಟೆ ತನಕ 6 ಸಾವಿರ ಜನರು ವೋಟ್​ ಮಾಡಿದ್ದಾರೆ. ‘ಐಎಂಡಿಬಿ’ಯಲ್ಲಿ ಸಾವಿರ ಮಂದಿ ವೋಟ್​ ಮಾಡಿದ್ದಾರೆ. ಈ ಮಾಹಿತಿ ಅನ್ವಯ ‘ಬುಕ್​ ಮೈ ಶೋ’ನಲ್ಲಿ 10ಕ್ಕೆ 9.2 ರೇಟಿಂಗ್​ ಸಿಕ್ಕಿದೆ. ‘ಐಎಂಡಿಬಿ’ಯಲ್ಲಿ 10ಕ್ಕೆ 9.1 ರೇಟಿಂಗ್​ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಜನರ ವೋಟಿಂಗ್​ ಸಂಖ್ಯೆ ಹೆಚ್ಚಿದ ಬಳಿಕ ರೇಟಿಂಗ್​ನಲ್ಲಿ ವ್ಯತ್ಯಾಸ ಆಗಬಹುದು.

ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿನ ರಕ್ಷಿತ್​ ಶೆಟ್ಟಿ ನಟನೆಗೆ ಫ್ಯಾನ್ಸ್​ ಫಿದಾ

ರಕ್ಷಿತ್​ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್​ ಎಂ. ರಾವ್​ ಅವರು ಈ ಹಿಂದೆ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಆ ಚಿತ್ರಕ್ಕೂ ಜನರ ಮೆಚ್ಚುಗೆ ಸಿಕ್ಕಿತ್ತು. ಈಗ ‘ಸಪ್ತ ಸಾಗರದಾಚೆ ಎಲ್ಲೋ’ (ಸೈಡ್​ ಎ) ಸಿನಿಮಾ ಕೂಡ ಗಮನ ಸೆಳೆದಿದೆ. ಒಂದು ಗಾಢವಾದ ಪ್ರೇಮಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್​ ಅವರ ನಟನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಚಿತ್ರದ 2ನೇ ಪಾರ್ಟ್ (ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ)​ ಅಕ್ಟೋಬರ್​ 20ರಂದು ಬಿಡುಗಡೆ ಆಗಲಿದೆ. ಆ ಚಿತ್ರದಲ್ಲಿ ಚೈತ್ರಾ ಆಚಾರ್​ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಎ’ ವಿಮರ್ಶೆ: ಪಾತ್ರ ಪರಿಚಯವೇ ಸುದೀರ್ಘ; ಭಾವ ತೀವ್ರತೆ ಅಮೋಘ

ಅವಿನಾಶ್​, ಪವಿತ್ರಾ ಲೋಕೇಶ್​, ಶರತ್​ ಲೋಹಿತಾಶ್ವ, ರಮೇಶ್​ ಇಂದಿರಾ, ಅಚ್ಯುತ್​ ಕುಮಾರ್, ಗೋಪಾಲ ದೇಶಪಾಂಡೆ ಮುಂತಾದವರು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಪೋಷಕ ಪಾತ್ರಗಳನ್ನು ನಿಭಾಯಿಸಿದ್ದಾರೆ. ಚರಣ್​ ರಾಜ್​ ಅವರ ಸಂಗೀತಕ್ಕೆ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ನಟಿ ರುಕ್ಮಿಣಿ ವಸಂತ್​ ಅವರ ಫ್ಯಾನ್​ ಫಾಲೋಯಿಂಗ್​ ಜಾಸ್ತಿ ಆಗುತ್ತಿದೆ. ಅವರಿಗೆ ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತಿವೆ. ‘ಸೈಡ್​ ಬಿ’ ನೋಡಲು ಕಾತರ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:40 am, Sun, 3 September 23