ಮೈಸೂರು: ಸಿನಿಮಾ ಪ್ರೇಮಿಗಳಿಗೆ ಮಧುರ ಅನುಭವಗಳನ್ನು ನೀಡಿದ್ದ ಸರಸ್ವತಿ ಚಿತ್ರಮಂದಿರ ಇನ್ನು ನೆನಪು ಮಾತ್ರ!

| Updated By: shivaprasad.hs

Updated on: Sep 21, 2021 | 3:01 PM

Cinema Halls: ಕೊರೊನಾ ಹೊಡೆತದಿಂದ ನಲುಗಿರುವ ಚಿತ್ರರಂಗಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಕೊರೊನಾ ಕಾರಣದಿಂದಲೇ ಸಂಕಷ್ಟದಲ್ಲಿದ್ದ, ಮೈಸೂರಿನ ಸರಸ್ವತಿ ಚಿತ್ರಮಂದಿರ ಇನ್ನು ಬಾಗಿಲು ಮುಚ್ಚಲಿದೆ.

ಮೈಸೂರು: ಸಿನಿಮಾ ಪ್ರೇಮಿಗಳಿಗೆ ಮಧುರ ಅನುಭವಗಳನ್ನು ನೀಡಿದ್ದ ಸರಸ್ವತಿ ಚಿತ್ರಮಂದಿರ ಇನ್ನು ನೆನಪು ಮಾತ್ರ!
‘ಸರಸ್ವತಿ’ ಚಿತ್ರಮಂದಿರದಲ್ಲಿ ‘ನಾಗರಹಾವು’ ಚಿತ್ರದ ಮರುಬಿಡುಗಡೆಯ ಸಂದರ್ಭ (Credits: Chaanu/ Twitter)
Follow us on

ಮೈಸೂರು: ಕೊರೊನಾ ಕಾರಣದಿಂದ ಚಿತ್ರರಂಗಕ್ಕೆ ಹಲವು ಬಗೆಯ ಸಂಕಷ್ಟಗಳು ಎದುರಾಗಿವೆ. ಕಲಾವಿದರಿಗೆ, ತಂತ್ರಜ್ಞರಿಗೆ ನೀಡಿದ ಹೊಡೆತ ಒಂದೆಡೆಯಾದರೆ, ಪ್ರದರ್ಶಕರಿಗೆ, ಚಿತ್ರ ಮಂದಿರಗಳ ಮಾಲೀಕರಿಗೆ ಹಲವು ವಿಧದಲ್ಲಿ ಸಮಸ್ಯೆಯಾಗಿತ್ತು. ಈ ಕಾರಣದಿಂದ ರಾಜ್ಯದಲ್ಲಿ ನಿಧಾನವಾಗಿ ಒಂದೊಂದೇ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿವೆ. ಕೊರೊನಾ ಪೂರ್ವ ಕಾಲದಲ್ಲಿಯೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಕಡಿಮೆಯಾಗಲು ಪ್ರಾರಂಭವಾಗಿದ್ದವು. ಆದರೆ ಕೊರೊನಾ ನಂತರ ಈ ಪ್ರಮಾಣ ಏರಿಕೆಯಾಗಿದೆ. ಈ ಸಾಲಿಗೆ ಇದೀಗ ಮೈಸೂರಿನ ಸರಸ್ವತಿ ಚಿತ್ರಮಂದಿರ ಸೇರಿದೆ.

ಕನ್ನಡದ ಚಿತ್ರಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುತ್ತಿದ್ದ ಮೈಸೂರು ನಗರದ ದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ‘ಸರಸ್ವತಿ’ ಚಿತ್ರಮಂದಿರ ಇದೀಗ ಬಾಗಿಲು ಮುಚ್ಚಿದೆ.  ಕೊರೊನಾ ಮಹಾಮಾರಿಯಿಂದ ಮೈಸೂರಿನ ಬಹುತೇಕ ಚಿತ್ರಮಂದಿರಗಳು ಸಮಸ್ಯೆಗೆ ಸಿಲುಕಿದ್ದವು. ಈಗಾಗಲೇ ಲಕ್ಷ್ಮೀ ಚಿತ್ರಮಂದಿರ ಮುಚ್ಚಲಾಗಿತ್ತು. ಅದಕ್ಕೂ ಮುನ್ನ ಇನ್ನಿತರ ಕಾರಣಗಳಿಂದಾಗಿ ‘ಶಾಂತಲಾ’ ಚಿತ್ರಮಂದಿರ ಬಂದ್ ಆಗಿತ್ತು. ಇದೀಗ ಸರಸ್ವತಿ ಚಿತ್ರಮಂದಿರ ತನ್ನ ಪ್ರದರ್ಶನ ನಿಲ್ಲಿಸಿದೆ.

ಚಿತ್ರಮಂದಿರದ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಾರಾಂ ಟಿವಿ9ನೊಂದಿಗೆ ಮಾತನಾಡಿ, ಸರ್ಕಾರ ಶೀಘ್ರದಲ್ಲೇ ಚಿತ್ರಮಂದಿರಗಳ ಸಹಾಯಕ್ಕೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ. ‘‘ಸರ್ಕಾರ ಚಿತ್ರಮಂದಿರಗಳಿಗೆ ಸಹಾಯ ಹಸ್ತ ಚಾಚಬೇಕು. ಇಲ್ಲವಾದರೆ ಮುಂದೆ ಮತ್ತಷ್ಟು ಚಿತ್ರಮಂದಿರಗಳು ಬಂದ್ ಆಗುವ ಸಾಧ್ಯತೆ ಇದೆ’’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಶೀಘ್ರದಲ್ಲೇ ಚಿತ್ರಮಂದಿರಗಳ 100 ಪ್ರತಿಶತ ಭರ್ತಿಗೆ ಅವಕಾಶ ಸಿಗುವ ಸಾಧ್ಯತೆ:

ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರಾದ ಜಯಣ್ಣ, ಕೆಪಿ ಶ್ರೀಕಾಂತ್, ಸೂರಪ್ಪ ಬಾಬು ಮೊದಲಾದವರು ಆರೋಗ್ಯ ಸಚಿವ ಡಾ.ಸುಧಾಕರ್ ಅವರನ್ನು ಭೇಟಿಯಾಗಿದ್ದು, ಚಿತ್ರಮಂದಿರಗಳ 100 ಪ್ರತಿಶತ ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಸರ್ಕಾರದಿಂದ ಅನುಮತಿ ಸಿಕ್ಕಲ್ಲಿ, ಬಿಡುಗಡೆಗೆ ಕಾದಿರುವ ಬಿಗ್​ ಬಜೆಟ್ ಸಿನಿಮಾಗಳು ಎರಡು ವಾರಗಳ ಅಂತರದಲ್ಲಿ ಒಂದೊಂದಾಗಿ ಬಿಡುಗಡೆ ಆಗಲಿವೆ ಎನ್ನಲಾಗಿದೆ. ಹೀಗಾದಲ್ಲಿ, ನಲುಗಿರುವ ಚಿತ್ರಮಂದಿರಗಳು ಚೇತರಿಕೆ ಕಾಣಬಹುದಾಗಿದೆ. ಈಗಾಗಲೇ ಬಿಡುಗಡೆಯ ಸಾಲಿನಲ್ಲಿ ಸುದೀಪ್​ ನಟನೆಯ ‘ಕೋಟಿಗೊಬ್ಬ 3’, ದುನಿಯಾ ವಿಜಯ್​ ನಟನೆಯ ‘ಸಲಗ’, ಹಾಗೂ ಶಿವರಾಜ್​ಕುಮಾರ್​ ಅಭಿನಯದ ‘ಭಜರಂಗಿ 2’ ಸಿನಿಮಾಗಳಿವೆ. ಸರ್ಕಾರದಿಂದ ಶೇ.100ರಷ್ಟು ಭರ್ತಿಗೆ ಅವಕಾಶ ಸಿಕ್ಕರೆ ಈ ಸಿನಿಮಾಗಳು ಸರದಿ ಪ್ರಕಾರ ತೆರೆಕಾಣಲಿವೆ.

ಇದನ್ನೂ ಓದಿ:

ಚಿತ್ರಮಂದಿರ ಸಂಸ್ಕೃತಿಯನ್ನು ನಾವು ನಾಶ ಮಾಡಬಾರದು; ರವಿಚಂದ್ರನ್​

ಸುಧಾಕರ್​ ಜೊತೆ ನಿರ್ಮಾಪಕರ ಮಾತುಕತೆ: ಕೋಟಿಗೊಬ್ಬ 3, ಭಜರಂಗಿ 2, ಸಲಗ ಸಿನಿಮಾಗಳ ಭವಿಷ್ಯವೇನು?

(Saraswathi Theater in Mysuru decides to close because of loss after Covid says reports)