ಸ್ಯಾಂಡಲ್​ವುಡ್​ ಹಿರಿಯ ನಿರ್ಮಾಪಕ ಕೆ. ಪ್ರಭಾಕರ್​ ನಿಧನ; ಕಂಬನಿ ಮಿಡಿದ ಚಿತ್ರರಂಗ

|

Updated on: Aug 27, 2024 | 8:55 PM

ವಿಷ್ಣುವರ್ಧನ್​, ಅಂಬರೀಷ್​, ಶಿವರಾಜ್​ಕುಮಾರ್​, ಉಪೇಂದ್ರ ಮುಂತಾದ ಹೆಸರಾಂತ ಕಲಾವಿದರ ಸಿನಿಮಾಗಳಿಗೆ ಕೆ. ಪ್ರಭಾಕರ್​ ಅವರು ಬಂಡವಾಳ ಹೂಡಿದ್ದರು. ಅವರಿಗೆ 64 ವರ್ಷ ವಯಸ್ಸು ಆಗಿತ್ತು. ಹೃದಯಾಘಾತದಿಂದ ಕೆ. ಪ್ರಭಾಕರ್​ ಕೊನೆಯುಸಿರು ಎಳೆದಿದ್ದಾರೆ. ಹಲವು ವರ್ಷಗಳಿಂದ ಸ್ಯಾಂಡಲ್​ವುಡ್​ನಲ್ಲಿ ಸಕ್ರಿಯವಾಗಿದ್ದ ಅವರ ಅಗಲಿಕೆಗೆ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.

ಸ್ಯಾಂಡಲ್​ವುಡ್​ ಹಿರಿಯ ನಿರ್ಮಾಪಕ ಕೆ. ಪ್ರಭಾಕರ್​ ನಿಧನ; ಕಂಬನಿ ಮಿಡಿದ ಚಿತ್ರರಂಗ
ಕೆ. ಪ್ರಭಾಕರ್​
Follow us on

ಕನ್ನಡ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಕೆ. ಪ್ರಭಾಕರ್​ ಅವರು ಬೆಂಗಳೂರಿನಲ್ಲಿ ಕೊನೆಯುಸಿರು ಎಳೆದಿದ್ದಾರೆ. ಇಂದು (ಆಗಸ್ಟ್​ 27) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೃದಯಾಘಾತ ಆದ ಬಳಿಕ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಅವರು ಇಹಲೋಕ ತ್ಯಜಿಸಿದ್ದಾರೆ. ಕೆ. ಪ್ರಭಾಕರ್​ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಹಿರಿಯ ನಿರ್ಮಾಪಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಸಭ್ಯ ನಿರ್ಮಾಪಕ ಎಂದು ಕೆ. ಪ್ರಭಾಕರ್​ ಅವರು ಗುರುತಿಸಿಕೊಂಡಿದ್ದಾರೆ. ಅನೇಕ ಸ್ಟಾರ್​ ಕಲಾವಿದರ ಜೊತೆ ಅವರು ಸಿನಿಮಾ ಮಾಡಿದ್ದರು. ಕಾಶಿನಾಥ್​, ಶಿವರಾಜ್​ಕುಮಾರ್​, ವಿಷ್ಣುವರ್ಧನ್​, ಉಪೇಂದ್ರ, ರಾಧಿಕಾ ಕುಮಾರಸ್ವಾಮಿ ಮುಂತಾದ ಕಲಾವಿದರ ಸಿನಿಮಾಗಳಿಗೆ ಕೆ. ಪ್ರಭಾಕರ್​ ಅವರು ಬಂಡವಾಳ ಹೂಡಿದ್ದರು. ಹಲವು ಸಿನಿಮಾಗಳ ಮೂಲಕ ಅವರು ಹೆಸರು ಗಳಿಸಿದ್ದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಪರಿಸ್ಥಿತಿ, ಹಿರಿಯ ನಟ ಜಗ್ಗೇಶ್ ಕಣ್ಣೀರು

ಕಾಶಿನಾಥ್​-ಭವ್ಯ ನಟನೆಯ ‘ಅವಳೇ ನನ್ನ ಹೆಂಡ್ತಿ’, ವಿಷ್ಣುವರ್ಧನ್​-ಪ್ರೇಮಾ ಅಭಿನಯದ ‘ಎಲ್ಲರಂಥಲ್ಲ ನನ್ನ ಗಂಡ’, ಶಿವರಾಜ್​ಕುಮಾರ್​-ರಾಧಿಕಾ ಕುಮಾರಸ್ವಾಮಿ ನಟಿಸಿದ ‘ಅಣ್ಣ-ತಂಗಿ’, ಉಪೇಂದ್ರ-ಶಿವರಾಜ್​ಕುಮಾರ್​ ಒಟ್ಟಾಗಿ ಅಭಿನಯಿಸಿದ ‘ಲವ-ಕುಶ’ ಮುಂತಾದ ಸಿನಿಮಾಗಳನ್ನು ಕೆ. ಪ್ರಭಾಕರ್​ ಅವರು ನಿರ್ಮಾಣ ಮಾಡಿದ್ದರು. ಪರಭಾಷೆಯ ಸಿನಿಮಾಗಳನ್ನು ಕೂಡ ಅವರು ನಿರ್ಮಿಸಿದ್ದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿರುವ ಮುಖ್ಯ ಸಮಸ್ಯೆ ಏನು? ಬೊಟ್ಟು ಮಾಡಿ ತೋರಿದ ದುನಿಯಾ ವಿಜಯ್

ಅಷ್ಟೇ ಅಲ್ಲದೇ, ವಿಷ್ಣುವರ್ಧನ್​ ನಟನೆಯ ‘ತುಂಬಿದ ಮನೆ’, ಅಂಬರೀಷ್​-ಮಾಲಾಶ್ರೀ ಅಭಿನಯದ ‘ಸೋಲಿಲ್ಲದ ಸರದಾರ’ ಮುಂತಾದ ಚಿತ್ರಗಳಿಗೂ ಕೆ. ಪ್ರಭಾಕರ್​ ಅವರು ಹಣ ಹೂಡಿದ್ದರು. ಕೌಟುಂಬಿಕ ಪ್ರೇಕ್ಷಕರನ್ನು ರಂಜಿಸುವಂತಹ ಸಿನಿಮಾಗಳನ್ನು ಮಾಡಿ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಸ್ಯಾಂಡಲ್​ವುಡ್​ನಲ್ಲಿ ಅನುಭವಿ ನಿರ್ಮಾಪಕನಾಗಿದ್ದ ಪ್ರಭಾಕರ್ ಅವರಿಗೆ 64 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.