ಕಲಬುರಗಿ: ಹೃದಯಾಘಾತದಿಂದ ವಿರಕ್ತ ಮಠದ ಸಿದ್ದರಾಮ ಮಹಾಸ್ವಾಮಿ ವಿಧಿವಶ

ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು (35) ತೀವ್ರ ಹೃದಯಾಘಾತದಿಂದ ಇಂದು ವಿಧಿವಶರಾಗಿದ್ದಾರೆ. ನಸುಕಿನ ಜಾವ ಹೃದಯಾಘಾತದಿಂದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದಾರೆ. ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ.

ಕಲಬುರಗಿ: ಹೃದಯಾಘಾತದಿಂದ ವಿರಕ್ತ ಮಠದ ಸಿದ್ದರಾಮ ಮಹಾಸ್ವಾಮಿ ವಿಧಿವಶ
ಹೃದಯಾಘಾತದಿಂದ ವಿರಕ್ತ ಮಠದ ಸಿದ್ದರಾಮ ಮಹಾಸ್ವಾಮಿ ವಿಧಿವಶ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಆಯೇಷಾ ಬಾನು

Updated on: Jul 08, 2024 | 10:36 AM

ಕಲಬುರಗಿ, ಜುಲೈ.08: ಹೃದಯಾಘಾತದಿಂದ (Heart Attack) ವಿರಕ್ತ ಮಠದ (Virakta Math) ಸಿದ್ದರಾಮ ಮಹಾಸ್ವಾಮಿ(35) ವಿಧಿವಶರಾಗಿದ್ದಾರೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ವಿರಕ್ತ ಮಠದ ಸಿದ್ದರಾಮಶ್ರೀ ಅವರಿಗೆ ಮುಂಜಾನೆ ಹೃದಯಾಘಾತವಾಗಿದ್ದು ವಿಧಿವಶರಾಗಿದ್ದಾರೆ. ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ.

ನಿನ್ನೆ ರಟಕಲ್ ಗ್ರಾಮದಲ್ಲಿ ನಡೆದ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಶಾಸಕ ಬಿ.ಆರ್.ಪಾಟೀಲ್, ಅನೇಕ ಪ್ರಮುಖರು ಭಾಗವಹಿಸಿದ್ದರು.

‘ದಲಿತರ ಹಣ ಲೂಟಿ ಮಾಡಿದ್ದಾರೆ’

ದಲಿತರ ಹಣ ಲೂಟಿ ಮಾಡಿದ್ದಾರೆ, ಮೈಸೂರಿನಲ್ಲಿ ಮುಡಾ ಸೈಟ್‌ ಕಬಳಿಕೆಯಾಗಿದೆ ಅಂತಾ ಅಶೋಕ್​ ಆರೋಪಿಸಿದ್ದಾರೆ. ಈಗ ಸದ್ಯ ವಿಧಾನಸಭೆ ಚುನಾವಣೆ ನಡೆದರೂ BJP, JDS ಮೈತ್ರಿಗೆ ಗೆಲುವಾಗಲಿದೆ. ಶಾಸಕರು ಅಭಿವೃದ್ಧಿ ಹಣಕ್ಕೆ ಸಚಿವರ ಕೊರಳಪಟ್ಟಿ ಹಿಡಿಯುವ ಸ್ಥಿತಿ ಬಂದಿದೆ. ಇಂಧನ, ಕಂದಾಯ, ಆಸ್ತಿ ತೆರಿಗೆ ಹೆಚ್ಚಿಸಿ ಜನರ ಜೀವ ಹಿಂಡುತ್ತಿದ್ದಾರೆ. ಮನೆಹಾಳು ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಎಲ್ಲವನ್ನೂ ಹಾಳು ಮಾಡ್ತಿದ್ದಾರೆ ಅಂತಾ ಕಿಡಿಕಾರಿದ್ರು.

ಇದನ್ನೂ ಓದಿ: ಮಕ್ಕಳನ್ನು ಆಚೆ ಬಿಡುವ ಪೋಷಕರೇ ಎಚ್ಚರ; 4 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ, ಮುಖಕ್ಕೆ ಗಾಯ

‘ಕಾಂಗ್ರೆಸ್‌ನವರು ಮನೆ ಹಾಳು ಮಾಡುತ್ತಿದ್ದಾರೆ’

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಪಾಪರ್‌ ಆಗಿದೆ. ರಾಜ್ಯ ಸರ್ಕಾರದ ಬಳಿ ನಯಾಪೈಸೆ ಇಲ್ಲವೆಂದು ಆರ್‌.ಅಶೋಕ್ ಕಿಡಿಕಾರಿದ್ದಾರೆ. ನೆಲಮಂಗಲದಲ್ಲಿ ನಡೆದ ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತಾಡಿ, ಡೆಂಘೀಯಿಂದ ಜನ ಸಾಯುತ್ತಿದ್ದಾರೆ, ‘ಕೈ’ನ್ನು ಏಕೆ ಗೆಲ್ಲಿಸಿದ್ದೇವೆ ಅಂತಿದ್ದಾರೆ. ಗಂಡನ ಜೇಬಿಗೆ ಕತ್ತರಿ ಹಾಕಿ ಹೆಣ್ಣು ಮಕ್ಕಳಿಗೆ ಹಣ ನೀಡುತ್ತಿದ್ದಾರೆ. ಕಾಂಗ್ರೆಸ್‌ನವರು ಮನೆ ಹಾಳು ಮಾಡುತ್ತಿದ್ದಾರೆಂದು ಅಶೋಕ್ ವಾಗ್ದಾಳಿ ನಡೆಸಿದ್ರು.

‘ನನ್ನ ಹೆಸರಲ್ಲಿ ಮುಡಾ ಸೈಟ್ ಇದ್ರೆ ರಾಜೀನಾಮೆ ಕೊಡ್ತೀನಿ’

ನನ್ನ ಅಥವಾ ಬೇನಾಮಿ ಹೆಸರಿನಲ್ಲಿ ಮುಡಾ ಸೈಟ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಸ್​ಟಿಎಸ್ ಸವಾಲು ಹಾಕಿದ್ದಾರೆ. ಮುಡಾದಿಂದ ನಾನು ಒಂದೇ ಒಂದು ನಿವೇಶನ ತೆಗೆದುಕೊಂಡಿಲ್ಲ. ಯಾರಿಗೂ ಒತ್ತಡ ಹೇರಿ ಮುಡಾದಿಂದ ನಿವೇಶನ ಕೊಡಿಸಿಲ್ಲ. ಮುಡಾ ಹಗರಣದಲ್ಲಿ ಅನಗತ್ಯವಾಗಿ ನನ್ನ ಹೆಸರು ತರಬೇಡಿ ಅಂತಾ ಮೈಸೂರಿನಲ್ಲಿ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಮನವಿ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ