ಕನ್ನಡದ ಮತ್ತೊಂದು ಜನಪ್ರಿಯ ಧಾರಾವಾಹಿಯಲ್ಲಿ ಶೆಡ್ ಹಾಗೂ ಮೋರಿಯ ಬಗ್ಗೆ ಉಲ್ಲೇಖ

ಈ ಮೊದಲು ‘ಶಾಂತಂ ಪಾಪಂ’ ಧಾರಾವಾಹಿಯಲ್ಲಿ ದರ್ಶನ್ ಪ್ರಕರಣವನ್ನು ಹೋಲುವ ರೀತಿಯಲ್ಲಿ ಎಪಿಸೋಡ್ ಮಾಡಲಾಗಿತ್ತು. ಆ ದೃಶ್ಯಕ್ಕೂ ದರ್ಶನ್ ಪ್ರಕರಣಕ್ಕೂ ಸಾಕಷ್ಟು ಹೋಲಿಕೆ ಇತ್ತು. ಜುಲೈ ತಿಂಗಳಲ್ಲಿ ಈ ಎಪಿಸೋಡ್ ನಡೆದಿತ್ತು. ಈಗ ಮತ್ತೊಂದು ಧಾರಾವಾಹಿಯಲ್ಲಿ ಇದೇ ರೀತಿಯ ಯಲ್ಲೇಖ ಆಗಿದೆ.

ಕನ್ನಡದ ಮತ್ತೊಂದು ಜನಪ್ರಿಯ ಧಾರಾವಾಹಿಯಲ್ಲಿ ಶೆಡ್ ಹಾಗೂ ಮೋರಿಯ ಬಗ್ಗೆ ಉಲ್ಲೇಖ
ಅಮೃತಧಾರೆ ಧಾರಾವಾಹಿ

Updated on: Nov 05, 2024 | 1:05 PM

ನಟ ದರ್ಶನ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದವರು. ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಅವರು ನಾಲ್ಕೂವರೆ ತಿಂಗಳು ಜೈಲಿನಲ್ಲಿ ಇದ್ದರು. ಈಗ ದರ್ಶನ್ ಹೊರ ಬಂದಿದ್ದಾರೆ. ಆದಾಗ್ಯೂ ಧಾರಾವಾಹಿಗಳಲ್ಲಿ ಶೆಡ್​ ಹಾಗೂ ಮೋರಿಗಳ ಪದ ಬಳಕೆ ತಪ್ಪಿಲ್ಲ. ಈಗ ಕನ್ನಡದ ಮತ್ತೊಂದು ಜನಪ್ರಿಯ ಧಾರಾವಾಹಿಯಲ್ಲಿ ಈ ರೀತಿಯ ಪದ ಬಳಕೆ ಆಗಿದೆ.

ದರ್ಶನ್ ಹಾಗೂ ಅವರ ಗ್ಯಾಂಗ್ ರೇಣುಕಾಸ್ವಾಮಿಯನ್ನು ಶೆಡ್​ನಲ್ಲಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಇದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿ ಮೋರಿಯ ಬದಿಯಲ್ಲಿ ಹಾಕಲಾಗಿತ್ತು. ಈಗ ‘ಅಮೃತಧಾರೆ’ ಧಾರಾವಾಹಿಯಲ್ಲೂ ಶೆಡ್​ ಬಗ್ಗೆ ಉಲ್ಲೇಖ ಇದೆ.

ಕಥಾ ನಾಯಕ ಗೌತಮ್ (ರಾಜೇಶ್ ನಟರಂಗ) ತಾಯಿ ಬದುಕಿದ್ದಾಳೆ ಎಂಬ ವಿಚಾರವನ್ನು ಹೇಳಲು ಧನ್ಯಾ ಎಂಬುವವಳು ಬಂದಿದ್ದಳು. ಆದರೆ, ಈ ಸತ್ಯ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಗೌತಮ್ ಮಲತಾಯಿ ಶಂಕುತಲಾ ದೇವಿ (ವನಿತಾ ವಾಸು) ಪ್ರಯತ್ನಿಸುತ್ತಾಳೆ. ಹೀಗಾಗಿ, ತಮ್ಮ ಒಡೆತನದ ಶೆಡ್​ಗೆ (ಗೋಡೌನ್​) ಧನ್ಯಾನ ಕರೆತರುತ್ತಾಳೆ ಮತ್ತು ಆಕೆಯನ್ನು ಕೊಲೆ ಮಾಡುತ್ತಾಳೆ. ‘ಈ ಹೆಣವನ್ನು ತೆಗೆದುಕೊಂಡು ಹೋಗಿ ಯಾವುದಾದರೂ ಮೋರಿಗೆ ಎಸೆಯಿರಿ’ ಎಂದು ಹೇಳುತ್ತಾಳೆ.

ಸದ್ಯ ಈ ಧಾರಾವಾಹಿಯಲ್ಲಿ ಶೆಡ್​ ಹಾಗೂ ಮೋರಿ ಎರಡೂ ಸ್ಥಳಗಳ ಉಲ್ಲೇಖ ಆಗಿದೆ. ಈ ಧಾರಾವಾಹಿಯ ದೃಶ್ಯ ನೋಡಿದವರಿಗೆ ಅನೇಕರಿಗೆ ದರ್ಶನ್ ಪ್ರಕರಣ ನೆನಪಾಗಿದೆ. ಆದರೆ, ಇದು ಕೇವಲ ಕಾಕತಾಳೀಯ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್ ಭೇಟಿಯಾಗಲು ಅನುಮತಿ ಇರುವುದು ಈ ಏಳು ಜನರಿಗೆ ಮಾತ್ರ

ಈ ಮೊದಲು ‘ಶಾಂತಂ ಪಾಪಂ’ ಧಾರಾವಾಹಿಯಲ್ಲಿ ದರ್ಶನ್ ಪ್ರಕರಣವನ್ನು ಹೋಲುವ ರೀತಿಯಲ್ಲಿ ಎಪಿಸೋಡ್ ಮಾಡಲಾಗಿತ್ತು. ಆ ದೃಶ್ಯಕ್ಕೂ ದರ್ಶನ್ ಪ್ರಕರಣಕ್ಕೂ ಸಾಕಷ್ಟು ಹೋಲಿಕೆ ಇತ್ತು. ಜುಲೈ ತಿಂಗಳಲ್ಲಿ ಈ ಎಪಿಸೋಡ್ ನಡೆದಿತ್ತು. ಆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು.

ಸದ್ಯ ಗೌತಮ್ ತಾಯಿ ಪಾತ್ರದಲ್ಲಿ ಚಿತ್ಕಲಾ ಬಿರಾದಾರ್ ಮಾಡುತ್ತಿದ್ದಾರೆ. ಅವರು ಈ ಮೊದಲು ‘ಕನ್ನಡತಿ’ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಅವರು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:03 pm, Tue, 5 November 24

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us