ದರ್ಶನ್ ಭೇಟಿಯಾಗಲು ಅನುಮತಿ ಇರುವುದು ಈ ಏಳು ಜನರಿಗೆ ಮಾತ್ರ

Darshan Thoogudeepa: ದರ್ಶನ್​ಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿನ್ನೆಯೇ ಅಗತ್ಯ ಪರೀಕ್ಷೆಗಳನ್ನು ಮಾಡಲಾಗಿದೆ. ಆಸ್ಪತ್ರೆಯಲ್ಲಿ ದರ್ಶನ್ ಅನ್ನು ಭೇಟಿ ಮಾಡಲು ಕೇವಲ ಏಳು ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ.

ದರ್ಶನ್ ಭೇಟಿಯಾಗಲು ಅನುಮತಿ ಇರುವುದು ಈ ಏಳು ಜನರಿಗೆ ಮಾತ್ರ
ದರ್ಶನ್
Follow us
ಮಂಜುನಾಥ ಸಿ.
|

Updated on: Nov 02, 2024 | 2:33 PM

ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಇದೇ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಬೆನ್ನು ನೋವಿನ ಚಿಕಿತ್ಸೆಗೆಂದು ಆರು ವಾರಗಳ ಮಧ್ಯಂತರ ಜಾಮೀನನ್ನು ಹೈಕೋರ್ಟ್ ನೀಡಿದೆ. ಜಾಮೀನು ದೊರೆತ ಮೊದಲೆರಡು ಮನೆಯಲ್ಲಿ ಕಳೆದ ನಟ ದರ್ಶನ್ ಮೂರನೇ ದಿನ ಅಂದರೆ ನಿನ್ನೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಹಲವು ಪರೀಕ್ಷೆಗಳನ್ನು ದರ್ಶನ್​ಗೆ ಬಿಜಿಎಸ್ ವೈದ್ಯರು ಮಾಡಿದ್ದು, ನಿನ್ನೆಯೇ ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದರು.

ಇಂದಿನಿಂದ ದರ್ಶನ್​ಗೆ ವಿವಿಧ ಚಿಕಿತ್ಸೆಗಳು ಪ್ರಾರಂಭ ಆಗಿವೆ. ಅಲ್ಲದೆ ಆಸ್ಪತ್ರೆಯಲ್ಲಿ ದರ್ಶನ್​ಗಾಗಿ ಕೆಲವು ನಿಯಮಗಳನ್ನು ಸಹ ರೂಪಿಸಲಾಗಿವೆ. ವಿಶೇಷವಾಗಿ ದರ್ಶನ್ ಅನ್ನು ಬರುವ ಯಾರಿಗೂ ಸಹ ಪ್ರವೇಶ ಇರುವುದಿಲ್ಲ. ಕೇವಲ ಏಳು ಜನರಿಗೆ ಹೊರತುಪಡಿಸಿ ಇನ್ಯಾರಿಗೂ ಸಹ ದರ್ಶನ್ ಅನ್ನು ಭೇಟಿ ಮಾಡುವ ಅವಕಾಶ ಇರುವುದಿಲ್ಲ. ಈ ವಿಷಯವನ್ನು ದರ್ಶನ್ ಕುಟುಂಬದವರೇ ಆಸ್ಪತ್ರೆಯವರಿಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೇಶ್, ತಾಯಿ ಮೀನಮ್ಮ, ಸಹೋದರ ದಿನಕರ್ ತೂಗುದೀಪ್, ದರ್ಶನ್ ಆಪ್ತ ಧನ್ವೀರ್ ಹಾಗೂ ವಕೀಲರನ್ನು ಬಿಟ್ಟರೆ ಇನ್ಯಾರೂ ಸಹ ದರ್ಶನ್ ಅನ್ನು ಭೇಟಿ ಮಾಡುವಂತಿಲ್ಲ ಎನ್ನಲಾಗಿದೆ. ದರ್ಶನ್​ಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ, ಅದರ ಜೊತೆಗೆ ಭೇಟಿಗೆ ಹೆಚ್ಚು ಜನ ಬಂದರೆ ಆಸ್ಪತ್ರೆಯಲ್ಲಿ ಇತರ ರೋಗಿಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸಮಸ್ಯೆ ಆಗುತ್ತದೆ, ಭದ್ರತೆ ಸಮಸ್ಯೆಯೂ ಇರುತ್ತದೆಯಾದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ:ದರ್ಶನ್ ತೂಗುದೀಪ ಬಂಧನವಾಗಿ ಇಂದಿಗೆ 100 ದಿನ; ಜೂನ್​ 11ರಿಂದ ಇಲ್ಲಿಯವರೆಗೆ ಏನೆಲ್ಲ ಆಯ್ತು?

ಕುಟುಂಬದವರ ಹೊರತಾಗಿ ಧನ್ವೀರ್​ಗೆ ಮಾತ್ರವೇ ದರ್ಶನ್ ಭೇಟಿಗೆ ಅವಕಾಶ ನೀಡಲಾಗಿದೆ. ದರ್ಶನ್ ಜೈಲು ಸೇರಿದಾಗಿನಿಂದಲೂ ವಿಜಯಲಕ್ಷ್ಮಿ ಅವರ ಜೊತೆಗೆ ಧನ್ವೀರ್ ನಿಂತಿದ್ದು, ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಕೆಲ ಭಾರಿ ವಿಜಯಲಕ್ಷ್ಮಿ ಅವರ ಜೊತೆಗೆ ದರ್ಶನ್ ಭೇಟಿಗೆ ಧನ್ವೀರ್ ಸಹ ಬಳ್ಳಾರಿಗೆ ಬಂದಿದ್ದರು. ಧನ್ವೀರ್ ಅನ್ನು ದರ್ಶನ್ ಸಹೋದರನೆಂದೇ ಪರಿಗಣಿಸಿರುವ ಕಾರಣ ಅವರಿಗೂ ಸಹ ದರ್ಶನ್ ಭೇಟಿಗೆ ಅವಕಾಶ ನೀಡಲಾಗಿದೆ.

ಇನ್ನು ದರ್ಶನ್​ಗೆ ಎಲ್​1-ಎಲ್​5 ಸಮಸ್ಯೆ ಇದ್ದು, ಇದೇ ಕಾರಣಕ್ಕೆ ತೀವ್ರ ಬೆನ್ನುನೋವು ಹಾಗೂ ಎಡಗಾಲಿನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಎಡಗಾಲು ಸ್ಪರ್ಷಜ್ಞಾನ ಕಳೆದುಕೊಳ್ಳುತ್ತಿದ್ದು ಇದೇ ಕಾರಣಕ್ಕೆ ಶೀಘ್ರವಾಗಿ ದರ್ಶನ್​ಗೆ ಚಿಕಿತ್ಸೆ ನೀಡಲಾಗುತ್ತಿದೆ. ದರ್ಶನ್​ಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾ ಅಥವಾ ಫಿಸಿಯೋಥೆರಪಿನಾ ಎನ್ನುವುದು ಇನ್ನು 48 ಗಂಟೆಗಳಲ್ಲಿ ನಿರ್ಧಾರ ಆಗಲಿದೆ. ವೈದ್ಯರು ದರ್ಶನ್​ಗೆ ಮಾಡಿರುವ ಪರೀಕ್ಷಾ ವರದಿಗಳನ್ನು ಪರಾಮರ್ಶೆ ಮಾಡುತ್ತಿದ್ದು, ಕುಟುಂಬದ ಜೊತೆಗೆ ಹಾಗೂ ರೋಗಿ ದರ್ಶನ್​ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ