AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

48 ಗಂಟೆಯಲ್ಲಿ ಗೊತ್ತಾಗಲಿದೆ ದರ್ಶನ್ ಬೆನ್ನು ನೋವಿನ ಗಂಭೀರತೆ: ವೈದ್ಯರ ಮಾಹಿತಿ

ಬಳ್ಳಾರಿ ಜೈಲಿನಲ್ಲಿ ಇದ್ದಾಗ ದರ್ಶನ್ ಅವರಿಗೆ ಬೆನ್ನು ನೋವು ಜಾಸ್ತಿ ಆಗಿತ್ತು. ನಡೆದಾಡಲು ಕೂಡ ಕಷ್ಟಪಡುವ ಪರಿಸ್ಥಿತಿ ಬಂದಿತ್ತು. ಅನಾರೋಗ್ಯದ ಕಾರಣದಿಂದ ಜಾಮೀನು ಪಡೆದುಕೊಂಡಿರುವ ದರ್ಶನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಶುರು ಮಾಡಿದ್ದಾರೆ. ಅವರಿಗೆ ಯಾವ ರೀತಿಯ ಚಿಕಿತ್ಸೆ ಆರಂಭಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

48 ಗಂಟೆಯಲ್ಲಿ ಗೊತ್ತಾಗಲಿದೆ ದರ್ಶನ್ ಬೆನ್ನು ನೋವಿನ ಗಂಭೀರತೆ: ವೈದ್ಯರ ಮಾಹಿತಿ
ದರ್ಶನ್, ನವೀನ್ ಅಪ್ಪಾಜಿ ಗೌಡ
ಮದನ್​ ಕುಮಾರ್​
|

Updated on: Nov 01, 2024 | 7:30 PM

Share

ಕೆಂಗೇರಿಯ ಬಿಜಿಎಸ್​ ಆಸ್ಪತ್ರೆಯಲ್ಲಿ ದರ್ಶನ್ ದಾಖಲಾಗಿದ್ದಾರೆ. ಆ ಬಳಿಕ ವೈದ್ಯ ನವೀನ್ ಅಪ್ಪಾಜಿ ಗೌಡ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ‘ಬೆನ್ನು ನೋವಿನಿಂದ ದರ್ಶನ್ ಅವರು ಇಂದು 3.30ರ ಸುಮಾರಿಗೆ ಬಂದು ಅಡ್ಮಿಟ್ ಆಗಿದ್ದಾರೆ. ನಾವು ತಪಾಸಣೆ ಮಾಡಿದ್ದೇನೆ. ಕಾಲು ನೋವು ಇದೆ. ಅದರಿಂದ ಬೆನ್ನು ನೋವು ಕೂಡ ಇದೆ. ಎಡಗಡೆ ಕಾಲಿನಲ್ಲಿ ವೀಕ್​ನೆಸ್​ ಇದೆ. ಆ ಕಾಲ ಆಡುವುದು ಸ್ವಲ್ಪ ಕಮ್ಮಿ ಆಗಿದೆ. ಹೆಚ್ಚಿನ ತಪಾಸಣೆ ಮಾಡಿ, ಯಾವ ರೀತಿ ಚಿಕಿತ್ಸೆ ಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಪೂರ್ತಿ ತಪಾಸಣೆ ಆದ ನಂತರ ಏನಾಗಿದೆ ಎಂಬುದು ನಮಗೆ ಗೊತ್ತಾಗುತ್ತದೆ. ಎಂಆರ್​ಐ, ಎಕ್ಸ್​ರೇ ಮತ್ತು ರಕ್ತದ ಪರೀಕ್ಷೆ ಮಾಡಬೇಕಾಗುತ್ತದೆ’ ಎಂದು ವೈದ್ಯರು ಹೇಳಿದ್ದಾರೆ.

‘ಒಂದು ವಾರದ ಹಿಂದೆ ಮಾಡಿದ ಎಂಆರ್​ಐ ಫಿಲ್ಮ್​ ನಮಗೆ ಲಭ್ಯವಾಗಿಲ್ಲ. ಆದ್ದರಿಂದ ಇನ್ನೊಮ್ಮೆ ಎಂಆರ್​ಐ ಮಾಡಬೇಕಾಗುತ್ತದೆ. ಸದ್ಯಕ್ಕೆ ಅವರಿಗೆ ತುಂಬ ನೋವು ಇದೆ. ಶಸ್ತ್ರ ಚಿಕಿತ್ಸೆಯ ಅಗತ್ಯ ಇದೆಯೋ ಇಲ್ಲವೋ ಎಂಬುದು ಈಗಲೇ ಹೇಳೋಕೆ ಆಗಲ್ಲ. 24ರಿಂದ 48 ಗಂಟೆಯ ಒಳಗೆ ಎಲ್ಲ ರಿಪೋರ್ಟ್​ಗಳು ಸಿಗುತ್ತವೆ. ತುಂಬ ನೋವು ಇರುವುದರಿಂದ ಔಷಧಿ ನೀಡಲು ಆರಂಭಿಸಿದ್ದೇವೆ’ ಎಂದಿದ್ದಾರೆ ಡಾ. ನವೀನ್ ಅಪ್ಪಾಜಿಗೌಡ.

ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ನಡೆದಾಡಲು ಕಷ್ಟಪಡುತ್ತಿದ್ದ ವಿಡಿಯೋಗಳನ್ನು ನೋಡಿ ಅಭಿಮಾನಿಗಳು, ಕುಟುಂಬದವರು, ಆಪ್ತರು ಬೇಸರ ಮಾಡಿಕೊಂಡಿದ್ದರು. ಆದಷ್ಟು ಬೇಗ ಅವರಿಗೆ ಜಾಮೀನು ಸಿಗುವಂತಾಗಲಿ ಎಂದು ಪ್ರಾರ್ಥಿಸಿದ್ದರು. ಈಗ ಅವರು ಜಾಮೀನು ಪಡೆದು 2 ದಿನಗಳು ಕಳೆದಿವೆ. ಒಂದು ವಾರದ ಒಳಗೆ ಅವರು ತಮ್ಮ ಚಿಕಿತ್ಸೆಯ ವರದಿಯನ್ನು ಕೋರ್ಟ್​ಗೆ ನೀಡಬೇಕಿದೆ.

ಇದನ್ನೂ ಓದಿ: ನಟ ದರ್ಶನ್​ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು

ರೇಣುಕಾಸ್ವಾಮಿ ಮರ್ಡರ್​ ಕೇಸ್​ನಲ್ಲಿ ಎ2 ಆಗಿರುವ ದರ್ಶನ್ 6 ವಾರಗಳ ಕಾಲ ಜಾಮೀನು ಪಡೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಅವರಿಗೆ ಬೆನ್ನು ನೋವು ಇತ್ತು. ಕಳೆದ ವರ್ಷ ‘ಕಾಟೇರ’ ಸಿನಿಮಾ ಶೂಟಿಂಗ್ ಮಾಡುವಾಗಲೂ ಅವರು ನೋವು ಅನುಭವಿಸುತ್ತಿದ್ದರು. ಜೈಲಿಗೆ ಸೇರಿದ ಬಳಿಕ ನೋವು ಹೆಚ್ಚಾಯಿತು. ಈಗ ಚಿಕಿತ್ಸೆ ಪಡೆಯಲು ಬಂದಿರುವ ಅವರೊಂದಿಗೆ ಪತ್ನಿ ವಿಜಯಲಕ್ಷ್ಮಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.