ಶಿವಣ್ಣ-ಉಪೇಂದ್ರ ಮುಂದೆ ಕರಾಟೆ ಪ್ರದರ್ಶಿಸಿದ ರಾಜ್ ಬಿ ಶೆಟ್ಟಿ

Raj B Shetty: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ‘45’ ಸಿನಿಮಾನಲ್ಲಿ ಮೂರು ಜನ ಸ್ಟಾರ್ ನಟರು ನಟಿಸಿದ್ದು, ಸಿನಿಮಾದಲ್ಲಿ ನಟಿಸಿರುವ ರಾಜ್ ಬಿ ಶೆಟ್ಟಿಯವರ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಲಾಗಿದೆ.

ಶಿವಣ್ಣ-ಉಪೇಂದ್ರ ಮುಂದೆ ಕರಾಟೆ ಪ್ರದರ್ಶಿಸಿದ ರಾಜ್ ಬಿ ಶೆಟ್ಟಿ
Follow us
ಮಂಜುನಾಥ ಸಿ.
|

Updated on: Nov 02, 2024 | 6:41 PM

ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶಕನ ಮಾಡಿರುವ ಸಿನಿಮಾ ‘45’ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದ್ದು, ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಹೆಚ್ಚಿನ ಸುದ್ದಿಗಳು ಇಷ್ಟು ದಿನ ಹೊರಬಿದ್ದಿರಲಿಲ್ಲ. ಇದೀಗ ಒಮ್ಮೆಲೆ ರಾಜ್ ಬಿ ಶೆಟ್ಟಿಯ ಪಾತ್ರದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ರಾಜ್ ಬಿ ಶೆಟ್ಟಿ ಸಖತ್ ಭಿನ್ನವಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಈ ಟೀಸರ್​ನಿಂದ ತಿಳಿದು ಬರುತ್ತಿದೆ.

ಈಗ ಬಿಡುಗಡೆ ಆಗಿರುವ ರಾಜ್ ಬಿ ಶೆಟ್ಟಿ ಅವರ ಕ್ಯಾರೆಕ್ಟರ್ ಟೀಸರ್​ ಬ್ಲಾಕ್ ಆಂಡ್ ವೈಟ್​ನಲ್ಲಿ ಆರಂಭವಾಗುತ್ತದೆ. ರಾಜ್ ಬಿ ಶೆಟ್ಟಿಯನ್ನು ಇಬ್ಬರು ರೌಡಿಗಳು ಅಡ್ಡಗಟ್ಟಿದ್ದಾರೆ. ಅವರೊಟ್ಟಿಗೆ ತಮಾಷೆಯ ದನಿಯಲ್ಲಿ ಮಂಗಳೂರು ಶೈಲಿಯ ಕನ್ನಡದಲ್ಲಿ ಮಾತನಾಡುವ ರಾಜ್ ಬಿ ಶೆಟ್ಟಿ, ರೌಡಿಗಳು ಚಾಕು ತೆಗೆದು ಹೆದರಿಸಲು ಪ್ರಯತ್ನಿಸಿದಾಗ ‘ನನ್ನ ಮೈಮುಟ್ಟುವ ಪ್ರಯತ್ನ ಮಾಡಬೇಡಿ, ನಮ್ಮಣ್ಣ ನಾನು ಚಿಕ್ಕವನಿದ್ದಾಗ ಕರಾಟೆ ಕ್ಲಾಸ್​ಗೆ ಕಳಿಸಿದ್ದ’ ಎನ್ನುತ್ತಾ ಕರಾಟೆ ಪ್ರತಿಭೆ ಪ್ರದರ್ಶಿಸಲು ಮುಂದಾಗುತ್ತಾರೆ. ಅಲ್ಲಿಗೆ ಟೀಸರ್ ಅಂತ್ಯವಾಗಿದೆ. ಟೀಸರ್ ನೋಡಿದವರಿಗೆ ರಾಜ್ ಬಿ ಶೆಟ್ಟಿ ಅವರದ್ದು ಹಾಸ್ಯ ಭರಿತವಾಗಿರುವ ನಾಯಕ ಪಾತ್ರ ಅನಿಸುತ್ತದೆ. ಮಾತ್ರವಲ್ಲ, ಟೀಸರ್​ನಲ್ಲಿ ರಾಜ್ ಬಿ ಶೆಟ್ಟಿಯನ್ನು ಎದುರಾಗಿ ಚಾಕು ತೋರಿಸಿ ಹೆದರಿಸಲು ಯತ್ನಿಸಿರುವ ಇಬ್ಬರು ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಎನ್ನುವ ಅನುಮಾನವೂ ಮೂಡುತ್ತದೆ. ಏಕೆಂದರೆ ಅವರ ಒಬ್ಬರ ಚಾಕುವಿಗೆ ‘ಓಂ’ ಹೆಸರಿನ ಚೈನ್ ಇದ್ದರೆ ಇನ್ನೊಬ್ಬರ ಚಾಕುವಿಗೆ ತ್ರಿಶೂಲವಿದೆ.

ಇದನ್ನೂ ಓದಿ:ಹೊಸ ಸಿನಿಮಾ ಪ್ರಾರಂಭಿಸಿದ ರಾಜ್ ಬಿ ಶೆಟ್ಟಿ, ನಿರ್ದೇಶನ ಯಾರದ್ದು?

ಶರ್ಟ್, ಟೈ ಹಾಕಿಕೊಂಡು ಕಾರ್ಪೊರೇಟ್ ಉದ್ಯೋಗಿಯಂತೆ ರಾಜ್ ಬಿ ಶೆಟ್ಟಿ ಕಾಣಿಸುತ್ತಿದ್ದಾರೆ. ಕೈಯಲ್ಲಿ ಕಡಗ ಸಹ ಇದೆ. ಈಗ ಕಾರ್ಪೊರೇಟ್ ಉದ್ಯೋಗ ಮಾಡುತ್ತಿರುವ ಆದರೆ ಫ್ಲ್ಯಾಶ್​ಬ್ಯಾಕ್​​ನಲ್ಲಿ ರೌಡಿಸಂ ಹಿಸ್ಟರಿ ಇರುವ ಪಾತ್ರ ಇವರದ್ದಾಗಿರಬಹುದು ಎಂಬ ಅನುಮಾನವೂ ಸಹ ಮೂಡುತ್ತಿದೆ. ಈ ಟೀಸರ್ ಹಂಚಿಕೊಂಡಿರುವ ನಿರ್ದೇಶಕ ಅರ್ಜುನ್ ಜನ್ಯ, ‘ಕರಾಟೆ ಪಟು ಬರ್ತಿದ್ದಾರೆ ಎಲ್ಲಾರು ಹುಷಾರು’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚಿನ ಅಪ್​ಡೇಟ್​ಗಳನ್ನು ಮುಂದಿನ ದಿನದಲ್ಲಿ ಹಂಚಿಕೊಳ್ಳುವುದಾಗಿ ಅರ್ಜುನ್ ಜನ್ಯ ಹೇಳಿದ್ದಾರೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಸಿನಿಮಾಕ್ಕೆ ‘45’ ಎಂದು ಹೆಸರಿಡಲಾಗಿದ್ದು, ಸಿನಿಮಾದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಅವರೇ ಸಂಗೀತ ನೀಡಿದ್ದಾರೆ. ಸಿನಿಮಾವನ್ನು ರಮೇಶ್ ರೆಡ್ಡಿ ಅವರು ಸೃಜಾ ಪ್ರೊಡಕ್ಷನ್ ಹೌಸ್​ನಿಂದ ನಿರ್ಮಾಣ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ಬಿಡುಗಡೆ ಆಗಲಿದ್ದು, ಆ ಸಿನಿಮಾದ ಬಿಡುಗಡೆ ಬಳಿಕ ಶಿವಣ್ಣನ ಹೊಸ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್