ರೈಲ್ವೆ ಮಾಸ್ಟರ್ ಲುಕ್​ನಲ್ಲಿ ಶಿವಣ್ಣ: ಯಾವ ಸಿನಿಮಾಕ್ಕಾಗಿ ಈ ವೇಷ?

Shiva Rajkumar: ರೈಲ್ವೆ ಮಾಸ್ಟರ್ ಸಮವಸ್ತ್ರ ತೊಟ್ಟಿರುವ ಶಿವರಾಜ್ ಕುಮಾರ್ ಫೊಟೊಗಳು ವೈರಲ್ ಆಗಿವೆ. ಇದು ಯಾವ ಸಿನಿಮಾದ ಲುಕ್ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ರೈಲ್ವೆ ಮಾಸ್ಟರ್ ಲುಕ್​ನಲ್ಲಿ ಶಿವಣ್ಣ: ಯಾವ ಸಿನಿಮಾಕ್ಕಾಗಿ ಈ ವೇಷ?
ಶಿವರಾಜ್ ಕುಮಾರ್
Follow us
ಮಂಜುನಾಥ ಸಿ.
|

Updated on: Jul 22, 2023 | 5:09 PM

ಶಿವರಾಜ್ ಕುಮಾರ್ (Shiva Rajkumar) ಅವರನ್ನು ಜಿಲ್ಲಾಧಿಕಾರಿಯಾಗಿಯಾಗಾದರೂ ತೋರಿಸಬಹುದು, ಬಡ ಕೂಲಿ ಕಾರ್ಮಿಕನಾಗಿ ಬೇಕಾದರೂ ತೋರಿಸಬಹುದು. ಯಾವುದೇ ರೀತಿಯ ಪಾತ್ರಕ್ಕಾದರೂ ಒಗ್ಗುವ ಮುಖಭಾವ, ಮೈಕಟ್ಟು ಅವರದ್ದು’ ಎಂದು ಹಿಂದೊಮ್ಮೆ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದರು. ಶಿವರಾಜ್ ಕುಮಾರ್ ಅವರ ಸಿನಿಮಾ ಪಯಣ ನೋಡಿದವರಿಗೆ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ, ‘ದೊರೆ’ ಸಿನಿಮಾದಲ್ಲಿ ಜೀತದಾಳು, ‘ಜೋಗಿ’ ಸಿನಿಮಾದ ಅಮಾಯಕ, ಓಂ ಸಿನಿಮಾದ ರೌಡಿ, ‘ಚಿಗುರಿದ ಕನಸು’ ಸಿನಿಮಾದ ವಿದ್ಯಾವಂತ ಬುದ್ಧಿಜೀವಿ ಹೀಗೆ ಎಲ್ಲ ಪಾತ್ರಗಳಿಗೂ ಪಾತ್ರವೇ ತಾವಾದಂತೆ ಒಗ್ಗಿಗೊಳ್ಳುತ್ತಾರೆ ಶಿವಣ್ಣ. ಇದೀಗ ಶಿವಣ್ಣ ರೈಲ್ವೆ ಮಾಸ್ಟರ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಲುಕ್ ಯಾವ ಸಿನಿಮಾಕ್ಕಾಗಿ ಎಂಬುದು ಅಭಿಮಾನಿಗಳ (Fan) ಕುತೂಹಲ ಕೆರಳಿಸಿದೆ.

ರೈಲ್ವೆ ಸ್ಟೇಷನ್​ನಲ್ಲಿ ರೈಲ್ವೆ ಮಾಸ್ಟರ್ ಸಮವಸ್ತ್ರ ಧರಿಸಿ ಕುರ್ಚಿಯ ಮೇಲೆ ಕುಳಿತು ಇಂಗ್ಲೀಷ್ ಪೇಪರ್ ಓದುತ್ತಿರುವ ಶಿವಣ್ಣನ ಫೊಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ಜೊತೆಗೆ ಪೈಲೆಟ್ ಸಮವಸ್ತ್ರ ಧರಿಸಿರುವ ಶಿವಣ್ಣನ ಚಿತ್ರಗಳೂ ಸಹ ವೈರಲ್ ಆಗಿವೆ. ಇದು ತಮಿಳಿನ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಲುಕ್ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಭಿಮಾನಿಗಳು ಕ್ಯಾಪ್ಟನ್ ಮಿಲ್ಲರ್ ಹ್ಯಾಷ್​ಟ್ಯಾಗ್ ಬಳಸಿ ವೈರಲ್ ಮಾಡುತ್ತಿದ್ದಾರೆ. ಯಾವುದೇ ಸಿನಿಮಾದ ಲುಕ್ ಆಗಿರಲಿ ಆದರೆ ಶಿವಣ್ಣ ಮಾಮೂಲಿಗಿಂತ ಭಿನ್ನವಾಗಿ ಕಾಣುತ್ತಿದ್ದಾರೆಂಬುದಂತೂ ಸತ್ಯ.

ಈಗಾಗಲೇ ರಜನೀಕಾಂತ್ ಜೊತೆಗೆ ‘ಜೈಲರ್’ ಹೆಸರಿನ ತಮಿಳು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರೆ. ಆ ಸಿನಿಮಾದಲ್ಲಿ ಅವರದ್ದು ಹಳ್ಳಿಯ ಖಡಕ್ ನಾಯಕನ ಪಾತ್ರ ಎಂಬುದು ಟೀಸರ್​ನಿಂದ ಗೊತ್ತಾಗಿದೆ. ‘ಜೈಲರ್’ ಜೊತೆಗೆ ರಜನೀಕಾಂತ್ ಅಳಿಯ ಧನುಶ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿಯೂ ಶಿವರಾಜ್ ಕುಮಾರ್ ನಟಿಸಿದ್ದು ಆ ಸಿನಿಮಾದಲ್ಲಿನ ಶಿವಣ್ಣನ ಲುಕ್ ಹೊರಗೆ ಬಂದಿರಲಿಲ್ಲ. ಆದರೆ ಈಗ ವೈರಲ್ ಆಗಿರುವ ಫೊಟೊಗಳು ಅದೇ ಸಿನಿಮಾದ್ದು ಎನ್ನಲಾಗುತ್ತಿದೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಘೋಷಣೆಯಾದ ಸಿನಿಮಾಗಳ ಪಟ್ಟಿ ಇಲ್ಲಿದೆ

ಶಿವರಾಜ್ ಕುಮಾರ್ ಈಗ ಬಹಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಸಿನಿಮಾಗಳು ಮಾತ್ರವೇ ಅಲ್ಲದೆ ಆಗಾಗ್ಗೆ ನೆರೆ ಚಿತ್ರರಂಗದ ಗೆಳೆಯರ ಆಹ್ವಾನದ ಮೇರೆಗೆ ಪರಭಾಷೆಯ ಸಿನಿಮಾಗಳಲ್ಲಿಯೂ ಹೋಗಿ ನಟಿಸಿ ಬರುತ್ತಿದ್ದಾರೆ. ‘ಜೈಲರ್’, ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾಗಳ ಬಳಿಕ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಅವರೊಟ್ಟಿಗೆ ಇನ್ನೊಂದು ಸಿನಿಮಾದಲ್ಲಿ ಶಿವಣ್ಣ ನಟಿಸುವ ಸಾಧ್ಯತೆ ಇದೆ. ಈ ಬಗ್ಗೆ ಕೆಲ ತಿಂಗಳ ಹಿಂದೆ ಸ್ವತಃ ಬಾಲಕೃಷ್ಣ ಅವರೇ ಹೇಳಿಕೊಂಡಿದ್ದಾರೆ.

ಕನ್ನಡದಲ್ಲಿಯಂತೂ ಶಿವರಾಜ್ ಕುಮಾರ್ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರೇ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದಂದು ಹೇಳಿದಂತೆ ಸುಮಾರು 10-12 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರಂತೆ. ಯಾವ ತಂಡ ಮೊದಲು ಚಿತ್ರೀಕರಣಕ್ಕೆ ರೆಡಿಯಾಗುತ್ತದೆಯೋ ಅವರೊಟ್ಟಿಗೆ ಸಿನಿಮಾ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಪ್ರಸ್ತುತ ‘ಘೋಸ್ಟ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ. ‘ನೀ ಸಿಗೊವರೆಗೆ’ ಸಿನಿಮಾದಲ್ಲಿ ನಟಿಸಿದ್ದಾಗಿದೆ. ಹರ್ಷ ನಿರ್ದೇಶನದ ಹೊಸ ಸಿನಿಮಾ ಸಹ ಕೆಲವೇ ತಿಂಗಳಲ್ಲಿ ಸೆಟ್ಟೇರಲಿದೆ. ದಿನಕರ್ ತೂಗುದೀಪ್ ನಿರ್ದೇಶನದ ಒಂದು ಸಿನಿಮಾದಲ್ಲಿಯೂ ಶಿವಣ್ಣ ನಟಿಸಬೇಕಿದೆ. ಒಟ್ಟಾರೆ ಶಿವಣ್ಣನ ಮುಂದಿನ ಸಿನಿಮಾಗಳ ಪಟ್ಟಿ ಉದ್ದವೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ