ಹೀರೋ ಆಗಿ ಎಂಟ್ರಿ ಕೊಟ್ಟ ವಿಲನ್ ಪುತ್ರ, ಆರ್ಮುಗಂ ಸಾಹಸಕ್ಕೆ ಶಿವಣ್ಣನ ಬೆಂಬಲ

ಹೀರೋಗಳ ಮಕ್ಕಳು ಹೀರೋಗಳಾದ ಹಲಾವರು ಉದಾಹರಣೆಗಳಿವೆ. ವಿಲನ್​ ಮಕ್ಕಳು ಸಹ ಬಹುತೇಕ ಹೀರೋಗಳೇ ಆಗುವುದು. ದರ್ಶನ್, ವಿನೋದ್ ಪ್ರಭಾಕರ್ ಇನ್ನೂ ಕೆಲವು ಉದಾಹರಣೆ ಕನ್ನಡದಲ್ಲಿವೆ. ಇದೇ ಸಾಲಿಗೆ ಈಗ ಮತ್ತೊಬ್ಬ ನಟ ಸೇರಿಕೊಳ್ಳಲಿದ್ದಾನೆ.

ಹೀರೋ ಆಗಿ ಎಂಟ್ರಿ ಕೊಟ್ಟ ವಿಲನ್ ಪುತ್ರ, ಆರ್ಮುಗಂ ಸಾಹಸಕ್ಕೆ ಶಿವಣ್ಣನ ಬೆಂಬಲ
Follow us
ಮಂಜುನಾಥ ಸಿ.
|

Updated on: Sep 08, 2024 | 7:09 AM

ಹೀರೋಗಳ ಮಕ್ಕಳು ಹೀರೋಗಳೇ ಆಗುತ್ತಾರೆ. ಆದರೆ ವಿಲನ್ ಮಕ್ಕಳು ಮಕ್ಕಳು ವಿಲನ್ ಆಗಬೇಕೆಂಬ ನಿಯಮವಿಲ್ಲ. ಈಗಾಗಲೇ ಕೆಲವು ಪ್ರಮುಖ ವಿಲನ್​ಗಳ ಮಕ್ಕಳು ನಾಯಕ ನಟರಾಗಿದ್ದಾರೆ. ನಾಯಕ ನಟರಾಗಿ ಸಖತ್ ಮಿಂಚಿದ್ದಾರೆ. ನಟ ದರ್ಶನ್, ವಿನೋದ್ ಪ್ರಭಾಕರ್, ಇನ್ನೂ ಕೆಲವು ಉದಾಹರಣೆಗಳನ್ನು ಕನ್ನಡ ಚಿತ್ರರಂಗದಲ್ಲಿ ಹೆಸರಿಸಬಹುದು. ಇದೀಗ ಮತ್ತೊಬ್ಬ ಪಕ್ಕಾ ವಿಲನ್ ಪುತ್ರ ನಾಯಕ ನಟನಾಗಿ ಎಂಟ್ರಿ ನೀಡುತ್ತಿದ್ದಾರೆ. ಈ ಚಿತ್ರಕ್ಕೆ ಅವರ ತಂದೆಯೇ ನಿರ್ದೇಶನ ಮಾಡಲಿದ್ದಾರೆ.

‘ಆರ್ಮುಗಂ’ ಪಾತ್ರದಿಂದ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಬಹಳ ಹತ್ತಿರವಾದ ಆ ಬಳಿಕ ಕನ್ನಡ ಸಿನಿಮಾಗಳ ಖಾಯಂ ವಿಲನ್ ಆಗಿ ಉಳಿದ ರವಿಶಂಕರ್ ಪುತ್ರ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ರವಿಶಂಕರ್ ಪುತ್ರ ಅದ್ವೈ ನಟನೆಯ ಮೊದಲ ಸಿನಿಮಾ ಚಿತ್ರೀಕರಣ ಚಾಲ್ತಿಯಲ್ಲಿದ್ದು, ವಿಶೇಷವೆಂದರೆ ಮಗನ ಮೊದಲ ಸಿನಿಮಾಕ್ಕೆ ಅಪ್ಪನೇ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಅದ್ವೈ ನಟನೆಯ ಮೊದಲ ಸಿನಿಮಾದ ಪೋಸ್ಟರ್​ ಗಣೇಶ ಹಬ್ಬಕ್ಕೆ ಬಿಡುಗಡೆ ಆಗಿದೆ.

ಇದನ್ನೂ ಓದಿ:ಪ್ರೀ-ಲುಕ್ ಮೂಲಕ ಗಮನ ಸೆಳೆದ ‘ಸುಬ್ರಹ್ಮಣ್ಯ’: ರವಿಶಂಕರ್​ ಪುತ್ರನ ಪ್ಯಾನ್​ ಇಂಡಿಯಾ ಸಿನಿಮಾ

‘ಸುಬ್ರಹ್ಮಣ್ಯ’ ಹೆಸರಿನ ಸಿನಿಮಾದಲ್ಲಿ ಅದ್ವೈ ನಟಿಸುತ್ತಿದ್ದು, ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಸಿನಿಮಾದ ಪೋಸ್ಟರ್ ಅನ್ನು ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರುಗಳು ನಿನ್ನೆಯಷ್ಟೆ ಬಿಡುಗಡೆ ಮಾಡಿದರು. ಪೋಸ್ಟರ್, ಫಸ್ಟ್ ಲುಕ್ ನೋಡಿದರೆ ಇದೊಂದು ಸಾಹಸಮಯ ಕತೆ ಹೊಂದಿರುವ ಸಿನಿಮಾ ಎಂಬುದು ಖಾತ್ರಿಯಾಗುತ್ತಿದೆ. ಅರಣ್ಯ, ನಿಗೂಢ ಪ್ರವೇಶ ದ್ವಾರ ಇನ್ನೂ ಕೆಲವು ಫ್ಯಾಂಟಸಿ ಎಲಿಮೆಂಟ್​ಗಳು ಕಣ್ಣಿಗೆ ಕಾಣುತ್ತವೆ. ಅಂದಹಾಗೆ ಸಿನಿಮಾದ 60% ಚಿತ್ರೀಕರಣ ಪೂರ್ತಿಯಾಗಿದೆ, ಇನ್ನುಳಿದ ಚಿತ್ರೀಕರಣ ಆದಷ್ಟು ಬೇಗ ಮುಗಿಸಿ ಸಿನಿಮಾ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ ರವಿಶಂಕರ್.

ರವಿಶಂಕರ್​ಗೆ ಸಿನಿಮಾ ನಿರ್ದೇಶನ ಹೊಸದೇನೂ ಅಲ್ಲ. ಈ ಹಿಂದೆ ಮಾಲಾಶ್ರೀ ನಟಿಸಿರುವ ಸೂಪರ್ ಹಿಟ್ ಸಿನಿಮಾ ‘ದುರ್ಗಿ’ ನಿರ್ದೇಶನ ಮಾಡಿದ್ದರು. ಈಗ ಮತ್ತೊಮ್ಮೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಗಟ್ಟಿ ತಾಂತ್ರಿಕ ತಂಡವನ್ನೇ ರವಿಶಂಕರ್ ಸಿನಿಮಾಕ್ಕೆ ಆಯ್ದುಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ, ವಿಘ್ನೇಷ್ ರಾಜ್ ಕ್ಯಾಮೆರಾ, ಎಡಿಟಿಂಗ್​ಗೆ ವಿಜಯ್ ಕುಮಾರ್ ಇನ್ನೂ ಕೆಲವು ಉತ್ತಮ ತಂತ್ರಜ್ಞರು ಈ ಸಿನಿಮಾಕ್ಕೆ ಒಂದಾಗುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ