AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ರೌಂಡಪ್: ಅನಾರೋಗ್ಯ, ಜಾಮೀನು, ರೇಣುಕಾ ಸ್ವಾಮಿ ಕಣ್ಣು

Darshan Thoogudeepa: ನಟ ದರ್ಶನ್ ತೂಗುದೀಪ ಹಾಗೂ ಇತರ ಆರೋಪಿಗಳನ್ನು ನಾಳೆ (ಸೆಪ್ಟೆಂಬರ್ 08) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ದರ್ಶನ್ ನಾಳೆ ಜಾಮೀನಿಗೆ ಅರ್ಜಿ ಸಹ ಸಲ್ಲಿಸಲಿದ್ದಾರೆ. ರೇಣುಕಾ ಸ್ವಾಮಿ ಪ್ರಕರಣದ ಇನ್ನಿತರೆ ಅಪ್​ಡೇಟ್​ಗಳು ಇಲ್ಲಿವೆ...

ದರ್ಶನ್ ರೌಂಡಪ್: ಅನಾರೋಗ್ಯ, ಜಾಮೀನು, ರೇಣುಕಾ ಸ್ವಾಮಿ ಕಣ್ಣು
ಮಂಜುನಾಥ ಸಿ.
|

Updated on: Sep 08, 2024 | 8:36 AM

Share

ರೇಣುಕಾ ಸ್ವಾಮಿ ಕೊಲೆ ನಡೆದು ನಾಳೆ (ಸೆಪ್ಟೆಂಬರ್ 09)ಗೆ ಮೂರು ತಿಂಗಳಾಗುತ್ತದೆ. ದರ್ಶನ್ ಬಂಧನವಾಗಿ ಮೂರು ತಿಂಗಳಾಗುತ್ತಾ ಬಂದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಈಗ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿದ್ದು, ಇಲ್ಲಿನ ಜೈಲಧಿಕಾರಿಗಳು ಶಿಸ್ತಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ದರ್ಶನ್​ಗೆ ಯಾವುದೇ ಹೆಚ್ಚುವರಿ ಸವಲತ್ತುಗಳನ್ನು ನೀಡಲಾಗುತ್ತಿಲ್ಲ. ಪ್ರಕರಣದಲ್ಲಿ ಆರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದು, ಕೆಲವು ಆಘಾತಕಾರಿ ಅಂಶಗಳು ಅದರಿಂದ ಬಯಲಾಗಿವೆ. ಇದೀಗ ಕೆಲ ಹೊಸ ವಿಷಯಗಳು ಸಹ ಹೊರಬಂದಿವೆ.

ವಿಟಮಿನ್ ಮಾತ್ರೆಗಳು

ನಟ ದರ್ಶನ್​ ‘ಡೆವಿಲ್’ ಸಿನಿಮಾಕ್ಕಾಗಿ ಫಿಟ್​ನೆಸ್ ಮೇಂಟೇನ್ ಮಾಡುತ್ತಿದ್ದರು. ಆದರೆ ಅಷ್ಟರಲ್ಲೇ ಬಂಧನಕ್ಕೆ ಒಳಗಾದರು. ಈಗ ಜೈಲಿನಲ್ಲಿ ದರ್ಶನ್​ಗೆ ಬೇಕಾದಷ್ಟು ಪೌಷ್ಟಿಕಾಂಶ ಯುಕ್ತ ಆಹಾರ ದೊರಕುತ್ತಿಲ್ಲವಾದ್ದರಿಂದ ದರ್ಶನ್ ವಿಟಮಿನ್ ಮಾತ್ರೆಗಳ ಮೊರೆ ಹೋಗಿದ್ದಾರೆ. ಜೊತೆಗೆ ಶಕ್ತಿಗಾಗಿ ಒಣಹಣ್ಣುಗಳ ಸೇವನೆ ಮಾಡುತ್ತಿದ್ದಾರೆ. ದೇಹತೂಕದಲ್ಲಿ ಈಗಾಗಲೇ ಇಳಿಕೆ ಕಂಡಿದ್ದು, ಇನ್ನಷ್ಟು ಇಳಿಕೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಜಾಮೀನಿಗೆ ಅರ್ಜಿ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮುಗಿಸಿದ್ದಾರೆ. ಪ್ರಾಥಮಿಕ ಚಾರ್ಜ್​ಶೀಟ್ ಅನ್ನು ಸಲ್ಲಿಸಿದ್ದಾರೆ. ಆರೋಪ ಪಟ್ಟಿ ಸಲ್ಲಿಕೆ ಆದ ಬೆನ್ನಲ್ಲೆ ಪ್ರಕರಣದ ಆರೋಪಿಗಳು ಜಾಮೀನು ಸಲ್ಲಿಸಲು ರೆಡಿಯಾಗಿದ್ದಾರೆ. ಈಗಾಗಲೇ ಪವಿತ್ರಾ ಇನ್ನಿತರರು ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ವಜಾ ಆಗಿತ್ತು. ಈಗ ದರ್ಶನ್ ಸೇರಿದಂತೆ ಇನ್ನೂ ಕೆಲವು ಆರೋಪಿಗಳು ಜಾಮೀನು ಸಲ್ಲಿಸಲು ಸಿದ್ಧರಾಗಿದ್ದಾರೆ. ದರ್ಶನ್ ನಾಳೆ (ಸೆಪ್ಟೆಂಬರ್ 09) ಜಾಮೀನು ಅರ್ಜಿ ಸಲ್ಲಿಸಲು ಸಾಧ್ಯತೆ ಇದೆ. ನಾಳೆಗೆ ಆರೋಪಿಗಳ ನ್ಯಾಯಾಂಗ ಬಂಧನ ಮುಕ್ತಾಯವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.

ದರ್ಶನ್​ ನಾಳೆ ಜಾಮೀನು ಅರ್ಜಿ ಸಲ್ಲಿಸಿದರೂ ಸಹ ಜಾಮೀನು ಸಿಗುವುದು ಬಹಳ ಕಷ್ಟ ಎನ್ನಲಾಗುತ್ತದೆ. ನಾಳೆ ಆರೋಪ ಪಟ್ಟಿಯನ್ನು ಆರೋಪಿ ಪರ ವಕೀಲರಿಗೆ ನೀಡಲಾಗುತ್ತದೆ. ಅದಾದ ಒಂದು ವಾರದ ಬಳಿಕ ವಿಚಾರಣೆಗಳು ಆರಂಭವಾಗುವ ಸಾಧ್ಯತೆ ಇದೆ. ಆದರೆ ದರ್ಶನ್, ಪ್ರಭಾವಿ ವ್ಯಕ್ತಿ ಆಗಿದ್ದು, ಜೈಲಿನಲ್ಲಿದ್ದಾಗಲೂ ಪ್ರಭಾವವನ್ನು ಬಳಸಿರುವುದಕ್ಕೆ ಸಾಕ್ಷ್ಯ ಸಿಕ್ಕರುವ ಕಾರಣ ದರ್ಶನ್​ಗೆ ಜಾಮೀನು ಸಿಗುವುದು ಸುಲಭವಾಗಿರದು ಎನ್ನಲಾಗುತ್ತಿದೆ.

ರೇಣುಕಾ ಸ್ವಾಮಿ ಕಣ್ಣು

ಜೂನ್ 9 ರಂದು ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ಮೇಲೆ ಭೀಕರ ಹಲ್ಲೆ ನಡೆದಿತ್ತು. ಆ ದಿನ ತೀರಾ ಮೃಗೀಯವಾಗಿ ವರ್ತಿಸಿದ್ದ ನಟ ದರ್ಶನ್, ರೇಣುಕಾ ಸ್ವಾಮಿ ಕಣ್ಣೀಗೆ ತೀವ್ರ ಹಾನಿ ಮಾಡಿದ್ದ. ರೇಣುಕಾ ಸ್ವಾಮಿಯ ಎಡಗಣ್ಣಿಗೆ ದರ್ಶನ್ ಸಿನಿಮಾ ರೀತಿ ಪಂಚ್ ಮಾಡಿದ್ದರು. ಎ4 ಆರೋಪಿ ರಾಘವೇಂದ್ರ ಹಾಗೂ ಎ5 ಆರೋಪಿ ನಂದೀಶ್ ಅವರುಗಳು ರೇಣುಕಾ ಸ್ವಾಮಿಯ ಕೈ ಹಿಡಿದುಕೊಂಡು ಹೊಡೀರಿ ಬಾಸ್ ಹೊಡೀರಿ ಬಾಸ್ ಎಂದು ಉತ್ಸಾಹ ತುಂಬಿದರು. ಮದ್ಯದ ನಶೆಯಲ್ಲಿದ್ದ ದರ್ಶನ್ ರೇಣುಕಾ ಸ್ವಾಮಿಯ ಮುಖಕ್ಕೆ ಗುದ್ದಿದ, ಏಟು ತಪ್ಪಿಸಿಕೊಳ್ಳಲು ಯತ್ನಿಸಿದ ರೇಣುಕಾ ಸ್ವಾಮಿ ತಲೆ ಕದಲಿಸಿದಾಗ ದರ್ಶನ್ ಏಟು ರೇಣುಕಾ ಸ್ವಾಮಿ ಕಣ್ಣಿಗೆ ಬಿದ್ದಿದೆ. ಇದರಿಂದ ರೇಣುಕಾ ಸ್ವಾಮಿ ಕಣ್ಣಿಗೆ ತೀವ್ರ ಹಾನಿ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ