ಎರಡು ತಿಂಗಳ ಬಳಿಕ ನಟನೆಗೆ ಮರಳಿದ ಶಿವಣ್ಣ; ವಿಗ್ ಹಾಕಿ ಶೂಟ್

|

Updated on: Mar 04, 2025 | 7:05 AM

ಶಿವರಾಜ್ ಕುಮಾರ್ ಅವರು ಕ್ಯಾನ್ಸರ್​ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮಿಯಾಮಿಯಲ್ಲಿ ಚಿಕಿತ್ಸೆ ಪಡೆದ ನಂತರ, ಅವರು ಹೊಸ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಇದು ರಾಮ್ ಚರಣ್ ನಟನೆಯ "ಆರ್‌ಸಿ 16" ಎಂದು ಹೇಳಲಾಗುತ್ತಿದೆ. ವಿಗ್ ಧರಿಸಿ ಶೂಟಿಂಗ್ ಮಾಡುತ್ತಿರುವ ಶಿವಣ್ಣ ಅವರ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಎರಡು ತಿಂಗಳ ಬಳಿಕ ನಟನೆಗೆ ಮರಳಿದ ಶಿವಣ್ಣ; ವಿಗ್ ಹಾಕಿ ಶೂಟ್
ಶಿವಣ್ಣ
Follow us on

ನಟ ಶಿವರಾಜ್​ಕುಮಾರ್ ಅವರು ಕ್ಯಾನ್ಸರ್ ಕಾರಣಕ್ಕೆ ದೊಡ್ಡ ಬ್ರೇಕ್ ಪಡೆದಿದ್ದರು. ಅವರು ಯಾವುದೇ ಸಿನಿಮಾ ಶೂಟ್​ನಲ್ಲೂ ಭಾಗಿ ಆಗಿರಲಿಲ್ಲ. ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದು ಬಂದರು. ಈಗ ಶಿವರಾಜ್​ಕುಮಾರ್ ಸಂಪೂರ್ಣ ಕ್ಯಾನ್ಸರ್ ಮುಕ್ತರಾಗಿದ್ದಾರೆ ಎಂಬುದು ಎಲ್ಲರಿಗೂ ಖುಷಿ ಕೊಟ್ಟ ಸುದ್ದಿ. ಈಗ ಅವರ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಶಿವಣ್ಣ ಸೈಲೆಂಟ್ ಆಗಿ ಚಿತ್ರೀಕರಣ ಆರಂಭಿಸಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಶಿವರಾಜ್​ಕುಮಾರ್ ಅವರು ಕಿಮೋ ಥೆರೆಪಿ ಕಾರಣದಿಂದ ಕೂದಲು ತೆಗೆಸಿಕೊಳ್ಳಬೇಕಿತ್ತು. ಇದೇ ಸಂದರ್ಭದಲ್ಲಿ ಅವರು ತಿರುಪತಿಗೆ ತೆರಳಿದ್ದರಿಂದ ಅಲ್ಲಿ ಅವರು ಮುಡಿಕೊಟ್ಟರು. ಆ ಬಳಿಕ ಅವರ ತಲೆಯಲ್ಲಿ ನಿಧಾನವಾಗಿ ಕೂದಲು ಬೆಳೆಯುತ್ತಿದೆ. ಆದರೆ, ಈಗಿರುವ ಕೂದಲು ಇಟ್ಟುಕೊಂಡು ಶೂಟಿಂಗ್ ಮಾಡೋಕೆ ಸಾಧ್ಯವಿಲ್ಲ. ಹೀಗಾಗಿ, ವಿಗ್ ಹಾಕಿ ಕಾಣಿಸಿಕೊಂಡಿದ್ದಾರೆ.

ಶಿವರಾಜ್​ಕುಮಾರ್ ಲುಕ್ ಗಮನ ಸೆಳೆದಿದೆ. ಅವರು ಗಡ್ಡ ಮೀಸೆಯನ್ನು ತೆಗೆದಿದ್ದು, ಸಂಪೂರ್ಣವಾಗಿ ಭಿನ್ನವಾಗಿ ಗಮನ ಸೆಳೆದಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರಿಂದ ಫ್ಯಾನ್ಸ್ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ
ಪುನೀತ್ ರಾಜ್​ಕುಮಾರ್​ ಅಭಿಮಾನಿಗಳ ಪರವಾಗಿ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ
‘ಕಣ್ಣಪ್ಪ’ ಎಂದೊಡನೆ ನನಗೆ ರಾಜ್​ಕುಮಾರ್ ನೆನಪಾಗ್ತಾರೆ: ಟಾಲಿವುಡ್ ಹಿರಿಯ ನಟ
ಪುನೀತ್ ಬರ್ತ್​ಡೇಗೆ ಬಿಗ್ ಸರ್​ಪ್ರೈಸ್; ಹಿಟ್ ಚಿತ್ರ ರೀ-ರಿಲೀಸ್
ದ್ವಾರಕೀಶ್ ವಿಧಿವಶ ಬಗ್ಗೆ ಶಿವಮೊಗ್ಗದಿಂದಲೇ ಶಿವರಾಜ್​​ಕುಮಾರ್ ಭಾವುಕ ಮಾತು

ಶಿವರಾಜ್​ಕುಮಾರ್ ಅವರು ಶೂಟ್ ಮಾಡ್ತಿರೋದು ಯಾವ ಸಿನಿಮಾ? ಈ ಪ್ರಶ್ನೆಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ, ಕೆಲವು ವರದಿಗಳ ಪ್ರಕಾರ ಅವರು ಆರಂಭಿಸಿರೋದು ರಾಮ್ ಚರಣ್ ನಟನೆಯ, ಬುಚ್ಚಿ ಬಾಬು ನಿರ್ದೇಶನದ ‘ಆರ್​ಸಿ 16’ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಮ್ ಚರಣ್ ಚಿತ್ರದ ಶೂಟಿಂಗ್​ನಲ್ಲಿ ಭಾಗಿ ಆಗೋದಾಗಿ ಈ ಮೊದಲು ಶಿವಣ್ಣ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಇತ್ತೀಚೆಗೆ ಅವರು ಶೂಟಿಂಗ್​​ನಲ್ಲಿ ಭಾಗಿ ಆಗಲಿದ್ದಾರೆ ಎಂದು ತೆಲುಗು ಚಿತ್ರರಂಗದಿಂದ ವರದಿಗಳು ಕೂಡ ಆಗಿದ್ದವು. ಹೀಗಾಗಿ, ಅವರು ಇದೇ ಸಿನಿಮಾದ ಶೂಟ್​ನಲ್ಲಿ ಭಾಗಿ ಆಗುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರಾಮ್ ಚರಣ್ ಮನೆಯಲ್ಲಿ ಇದೆ ಬರೋಬ್ಬರಿ 15 ಕುದುರೆ; ಕಾರಣ ಏನು?

ಶಿವಣ್ಣನಿಗೆ ಈ ಮೊದಲು ಮೂತ್ರಕೋಶದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಇದಕ್ಕಾಗಿ ಅವರು ಮಿಯಾಮಿಗೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಈಗ ಅವರು ಕ್ಯಾನ್ಸರ್ ಮುಕ್ತರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.