
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ‘45’ ಚಿತ್ರ (45 Movie) ಕೂಡ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಉಪೇಂದ್ರ, ಶಿವರಾಜ್ಕುಮಾರ್, ರಾಜ್ ಬಿ. ಶೆಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅರ್ಜುನ್ ಜನ್ಯ (Arjun Janya) ಅವರ ಮೊದಲ ನಿರ್ದೇಶನದ ಸಿನಿಮಾ ಎಂಬುದು ವಿಶೇಷ. ದೊಡ್ಡ ಬಜೆಟ್ನಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 25ರಂದು ಕ್ರಿಸ್ಮಸ್ ಪ್ರಯುಕ್ತ ಬಿಡುಗಡೆ ಆಗಲಿರುವ ಈ ಚಿತ್ರದ ಬಜೆಟ್ ಬರೋಬ್ಬರಿ 100 ಕೋಟಿ ರೂಪಾಯಿ ಎನ್ನಲಾಗಿದೆ.
ತುಂಬಾ ಅದ್ದೂರಿಯಾಗಿ ‘45’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಆಫ್ರೋ ಟಪ್ಪಾಂಗ್ ಹಾಡು ಎಲ್ಲರಿಗೂ ಇಷ್ಟ ಆಗಿದೆ. ರಾಜ್ ಬಿ. ಶೆಟ್ಟಿ, ಶಿವರಾಜ್ಕುಮಾರ್ ಮತ್ತು ಉಪೇಂದ್ರ ಅವರ ಕಾಂಬಿನೇಷನ್ ಆದ್ದರಿಂದ ಹೈಪ್ ಜೋರಾಗಿದೆ. ಚಿತ್ರದ ಕಥೆಯ ಮೇಲೆ ‘45’ ತಂಡಕ್ಕೆ ಸಖತ್ ಭರವಸೆ ಇದೆ. ಅದಕ್ಕೆ ತಕ್ಕಂತೆಯೇ ಬಜೆಟ್ ಸುರಿಯಲಾಗಿದೆ.
‘ನಿರ್ಮಾಪಕ ರಮೇಶ್ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಯಾವುದೇ ರಾಜಿ ಇಲ್ಲದೇ ಸಿನಿಮಾ ಮಾಡಿದ್ದೇವೆ. ಹೆಚ್ಚು ಸಮಯ ನೀಡಿ ಸಿಜಿ ಕೆಲಸ ಮಾಡಲಾಗಿದೆ’ ಎಂದು ಅರ್ಜುನ್ ಜನ್ಯ ಅವರು ಹೇಳಿದ್ದಾರೆ. ಇಡೀ ಸಿನಿಮಾದಲ್ಲಿ ಶೇಕಡ 45 ಭಾಗ ಗ್ರಾಫಿಕ್ಸ್ ಇರಲಿದೆ. ಈ ಎಲ್ಲ ಕಾರಣಗಳಿಂದಾಗಿ ‘45’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇದೆ.
‘45’ ಸಿನಿಮಾಗೆ ಒಟ್ಟು ಎಷ್ಟು ಖರ್ಚಾಗಿದೆ ಎಂಬುದನ್ನು ಚಿತ್ರತಂಡದವರು ಅಧಿಕೃತವಾಗಿ ಹೇಳಿಲ್ಲ. ಆದರೆ ಅಂದಾಜು 100 ಕೋಟಿ ರೂಪಾಯಿ ಎನ್ನುತ್ತಿವೆ ಮೂಲಗಳು. ಈ ಮೊದಲು ಬಜೆಟ್ ಬಗ್ಗೆ ರಮೇಶ್ ರೆಡ್ಡಿ ಅವರಿಗೆ ಪ್ರಶ್ನೆ ಎದುರಾಗಿತ್ತು. ‘ಸಿನಿಮಾಗೆ ನಾವು ಎಷ್ಟು ಬಜೆಟ್ ಹಾಕಿದ್ದೇವೆ ಎಂಬುದನ್ನು ನೀವೇ ಸಿನಿಮಾ ನೋಡಿ ಹೇಳಬೇಕು. ಕಥೆಗೆ ಎಷ್ಟು ಬೇಕೋ ಅಷ್ಟು ಖರ್ಚಾಗಿದೆ. ಇದರಲ್ಲಿ ಯೂನಿವರ್ಸಲ್ ಸಬ್ಜೆಕ್ಟ್ ಇದೆ’ ಎಂದು ಈ ಮೊದಲು ನಡೆದ ಸುದ್ದಿಗೋಷ್ಟಿಯಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಅವರು ಹೇಳಿದ್ದರು.
ಇದನ್ನೂ ಓದಿ: ಹೂವಿನ ಬಾಣದಂತೆ: ನಿತ್ಯಶ್ರೀ ರೀತಿಯೇ ವೇದಿಕೆಯಲ್ಲಿ ಹಾಡಿದ ಅರ್ಜುನ್ ಜನ್ಯ
ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡುವುದರ ಜೊತೆಗೆ ಸಂಗೀತ ಸಂಯೋಜಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ. ಉಪೇಂದ್ರ ಮತ್ತು ಶಿವಣ್ಣ ಅವರದ್ದು ಹಿಟ್ ಕಾಂಬಿನೇಷನ್. ಅವರ ಜೊತೆಗೆ ‘45’ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಕೂಡ ಸೇರ್ಪಡೆ ಆಗಿದ್ದರಿಂದ ಅಭಿಮಾನಿಗಳು ಈ ಸಿನಿಮಾವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.