ಅದ್ದೂರಿಯಾಗಿ ರಿಲೀಸ್ ಆಯ್ತು ‘ಭೈರತಿ ರಣಗಲ್’; ಫಸ್ಟ್ ಹಾಫ್​ನಲ್ಲಿ ಏನೆಲ್ಲ ಇದೆ?

| Updated By: ರಾಜೇಶ್ ದುಗ್ಗುಮನೆ

Updated on: Nov 15, 2024 | 11:18 AM

ಶಿವರಾಜ್​ಕುಮಾರ್​, ರುಕ್ಮಿಣಿ ವಸಂತ್, ಛಾಯಾ ಸಿಂಗ್ ಮುಂತಾದವರು ನಟಿಸಿರುವ ‘ಭೈರತಿ ರಣಗಲ್’ ಸಿನಿಮಾ ಇಂದು (ನ.15) ಅದ್ದೂರಿಯಾಗಿ ಬಿಡುಗಡೆ ಆಗಿದೆ. ನರ್ತನ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಗೀತಾ ಶಿವರಾಜ್​ಕುಮಾರ್​ ನಿರ್ಮಿಸಿದ್ದಾರೆ. ಈ ಚಿತ್ರದ ತೆರೆ ಹಿಂದೆ ಅತ್ಯುತ್ತಮ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಸಿನಿಮಾದ ಫಸ್ಟ್​ ಹಾಫ್ ರಿಪೋರ್ಟ್​ ಇಲ್ಲಿದೆ.​

ಅದ್ದೂರಿಯಾಗಿ ರಿಲೀಸ್ ಆಯ್ತು ‘ಭೈರತಿ ರಣಗಲ್’; ಫಸ್ಟ್ ಹಾಫ್​ನಲ್ಲಿ ಏನೆಲ್ಲ ಇದೆ?
ಶಿವರಾಜ್​ಕುಮಾರ್​
Follow us on

‘ಮಫ್ತಿ’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಅವರು ಭೈರತಿ ರಣಗಲ್ ಎಂಬ ಪಾತ್ರ ಮಾಡಿದ್ದರು. ಆ ಪಾತ್ರ ಎಷ್ಟು ಫೇಮಸ್ ಆಯ್ತು ಎಂದರೆ, ಆ ಪಾತ್ರದ ಹೆಸರಿನಲ್ಲೇ ಇನ್ನೊಂದು ಸಿನಿಮಾ ಮೂಡಿಬರುವಂತಾಯಿತು. ನರ್ತನ್​ ಅವರು ಆ್ಯಕ್ಷನ್​-ಕಟ್​ ಹೇಳಿರುವ ಈ ಸಿನಿಮಾದಲ್ಲಿ ಭೈರತಿ ರಣಗಲ್ ಪ್ರಪಂಚದ ಇನ್ನಷ್ಟು ಆಳ-ಅಗಲ ಕಾಣಿಸಿದೆ. ಶಿವರಾಜ್​ಕುಮಾರ್​ ಜೊತೆ ರಾಹುಲ್ ಭೋಸ್, ರುಕ್ಮಿಣಿ ವಸಂತ್, ಛಾಯಾ ಸಿಂಗ್, ಅವಿನಾಶ್, ಮಧು ಗುರುಸ್ವಾಮಿ, ದೇವರಾಜ್ ಮುಂತಾದ ಕಲಾವಿದರು ನಟಿಸಿದ್ದಾರೆ. ರವಿ ಬಸ್ರೂರು ಅವರು ಸಂಗೀತ ನೀಡಿದ್ದಾರೆ. ‘ಭೈರತಿ ರಣಗಲ್’ ಸಿನಿಮಾದ ಫಸ್ಟ್​ ಹಾಫ್​ ವಿಮರ್ಶೆ ಹೀಗಿದೆ..

  1. ರಮೇಶ್ ಅರವಿಂದ್ ಹಿನ್ನೆಲೆ ಧ್ವನಿಯಲ್ಲಿ ಆರಂಭ ಆಗುತ್ತದೆ ಭೈರತಿ ರಣಗಲ್ ಪಾತ್ರಪರಿಚಯ. ರಣಗಲ್‌ನ ಬಾಲ್ಯದ ಕಥೆಯಿಂದ ಸಿನಿಮಾ ಶುರು.
  2. ಮಾಸ್ ಸಿನಿಮಾ ಆದ್ರೂ ಯಾವುದೇ ಆ್ಯಕ್ಷನ್ ಇಲ್ಲದೇ ಎಂಟ್ರಿ ನೀಡುತ್ತದೆ ಶಿವರಾಜ್‌ಕುಮಾರ್ ಪಾತ್ರ. ಲಾಂಗು, ಮಚ್ಚು ಬದಲು ಪುಸ್ತಕ ಹಿಡಿದು ಕಾಣಿಸಿಕೊಳ್ಳುವ ಶಿವಣ್ಣ.
  3. ಲಾಯರ್ ಗೆಟಪ್‌ನಲ್ಲಿ ಶಿವರಾಜ್‌ಕುಮಾರ್. ವಕೀಲನಾಗಿದ್ದ ಭೈರತಿ ರಣಗಲ್ ನಂತರ ಕಾನೂನು ಕೃಗೆತ್ತಿಕೊಳ್ಳುವ ವ್ಯಕ್ತಿ ಆಗಿದ್ದು ಹೇಗೆ ಎಂಬುದು ಫಸ್ಟ್‌ಹಾಫ್‌ನಲ್ಲಿದೆ.
  4. ರಿಯಲ್ ಆ್ಯಕ್ಷನ್ ಆರಂಭ ಆಗೋದು ಇಂಟರ್‌ವಲ್‌ಗಿಂತ ಸ್ವಲ್ಪ ಮುನ್ನ. ಶಿವರಾಜ್‌ಕುಮಾರ್ ಲಾಂಗ್ ಹಿಡಿದ ಬಳಿಕ ಫಸ್ಟ್‌ಹಾಫ್‌ಗೆ ಸಿಗುತ್ತೆ ಹೊಸ ಹುರುಪು.
  5. ಕ್ರೂರ ವಿಲನ್ ಪಾತ್ರ ಮಾಡಿರುವ ಅವಿನಾಶ್, ರಾಹುಲ್ ಬೋಸ್. ಅವಿನಾಶ್ ಗೆಟಪ್ ಡಿಫರೆಂಟ್ ಆಗಿದೆ. ಗೋಪಾಲಕೃಷ್ಣ ದೇಶಪಾಂಡೆ ಹೈಲೈಟ್ ಆಗಿದ್ದಾರೆ.
  6. ಫಸ್ಟ್ ಹಾಫ್‌ನ ಕೆಲವೇ ದೃಶ್ಯಗಳಲ್ಲಿ ಛಾಯಾ ಸಿಂಗ್ ಕಾಣಿಸಿಕೊಂಡಿದ್ದಾರೆ. ಹೀರೋಯಿನ್ ರುಕ್ಮಿಣಿ ವಸಂತ್ ಪಾತ್ರಕ್ಕೂ ಮೊದಲಾರ್ಧದಲ್ಲಿ ಸ್ಕ್ರೀನ್ ಕಡಿಮೆ.
  7. ಇಡೀ ಫಸ್ಟ್‌ಹಾಫ್‌ನಲ್ಲಿ ಇರುವುದು ಒಂದೇ ಫೈಟಿಂಗ್ ಸೀನ್. ಅತಿಯಾಗಿ ಆ್ಯಕ್ಷನ್ ಬಯಸುವ ಪ್ರೇಕ್ಷಕರಿಗೆ ಇದು ಕೊರತೆ ಎನಿಸಬಹುದು.
  8. ‘ಮಫ್ತಿ’ ಪ್ರೀಕ್ವೆಲ್ ಆಗಿ ‘ಭೈರತಿ ರಣಗಲ್’ ಸಿನಿಮಾ ಮೂಡಿಬಂದಿದೆ. ‘ಭೈರತಿ ರಣಗಲ್’ ಚಿತ್ರದಲ್ಲಿ ಮಫ್ತಿ ಫ್ಲೇವರ್ ಶುರುವಾಗೋದು ಫಸ್ಟ್ ಹಾಫ್ ಕೊನೆಯಲ್ಲಿ.
  9. ಶಿವರಾಜ್‌ಕುಮಾರ್ ಕಪ್ಪು ಕೋಟು ತೆಗೆದಿಟ್ಟು, ಲಾಯರ್ ಕೆಲಸ ಬದಿಗಿಟ್ಟು ಲಾಂಗ್ ಹಿಡಿದ ನಂತರವೇ ಸಿನಿಮಾದಲ್ಲಿ ಮಾಸ್ ಎಲಿಮೆಂಟ್ ಕಾಣಿಸೋದು.
  10. ‘ಕಾವಲಿಗ..’ ಹಾಡು ಫಸ್ಟ್ ಹಾಫ್‌ನಲ್ಲಿ ಇದೆ. ಭೈರತಿ ರಣಗಲ್ ಟೈಟಲ್ ಸಾಂಗ್‌ ನೋಡಲು ಸೆಕೆಂಡ್ ಹಾಫ್‌ಗೆ ಕಾಯಬೇಕು. ಮೊದಲಾರ್ಧದ ಒಟ್ಟಾರೆ ನರೇಷನ್ ತುಸು ಸ್ಲೋ ಆಗಿದೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:18 am, Fri, 15 November 24