Ghost First Half Review: ಹೈಪ್​ಗೆ ತಕ್ಕಂತೆ ಮೂಡಿಬಂದಿದೆಯಾ ‘ಘೋಸ್ಟ್​’? ಇಲ್ಲಿದೆ ಫಸ್ಟ್​ ಹಾಫ್​ ರಿಪೋರ್ಟ್​

| Updated By: ರಾಜೇಶ್ ದುಗ್ಗುಮನೆ

Updated on: Oct 19, 2023 | 11:39 AM

Ghost Review: ‘ಘೋಸ್ಟ್​’ ಬಿಡುಗಡೆಗೂ ಮುನ್ನ ಸಾಕಷ್ಟು ಹೈಪ್​ ಸೃಷ್ಟಿ ಮಾಡಿತ್ತು. ಹಾಗಾದ್ರೆ ಆ ಹೈಪ್​ಗೆ ತಕ್ಕಂತೆ ಸಿನಿಮಾ ಮೂಡಿಬಂದಿದೆಯಾ ಎಂಬ ಪ್ರಶ್ನೆ ಎಲ್ಲ ಸಿನಿಪ್ರಿಯರ ಮನದಲ್ಲಿ ಇದೆ. ಆ ಪ್ರಶ್ನೆಗೆ ಉತ್ತರ ಪಡೆಯುವ ಸಮಯ ಈಗ ಬಂದಿದೆ. ಈ ಬಹುನಿರೀಕ್ಷಿತ ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Ghost First Half Review: ಹೈಪ್​ಗೆ ತಕ್ಕಂತೆ ಮೂಡಿಬಂದಿದೆಯಾ ‘ಘೋಸ್ಟ್​’? ಇಲ್ಲಿದೆ ಫಸ್ಟ್​ ಹಾಫ್​ ರಿಪೋರ್ಟ್​
ಶಿವರಾಜ್​ಕುಮಾರ್​
Follow us on

ನಟ, ನಿರ್ದೇಶಕ ಶ್ರೀನಿ ಅವರು ‘ಘೋಸ್ಟ್​’ ಸಿನಿಮಾಗೆ (Ghost Movie) ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಸಿನಿಮಾ ಇಂದು (ಅಕ್ಟೋಬರ್​ 19) ದೊಡ್ಡ ಮಟ್ಟದಲ್ಲಿ ರಿಲೀಸ್​ ಆಗಿದೆ. ಅಭಿಮಾನಿಗಳು ಅದ್ದೂರಿಯಾಗಿ ಈ ಚಿತ್ರವನ್ನು ಬರಮಾಡಿಕೊಂಡಿದ್ದಾರೆ. ಶಿವರಾಜ್​ಕುಮಾರ್​ (Shivarajkumar), ಅನುಪಮ್​ ಖೇರ್​, ಜಯರಾಂ, ಅರ್ಚನಾ ಜೋಯಿಸ್​ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಘೋಸ್ಟ್​’ ಬಿಡುಗಡೆಗೂ ಮುನ್ನ ಸಾಕಷ್ಟು ಹೈಪ್​ ಸೃಷ್ಟಿ ಮಾಡಿತ್ತು. ಎಲ್ಲೆಲ್ಲೂ ಈ ಸಿನಿಮಾದ ಸದ್ದೇ ಕೇಳಿಬರುತ್ತಿತ್ತು. ಹಾಗಾದ್ರೆ ಆ ಹೈಪ್​ಗೆ ತಕ್ಕಂತೆ ಸಿನಿಮಾ ಮೂಡಿಬಂದಿದೆಯಾ ಎಂಬ ಪ್ರಶ್ನೆ ಎಲ್ಲ ಸಿನಿಪ್ರಿಯರ ಮನದಲ್ಲಿ ಇದೆ. ಆ ಪ್ರಶ್ನೆಗೆ ಉತ್ತರ ಪಡೆಯುವ ಸಮಯ ಈಗ ಬಂದಿದೆ. ‘ಘೋಸ್ಟ್​’ ಸಿನಿಮಾದ ಮೊದಲಾರ್ಧದಲ್ಲಿ (Ghost Movie First Half) ಏನೆಲ್ಲ ಇದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

  1. ಜೈಲು ಹೈಜಾಕ್‌ನ ಥ್ರಿಲ್ಲಿಂಗ್ ಘಟನೆ ಮೂಲಕ ಶುರುವಾಗುವ ಘೋಸ್ಟ್ ಕಹಾನಿ. ಚುರುಕಾಗಿ ಸಾಗುತ್ತದೆ ಚಿತ್ರಕಥೆ.
  2. ಭರ್ಜರಿ ಫೈಟ್ ಸೀನ್‌ನಿಂದ ಶಿವರಾಜ್‌ಕುಮಾರ್ ಎಂಟ್ರಿ. ಅಭಿಮಾನಿಗಳಿಗೆ ಕಿಕ್‌ ನೀಡುತ್ತೆ ಈ ದೃಶ್ಯ.
  3. ಫಸ್ಟ್ ಹಾಫ್‌ನಲ್ಲಿ ಹೆಚ್ಚು ಸ್ಕ್ರೀನ್‌ಸ್ಪೇಸ್ ಪಡೆದುಕೊಂಡಿದ್ದಾರೆ ನಟ ಜಯರಾಂ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅವರು ಮಿಂಚಿದ್ದಾರೆ.
  4. ಬಿಡುಗಡೆಗೂ ಮುನ್ನ ಧೂಳೆಬ್ಬಿಸಿತ್ತು ಒಜಿಎಂ ಸಾಂಗ್. ಇದನ್ನು ಬಿಗ್ ಸ್ಕ್ರೀನ್‌ನಲ್ಲಿ ನೋಡೋಕೆ ಕಾದಿದ್ದ ಪ್ರೇಕ್ಷಕರಿಗೆ ಫಸ್ಟ್ ಹಾಫ್‌ನಲ್ಲಿ ಸಿಗುತ್ತೆ ಈ ಸೀನ್.
  5. 10 ವರ್ಷದ ಫ್ಲ್ಯಾಶ್‌ಬ್ಯಾಕ್ ಕಥೆಯ ಜೊತೆಗೆ ಪ್ರಸ್ತುತ ಕಾಲಘಟ್ಟದ ಕಥೆ ಕೂಡ ತೆರೆದುಕೊಳ್ಳುತ್ತೆ. ಗಮನ ಬೇರೆಕಡೆ ಹರಿಸಿದರೆ ಗೊಂದಲ ಗ್ಯಾರಂಟಿ.
  6. ಥ್ರಿಲಿಂಗ್ ಕಥೆಗೆ ತಕ್ಕಂತೆ ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇದು ಈ ಸಿನಿಮಾದ ಪ್ಲಸ್ ಪಾಯಿಂಟ್.
  7. ಮೊದಲಾರ್ಧದ ಬಹುತೇಕ ಕಥೆ ನಡೆಯೋದು ಒಂದೇ ಒಂದು ಜೈಲಿನಲ್ಲಿ. ಫ್ಲಾಶ್ ಬ್ಯಾಕ್‌ನ ಕೆಲವೇ ದೃಶ್ಯಗಳು ಮಾತ್ರ ಬೇರೆ ಲೊಕೇಶನ್‌ಗಳಲ್ಲಿ ನಡೆಯುತ್ತವೆ.‌
  8. ಈ ಘೋಸ್ಟ್ ಯಾರು? ಆತ ಜೈಲ್ ಹೈಜಾಕ್ ಮಾಡೋಕೆ ಕಾರಣ ಏನು ಅನ್ನೋದನ್ನ ಸೆಕೆಂಡ್ ಹಾಫ್‌ನಲ್ಲೆ ತಿಳಿಯಬೇಕು.
  9. ಆ್ಯಕ್ಷನ್ ಮತ್ತು ಥ್ರಿಲಿಂಗ್ ದೃಶ್ಯಗಳ ಜೊತೆ ಜೊತೆಗೆ ಸ್ವಲ್ಪ ಪ್ರಮಾಣದ ಸೆಂಟಿಮೆಂಟ್ ಕೂಡ ಬೆರೆಸಿದ್ದಾರೆ ನಿರ್ದೇಶಕ ಶ್ರೀನಿ.
  10. ಎಲ್ಲಿಯೂ ಟೈಮ್ ವೇಸ್ಟ್ ಮಾಡದೇ ಫಸ್ಟ್ ಹಾಫ್ ಕಥೆ ಪಟಪಟನೆ ಸಾಗುತ್ತದೆ. ಫ್ಯಾನ್ಸ್ ನಿರೀಕ್ಷೆಗೆ ತಕ್ಕಂತೆ ಮೊದಲಾರ್ಧ ಮೂಡಿಬಂದಿದೆ.
  11. ಟಿವಿ ರಿಪೋರ್ಟರ್ ಪಾತ್ರದಲ್ಲಿ ಕೆಜಿಎಫ್ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಕಾಣಿಸಿಕೊಂಡಿದ್ದಾರೆ. ಅವರು ಕಾಣಿಸಿಕೊಳ್ಳುವ ದೃಶ್ಯಗಳಲ್ಲಿ ಸೆಂಟಿಮೆಂಟ್ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.